For the best experience, open
https://m.bcsuddi.com
on your mobile browser.
Advertisement

ಹಿಂದೂ ಯುವಕನೊಂದಿಗೆ ಎಂಗೇಜ್ ಆದ ಉರ್ಫಿ ಜಾವೇದ್…!

03:41 PM Oct 04, 2023 IST | Bcsuddi
ಹಿಂದೂ ಯುವಕನೊಂದಿಗೆ ಎಂಗೇಜ್ ಆದ ಉರ್ಫಿ ಜಾವೇದ್…
Advertisement

ಮುಂಬೈ : ಬಿಗ್ ಬಾಸ್ ಒಟಿಟಿ ಮೂಲಕ ಹೆಚ್ಚು ಹೆಸರು ಪಡೆದ ಈ ಉರ್ಫಿ ಜಾವೇದ್ ತಮ್ಮ ಡ್ರೆಸ್ಸಿಂಗ್ ಸೆನ್ಸ್‌ನಿಂದ ಮಾತ್ರವಲ್ಲದೆ ತನ್ನ ಸಂಪಾದನೆಯ ಕಾರಣದಿಂದ ಕೂಡ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಇದೀಗ, ಉರ್ಫಿ ಜಾವೇದ್ ದೇವಸ್ಥಾನದಲ್ಲಿ ಸದ್ದಿಲ್ಲದೆ ಎಂಗೇಜ್‌ ಮೆಂಟ್‌ ಮಾಡಿಕೊಂಡ್ರಾ? ಎಂಬ ಪ್ರಶ್ನೆ ಸಹಜವಾಗಿ ಅಭಿಮಾನಿಗಳನ್ನು ಕಾಡುತ್ತಿದೆ.

ತಮ್ಮ ಔಟ್‌ಫಿಟ್‌ಗಳ ವಿಚಾರಕ್ಕೆ ಹೆಚ್ಚು ಸುದ್ದಿಯಲ್ಲಿರುವ ಉರ್ಫಿ ಜಾವೇದ್ ಯಾವುದೇ ಡ್ರೆಸ್ ತೊಟ್ಟರೂ ಟ್ರೋಲ್ ಆಗುವುದು ಸಹಜ. ಅಷ್ಟೇ ಅಲ್ಲ. ಯಾರೇನೇ ಟ್ರೋಲ್ ಮಾಡಿದರು ಕೂಡ ಕ್ಯಾರೇ ಎನ್ನದೆ ಟ್ರೊಲ್ ಆಗುವ ರೀತಿಯಲ್ಲೇ ಪ್ರತಿಬಾರಿ ವಿಚಿತ್ರ ಉಡುಗೆಗಳನ್ನು ಧರಿಸಿ ಉರ್ಫಿ ಕ್ಯಾಮರಾಗೆ ಪೋಸ್ ಕೊಡುತ್ತಾರೆ.ನಟಿ ಉರ್ಫಿ ಜಾವೇದ್ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಾಗುವುದು ಕಾಮನ್. ಇದೀಗ ಹೊಸ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ. ನಟಿ ಉರ್ಫಿ ಸದ್ದಿಲ್ಲದೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಬಿ-ಟೌನ್ ಅಂಗಳದಲ್ಲಿ ಕೇಳಿಬರುತ್ತಿದೆ. ಇದಕ್ಕೆ ಇಂಬು ನೀಡುವಂತೆ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಉರ್ಫಿ ಜಾವೇದ್‌ ಅವರು ದೇವಸ್ಥಾನವೊಂದರಲ್ಲಿ ಹುಡುಗನ ಜೊತೆ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

Advertisement
Author Image

Advertisement