ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಹೈಕೋರ್ಟ್ ಅಡ್ವೋಕೇಟ್‌ ಚೈತ್ರಾ ಗೌಡ ಆತ್ಮಹತ್ಯೆ ಪ್ರಕರಣ ಸಿಸಿಬಿ ಹೆಗಲಿಗೆ

09:37 AM May 30, 2024 IST | Bcsuddi
Advertisement

ಬೆಂಗಳೂರು: ಹೈಕೋರ್ಟ್ ಅಡ್ವೋಕೇಟ್‌ ಕೆಐಎಡಿಬಿ ಅಧಿಕಾರಿ ಪತ್ನಿ ಚೈತ್ರಾ ಆತ್ಮಹತ್ಯೆ ಪ್ರಕರಣದ ತನಿಖೆಯನ್ನ ಸಿಸಿಬಿ ಹೆಗಲಿಗೆ ವಹಿಸಲಾಗಿದೆ. ಹಲವು ಅನುಮಾನಗಳ ನಡುವೆ ಆತ್ಮಹತ್ಯೆ ಪ್ರಕರಣ ಸಿಸಿಬಿ ಗೆ ವರ್ಗಾವಣೆಯಾಗಿದ್ದು, ಕಳೆದ ಮೇ 11 ಸಂಜಯನಗರ ಠಾಣಾ ವ್ಯಾಪ್ತಿಯಲ್ಲಿ ಚೈತ್ರಾ ಆತ್ಮಹತ್ಯೆ ಮಾಡಿಕೊಂಡಿದ್ರು. ಹೌದು ಕೆಐಎಡಿಬಿ ಅಧಿಕಾರಿ ಶಿವಕುಮಾರ್ ಪತ್ನಿಯಾಗಿದ್ದ ಚೈತ್ರಾ ಗೌಡ ಹೈಕೋರ್ಟ್ ವಕೀಲೆ ಜೊತೆಗೆ ಮಾಡಲಿಂಗ್ ನಲ್ಲೂ ಸಹ ಸಕ್ರಿಯರಾಗಿದ್ರು. ಈ ಸಾವು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು. ಈ ಹಿನ್ನೆಲೆ ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ರಿಂದ ಪ್ರಕರಣವನ್ನ ಸಿಸಿಬಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಬೆಂಗಳೂರು ವಕೀಲರ ಸಂಘದಿಂದ ಸಹ ಪೊಲೀಸ್ ಕಮಿಷನರ್ ಹಾಗೂ ಉತ್ತರ ವಿಭಾಗದ ಡಿಸಿಪಿಗೆ ಪತ್ರ ಬರೆದಿದ್ರು. ಚೈತ್ರಾ ಅತ್ಯಂತ ದಿಟ್ಟ ಮಹಿಳೆ ಹಾಗೂ ಧೈರ್ಯವಂತೆ ಆಗಿದ್ದಳು. ಚೈತ್ರಾ ಕೇವಲ ವಕೀಲೆ ಅಷ್ಟೇ ಅಲ್ಲ ಒಳ್ಳೆಯ ಬ್ಯಾಡ್ ಮಿಟನ್ ಪ್ಲೆಯರ್ ಆಗಿದ್ರು. ಆಕೆ ಆತ್ಮಹತ್ಯೆ ಮಾಡಿಕೊಂಡಿರೋ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಇನ್ನು ಚೈತ್ರಾ ಖಿನ್ನತೆಗೆ ಒಳಗಾಗಿರೋದಾಗಿ ತನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ರು. ಸದ್ಯ ಪ್ರಕರಣ ವರ್ಗಾವಣೆಯಾಗುತ್ತಿದ್ದಂತೆ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಚೈತ್ರಾ ಜೊತೆಗೆ ಮಾತನಾಡಿರುವ ವ್ಯಕ್ತಿಗಳ ಕಾಲ್ ಲಿಸ್ಟ್ ತೆಗೆಯಲು ಮುಂದಾಗಿದೆ. ಜೊತೆಗೆ ಚೈತ್ರಾ ಮೊಬೈಲ್ ಲಾಕ್ ಆಗಿದ್ದು ಅದನ್ನೂ ಓಪನ್ ಮಾಡಲು ಮುಂದಾಗುವುದರ ಜೊತೆಗೆ ಚೈತ್ರಾ ಸಾವಿನ ಹಿಂದಿನ 15 ದಿನಗಳ ಸಿಸಿಟಿವಿ ಪರಿಶೀಲನೆಗೂ ಮುಂದಾಗಿದೆ. ಸದ್ಯ ಚೈತ್ರಾ ಮೃತದೇಹದ ಮರಣೋತ್ತರ ಪರೀಕ್ಷೆಯ ರಿಪೋರ್ಟ್‌ಗಾಗಿ ಸಿಸಿಬಿ ಕಾದುಕುಳಿತಿದೆ.‌ಮರಣೋತ್ತರ ಪರೀಕ್ಷೆಯ ರಿಪೋರ್ಟ್ ಬಂದ ನಂತರ ಚೈತ್ರಾ ಸಾವಿನ ಹಿಂದಿನ ರಹಸ್ಯ ಭೇದಿಸಲು ಸಿಸಿಬಿ ಸಜ್ಜಾಗಲಿದೆ.

Advertisement

Advertisement
Next Article