For the best experience, open
https://m.bcsuddi.com
on your mobile browser.
Advertisement

ಹೈಕೋರ್ಟ್‌ ಹಾಲ್‌ನಲ್ಲಿ ಜಡ್ಜ್‌ ಮುಂದೆಯೇ ಆತ್ಮಹತ್ಯೆಗೆ ಯತ್ನ

03:34 PM Apr 03, 2024 IST | Bcsuddi
ಹೈಕೋರ್ಟ್‌ ಹಾಲ್‌ನಲ್ಲಿ ಜಡ್ಜ್‌ ಮುಂದೆಯೇ ಆತ್ಮಹತ್ಯೆಗೆ ಯತ್ನ
Advertisement

ಬೆಂಗಳೂರು: ನ್ಯಾಯಾಧೀಶರ ಮುಂದೆಯೇ ವ್ಯಕ್ತಿಯೋರ್ವ ಆಹ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನ ಹೈಕೋರ್ಟ್ ಹಾಲ್‌ನಲ್ಲಿ ನಡೆದಿದೆ. ಮುಖ್ಯ ವಿಭಾಗೀಯ ಪೀಠದಲ್ಲಿ ವ್ಯಕ್ತಿಯೊಬ್ಬ ರೇಜರ್ ಬ್ಲೇಡ್‌ನಿಂದ ಕುತ್ತಿಗೆ ಕೊಯ್ದುಕೊಳ್ಳಲು ಯತ್ನಿಸಿದ್ದಾನೆ.

ಕೂಡಲೇ ಆ ವ್ಯಕ್ತಿಯನ್ನು ವೈದ್ಯರ ಬಳಿ ಕರೆದುಕೊಂಡು ಹೋಗಲು ನ್ಯಾಯ ಪೀಠ ಸೂಚನೆ ನೀಡಿದೆ. ಹೈಕೋರ್ಟ್ ಹಾಲ್‌ನಲ್ಲಿ ತನಗೆ ನ್ಯಾಯ ಕೊಡಿ ಎಂದು ಕೂಗಾಡಿದ ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿದ್ದ.

ಈ ಘಟನೆಗೆ ಬೇಸರ ವ್ಯಕ್ತಪಡಿಸಿರುವ ಜಡ್ಜ್‌, ಹೈಕೋರ್ಟ್‌ ಹಾಲ್‌ಗೆ ಆ ವ್ಯಕ್ತಿ ರೇಜರ್ ಬ್ರೇಡ್ ಹೇಗೆ ಒಳಗೆ ತಂದ ಎಂದು ಪ್ರಶ್ನಿಸಿದೆ. ಆತ್ಮಹತ್ಯೆ ಯತ್ನದ ಹಿನ್ನೆಲೆಯಲ್ಲಿ ಹೈಕೋರ್ಟ್ ವಿಭಾಗೀಯ ಪೀಠ ಕಲಾಪವನ್ನು ಮುಂದೂಡಿಕೆ ಮಾಡಿದ್ದು, ಗಾಯಾಳುವಿನ ಬಗ್ಗೆ ಮಾಹಿತಿ ನೀಡಲು ರಿಜಿಸ್ಟ್ರಾರ್ ಜನರಲ್‌ಗೆ ಸೂಚನೆ ನೀಡಿದೆ.

Advertisement

Author Image

Advertisement