ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಹಾಸನ: ಕಲ್ಯಾಣ ಮಂಟಪಕ್ಕೆ ನುಗ್ಗಿ 'ಮಂಗನ ಕೀಟಲೆ '- ಮಂಟಪದ ತುಂಬೆಲ್ಲಾ ಓಡಾಡಿದ 'ಬೀಗರು'

06:38 PM Jul 02, 2024 IST | Bcsuddi
Advertisement

ಹಾಸನ: ಕಲ್ಯಾಣಮಂಟಪಕ್ಕೆ ನುಗ್ಗಿದ ಮಂಗವೊಂದು ವರನ ಪಕ್ಕ ಕುಳಿತು ಕಾಟ ಕೊಟ್ಟಿದ್ದಲ್ಲದೆ ಮದುವೆಗೆ ಆಗಮಿಸಿದ್ದ ಜನರಿಗೆ ಕಚ್ಚಿ ಹಾವಳಿ ಸೃಷ್ಟಿಸಿದೆ.

Advertisement

'ಮಂಗನ ಕೀಟಲೆಗೆ ಬಂದ ಬೀಗರು ಅಲ್ಲಿಇಲ್ಲಿ ಓಡಾಡಿದ ಪ್ರಸಂಗ ಕಂಡುಬಂದಿದೆ. ಈ ಘಟನೆ ಚನ್ನರಾಯಪಟ್ಟಣ ತಾಲ್ಲೂಕಿನ, ಹಿರೀಸಾವೆಯಲ್ಲಿ ನಿನ್ನೆ ನಡೆದಿದೆ. ಹಿರೀಸಾವೆಯ-ನುಗ್ಗೆಹಳ್ಳಿ ರಸ್ತೆಯಲ್ಲಿರುವ ಕಲ್ಯಾಣಮಂಟಪಕ್ಕೆ ನುಗ್ಗಿದ ಮಂಗ ಕೆಲ ಹೊತ್ತು ವರನ ಪಕ್ಕ ಕುಳಿತು ಕೀಟಲೆ ಮಾಡಿದೆ. ನಂತರ ಊಟದ ಹಾಲ್‌ಗೆ ಜಿಗಿದ ಮಂಗನ ಕಾಟ ತಾಳಲಾರದೇ ಪ್ರತ್ಯೇಕ ಆಸನ ನೀಡಿ, ಬಾಳೆಗೊನೆಯನ್ನೇ ಕೊಟ್ಟಿದ್ದಾರೆ.. ಗಾಯಾಳುಗಳಿಗೆ ಹಿರಿಸಾವೆ ಸಮುದಾಯ ಅರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಯಿತು. ಬಹಳ ಕಾಟಕೊಟ್ಟ ಮಂಗ ನಂತರ ಕಲ್ಯಾಣ ಮಂಟಪದಿಂದ ತೆರಳಿದೆ. ಹಿರೀಸಾವೆ ಸುತ್ತಮುತ್ತಲ ಗ್ರಾಮಗಳಲ್ಲಿ ಸಂಚರಿಸುತ್ತಿರುವ ತಂಟೆಕೋರ ಕೋತಿಯನ್ನು ಹಿಡಿ ಹಿಡಿದು ಸ್ಥಳಾಂತರ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

Advertisement
Next Article