For the best experience, open
https://m.bcsuddi.com
on your mobile browser.
Advertisement

ಹಿಂದೂ ಸಂಪ್ರದಾಯದಂತೆ ನೆದರ್ಲ್ಯಾಂಡ್‌ ಗೆಳತಿಯನ್ನು ವರಿಸಿದ ಯುಪಿ ಯುವಕ

10:47 AM Dec 02, 2023 IST | Bcsuddi
ಹಿಂದೂ ಸಂಪ್ರದಾಯದಂತೆ ನೆದರ್ಲ್ಯಾಂಡ್‌ ಗೆಳತಿಯನ್ನು ವರಿಸಿದ ಯುಪಿ ಯುವಕ
Advertisement

ಲಕ್ನೋ : ಉತ್ತರ ಪ್ರದೇಶ ಮೂಲದ ಯುವಕನೊಬ್ಬ ನೆದರ್ಲ್ಯಾಂ ಡ್ ಮೂಲದ ಯುವತಿಯನ್ನು ಪ್ರೀತಿಸಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದಾರೆ.

ಉತ್ತರ ಪ್ರದೇಶದ ಫತೇಪುರದ ಹಳ್ಳಿಯ ಹಾರ್ದಿಕ್ ವರ್ಮಾ(32) ಕೆಲಸದ ನಿಮಿತ್ತ ನೆದರ್ಲ್ಯಾಂಡ್‌ ತೆರಳಿದ್ದರು.ಅಲ್ಲಿ ಫಾರ್ಮಾಸ್ಯುಟಿಕಲ್ ಕಂಪನಿಯಲ್ಲಿ ಮೇಲ್ವಿಚಾರಕರಾಗಿ ಕೆಲಸವನ್ನು ಪಡೆದುಕೊಂಡಿದ್ದರು. ಈ ವೇಳೆ ಅದೇ ಕಂಪೆನಿಯಲ್ಲಿದ್ದ ನೆದರ್ಲ್ಯಾಂಡ್ ಮೂಲದ ಗೇಬ್ರಿಯೆಲಾ ದುಡಾ(21) ಅವರ ಪರಿಚಯವಾಗಿದೆ.

ಪ್ರತಿನಿತ್ಯ ಕೆಲಸ ಮಾಡುತ್ತಾ, ಆತ್ಮೀ ಯತೆಯಲ್ಲಿ ಇದ್ದ ಇಬ್ಬರಲ್ಲಿ ಪ್ರೀ ತಿ ಹುಟ್ಟಿದೆ. ಹಾರ್ದಿಕ್ ಅವರು ತನ್ನ ಪ್ರೀ ತಿಯನ್ನು ಮೊದಲು ಗೇಬ್ರಿಯೆಲಾ ಅವರಲ್ಲಿ ವ್ಯಕ್ತಪಡಿಸಿದ್ದಾರೆ. ಅವರು ಕೂಡ ಹಾರ್ದಿಕ್ ಅವರನ್ನು ಇಷ್ಟಪಟಿದ್ದಾರೆ. ಮೂರು ವರ್ಷ ದಿಂದ ಪ್ರೀತಿಸಿದ ಇಬ್ಬರು ಮದುವೆಯಾಗಲು ಕಳೆದ ವಾರ ಭಾರತಕ್ಕೆ ಬಂದಿದ್ದಾರೆ.

Advertisement

ಕುಟುಂಬದವರ ಒಪ್ಪಿಗೆ ಪಡೆದು ಬುಧವಾರ(ನ.29) ಹಿಂದೂ ಸಂಪ್ರದಾಯದಂತೆ ಎಲ್ಲಾ ವೈವಾಹಿಕ ವಿಧಿಗಳನ್ನುಪೂರ್ಣಗೊಳಿಸಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

Author Image

Advertisement