For the best experience, open
https://m.bcsuddi.com
on your mobile browser.
Advertisement

ಹಿಜಾಬ್, ಸಾನಿಯಾ ಮಿರ್ಜಾ ಸ್ಕರ್ಟ್ ಬಿಟ್ಟು ಮುಸ್ಲಿಂರು ಶಿಕ್ಷಣದ ಕಡೆ ಗಮನ ಹರಿಸಬೇಕು - ನಟ ನಾಸಿರುದ್ದೀನ್ ಶಾ

11:37 AM Jun 12, 2024 IST | Bcsuddi
ಹಿಜಾಬ್  ಸಾನಿಯಾ ಮಿರ್ಜಾ ಸ್ಕರ್ಟ್ ಬಿಟ್ಟು ಮುಸ್ಲಿಂರು ಶಿಕ್ಷಣದ ಕಡೆ ಗಮನ ಹರಿಸಬೇಕು   ನಟ ನಾಸಿರುದ್ದೀನ್ ಶಾ
Advertisement

ನವದೆಹಲಿ : ದೇಶದ ಮುಸ್ಲಿಮರು ಮದರಸಾ ಅಂತ ಯಾವುದೇ ಕಟ್ಟುಪಾಡುಗಳಿಗೆ ಕಟ್ಟುಬೀಳದೆ, ಈ ಆಧುನಿಕ ಜಗತ್ತಿನಲ್ಲಿ ತಮ್ಮ ಬೌದ್ಧಿಕ ಬೆಳವಣಿಗೆ ಕಡೆ ಗಮನ ವಹಿಸಬೇಕೆಂದು ಸಲಹೆ ನೀಡಿರುವ ಬಾಲಿವುಡ್​ ಹಿರಿಯ ನಟ ನಾಸಿರುದ್ದೀನ್ ಶಾ, ಪ್ರಧಾನಿ ಮೋದಿ ಅಧಿಕಾರಕ್ಕೂ ಬರುವ ಮುನ್ನವೇ ಈ ದೇಶದಲ್ಲಿ ಸಾಕಷ್ಟು ತಪ್ಪುಗಳು ನಡೆದಿವೆ ಎಂದಿದ್ದಾರೆ. ಮೋದಿ ಸರ್ಕಾರದಲ್ಲಿ ಮುಸ್ಲಿಮರನ್ನು ಕಡೆಗಣಿಸಲಾಗುತ್ತಿದೆ ಎಂಬ ಚರ್ಚೆಯ ನಡುವೆ ನಾಸಿರುದ್ದೀನ್ ಶಾ ಅವರ ಸಲಹೆ ಮಹತ್ವ ಪಡೆದುಕೊಂಡಿದೆ. ಖಾಸಗಿ ​ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನಾಸಿರುದ್ದೀನ್ ಶಾ, ಮುಸ್ಲಿಮರು ಹಿಜಾಬ್​ ಮತ್ತು ಸಾನಿಯಾ ಮಿರ್ಜಾರ ಸ್ಕರ್ಟ್​ನ ಉದ್ದದ​ ಬಗ್ಗೆಯೇ ಸದಾ ಚಿಂತಿಸುತ್ತಾರೆ. ಅದನ್ನು ಬಿಟ್ಟು ಶಿಕ್ಷಣದ ಕಡೆ ಗಮನ ಹರಿಸಬೇಕು ಹಾಗೂ ಮದರಸಾಗಳ ಬದಲಾಗಿ ಪ್ರಬುದ್ಧತೆ ಮತ್ತು ಆಧುನಿಕ ಕಲ್ಪನೆಯನ್ನು ಬೆಳಸಿಕೊಳ್ಳಬೇಕು ಎಂದು ಮಹತ್ವದ ಸಲಹೆಯನ್ನು ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಬಗ್ಗೆ ಮಾತನಾಡಿದ ನಾಸಿರುದ್ದೀನ್ ಶಾ, ಮೋದಿಯನ್ನು ವಿರೋಧಿಸುವುದು ತುಂಬಾ ಸುಲಭ. ಆದರೆ, ಮೋದಿ ಬರುವುದಕ್ಕೂ ಮುಂಚೆಯೇ ಈ ದೇಶದಲ್ಲಿ ಸಾಕಷ್ಟು ತಪ್ಪುಗಳು ನಡೆದಿದ್ದವು. ನಮ್ಮ ದೇಶದಲ್ಲಿ ಯಾವಾಗಲೂ ಧರ್ಮಗಳ ನಡುವಿನ ದ್ವೇಷದ ಒಳಹರಿವು ಇದೆ ಎಂದು ವಾಸ್ತವಾಂಶವನ್ನು ತೆರೆದಿಟ್ಟರು.

Author Image

Advertisement