ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಹೃದಯ ವಿದ್ರಾವಕ ಘಟನೆ - ಒಂದೂವರೆ ತಿಂಗಳ ಮಗುವಿಗೆ 40 ಕ್ಕೂ ಹೆಚ್ಚು ಬಾರಿ ಬಿಸಿ ಕಬ್ಬಿಣದ ರಾಡ್‌ನಿಂದ ಬರೆ

01:22 PM Nov 22, 2023 IST | Bcsuddi
Advertisement

ಶಾಹದೋಲ್ : ಮಧ್ಯ ಪ್ರದೇಶದ ಶಾಹದೋಲ್‌ ಜಿಲ್ಲೆಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ನ್ಯುಮೋನಿಯಾಕ್ಕೆ ಚಿಕಿತ್ಸೆ ಎಂದು ಒಂದೂವರೆ ತಿಂಗಳ ಮಗುವಿಗೆ 40 ಕ್ಕೂ ಹೆಚ್ಚು ಬಾರಿ ಬಿಸಿ ಕಬ್ಬಿಣದ ರಾಡ್‌ನಿಂದ ಬರೆ ಹಾಕಲಾಗಿದೆ. ಮಗುವಿನ ಸ್ಥಿತಿ ಹದಗೆಟ್ಟಿದ್ದು, ಆಸ್ಪತ್ರೆಗೆ ದಾಖಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ವೈದ್ಯರ ಪ್ರಕಾರ, ಮಗುವಿನ ಕುತ್ತಿಗೆ, ಹೊಟ್ಟೆ ಮತ್ತು ದೇಹದ ಇತರ ಭಾಗಗಳಲ್ಲಿ 40 ಕ್ಕೂ ಹೆಚ್ಚು ಗಾಯದ ಗುರುತುಗಳು ಕಂಡುಬಂದಿವೆ. ಮಗುವಿನ ಕುಟುಂಬ ಹಾರ್ಡಿ ಗ್ರಾಮದ ನಿವಾಸಿಗಳು. ನವೆಂಬರ್ 4 ರಂದು ನ್ಯುಮೋನಿಯಾ ಚಿಕಿತ್ಸೆಗಾಗಿ ಮಗುವಿನ ದೇಹವನ್ನು ಬಿಸಿ ಕಬ್ಬಿಣದ ರಾಡ್‌ನಿಂದ 40 ಕ್ಕೂ ಹೆಚ್ಚು ಬಾರಿ ಚುಚ್ಚಿದ್ದಾರೆ.

Advertisement

Advertisement
Next Article