For the best experience, open
https://m.bcsuddi.com
on your mobile browser.
Advertisement

ಹೊಸ ಐಫೋನ್‌ ಖರೀದಿಗೆ‌ ಮುಗಿಬಿದ್ದ ಜನ – ಈ ಫೋನ್ ನಲ್ಲಿ ಅಂಥಾದ್ದೇನಿದೆ?

05:52 PM Sep 23, 2023 IST | Bcsuddi
ಹೊಸ ಐಫೋನ್‌ ಖರೀದಿಗೆ‌ ಮುಗಿಬಿದ್ದ ಜನ – ಈ ಫೋನ್ ನಲ್ಲಿ ಅಂಥಾದ್ದೇನಿದೆ
Advertisement

ಬಹುನಿರೀಕ್ಷಿತ ಐಫೋನ್ 15 ಸೀರಿಸ್‌ನ ಮಾರಾಟ ಭಾರತದಲ್ಲಿ ಪ್ರಾರಂಭವಾಗಿದ್ದು, ನೂರಾರು ಐಫೋನ್ ಪ್ರಿಯರು ಆ್ಯಪಲ್‌ ಸ್ಟೋರ್‌ಗಳಲ್ಲಿ ಹೊಸ ಫೋನ್‌ ಖರೀದಿಗಾಗಿ ಮುಗಿ ಬಿದ್ದಿದ್ದಾರೆ. ಮುಂಬಯಿ, ದೆಹಲಿಯ ಆ್ಯಪಲ್ ಸ್ಟೋರ್‌ಗಳು ಗ್ರಾಹಕರಿಂದ ತುಂಬಿ ತುಳುಕುತಿತ್ತು.

ಸೆಪ್ಟೆಂಬರ್ 12ರಂದು ಬಿಡುಗಡೆಯಾದ ಐಫೋನ್ 15 ಸೀರಿಸ್ ಗೆ ಸೆಪ್ಟೆಂಬರ್ 15ರಿಂದ ಪ್ರೀ ಬುಕ್ಕಿಂಗ್ ಆರಂಭವಾಗಿತ್ತು. ಭಾರತದ ಐಫೋನ್ 15 ಮಾರಾಟವನ್ನು ಕಾಯುತ್ತಿದ್ದ ಗ್ರಾಹಕರು ಶುಕ್ರವಾರ ಬೆಳಗ್ಗೆಯೇ ಆ್ಯಪಲ್ ಸ್ಟೋರ್‌ಗಳಲ್ಲಿ ಬೆಳಗ್ಗೆ 8 ಗಂಟೆಯಿಂದಲೇ ಸರತಿಯಲ್ಲಿ ನಿಂತು ಕಾಯುತ್ತಿದ್ದರು.

ಮೊದಲೇ ಬುಕ್‌ ಮಾಡಿದ ಗ್ರಾಹಕರು ಪೂರ್ತಿ ಹಣ ಪಾವತಿ ಮಾಡಿ ಐಫೋನ್‌ 15 ಅನ್ನು ಖರೀದಿಸಿದ್ದಾರೆ. ಆ್ಯಪಲ್‌ ಸ್ಟೋರ್‌ ಗಳಲ್ಲಿ ಗ್ರಾಹಕರ ಜಾತ್ರೆಯೇ ನೆರೆದಿದ್ದು, ಕೆಲವರಂತೂ 17 ಗಂಟೆಗಳಿಗಿಂತಲೂ ಹೆಚ್ಚು ಕಾಲ ಸರತಿಯಲ್ಲಿ ನಿಂತು ಐಫೋನ್‌ 15 ಖರೀದಿಸಿರುವ ಖುಷಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Advertisement

5 ಬಣ್ಣಗಳಲ್ಲಿ ಪರಿಚಯಿಸಲಾಗಿರುವ ಸದ್ಯ ಐಫೋನ್‌ 15 ಗುಲಾಬಿ, ಹಳದಿ, ಹಸಿರು, ನೀಲಿ ಮತ್ತು ಕಪ್ಪು ಬಣ್ಣಗಳಲ್ಲಿ ಗ್ರಾಹಕರನ್ನು ಸೆಳೆಯುತ್ತಿದೆ.

ಐಫೋನ್ 15ರ ದರ 128GB: ₹ 79,900, 256GB: ₹89,900 ಹಾಗೂ 512GB: ₹1,09,900 ನಲ್ಲಿ ಲಭ್ಯವಿದೆ.
ಇನ್ನು ಐಫೋನ್ 15 ಪ್ಲಸ್ 128GB: ₹89,900, 256GB: ₹99,900 ಹಾಗೂ 512GB: ₹1,19,900 ನಲ್ಲಿ ಲಭ್ಯವಾಗುತ್ತಿದೆ.
ಐಫೋನ್​ 15 ಪ್ರೊ 128GB: ₹1,34,900, 256GB: ₹1,44,900, 512GB: ₹1,64,900 ಹಾಗೂ 1TB: ₹1,84,900 ಹಾಗೂ ಐಫೋನ್​ 15 ಪ್ರೊ ಮ್ಯಾಕ್ಸ್​ 256GB: ₹1,59,900, 512GB: ₹1,79,900 ಹಾಗೂ 1TB: ₹1,99,900 ನಲ್ಲಿ ಲಭ್ಯವಿದೆ.

Author Image

Advertisement