ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಹಾಲು ಮಾರಾಟದಲ್ಲಿ ಹೊಸ ದಾಖಲೆ ಬರೆದ ಕೆಎಂಎಫ್‌: ಒಂದೇ ದಿನ 51 ಲಕ್ಷ ಲೀಟರ್ ಮಾರಾಟ!

10:19 AM Apr 27, 2024 IST | Bcsuddi
Advertisement

ತಾಪಮಾನ ಹೆಚ್ಚಳದಿಂದ ಬಸವಳಿದ ಜನ ಹಾಲು, ಮೊಸರು, ಐಸ್‌ ಕ್ರೀಮ್ ಬಳಕೆಯನ್ನು ಹೆಚ್ಚಿಸಿದ್ದಾರೆ. ತಾಪಮಾನ ಹೆಚ್ಚಳದಿಂದ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಹಾಲು, ಮೊಸರು ಮಾರಾಟದಲ್ಲಿ ಹೊಸ ದಾಖಲೆ ಬರೆದಿದೆ.

Advertisement

ಕೆಎಂಎಫ್ ಒಂದೇ ದಿನ 51 ಲಕ್ಷ ಲೀಟರ್ ನಂದಿನಿ ಹಾಲು ಮತ್ತು 16.5 ಲಕ್ಷ ಲೀಟರ್ ಮೊಸರನ್ನು ಮಾರಾಟ ಮಾಡುವ ಮೂಲಕ ತನ್ನದೇ ದಾಖಲೆಯನ್ನು ಮುರಿದಿದೆ. ಅಲ್ಲದೆ ಐಸ್ ಕ್ರೀಮ್ ಮಾರಾಟದಲ್ಲಿ ಕೂಡ ಭಾರಿ ಏರಿಕೆ ಕಂಡಿದೆ. ಇದು ಕೆಎಂಎಫ್‌ನ ಐಸ್‌ಕ್ರೀಮ್ ಮಾರುಕಟ್ಟೆಯಲ್ಲಿ ಅಧಿಕವಾಗಿದೆ.

ಏಪ್ರಿಲ್ ಸಮಯದಲ್ಲಿ ಏಪ್ರಿಲ್ 9 ಮತ್ತು 15 ರ ನಡುವೆ – ಯುಗಾದಿ, ರಾಮ ನವಮಿ ಮತ್ತು ಈದ್-ಉಲ್-ಫಿತರ್‌ನಂತಹ ಹಬ್ಬಗಳು ಒಂದರ ನಂತರ ಒಂದರಂತೆ ಬಂದಿದ್ದು, ಹಾಲು ಮೊಸರಿನ ಮಾರಾಟ ಹೆಚ್ಚಳಕ್ಕೆ ಕಾರಣಗಳಲ್ಲಿ ಒಂದಾಗಿದೆ ಎಂದು ಕೆಎಂಎಫ್‌ನ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ. ಜಗದೀಶ್ ಹೇಳಿರುವುದಾಗಿ ಟಿಎನ್‌ಇಐ ವರದಿ ಮಾಡಿದೆ.

ಈ ತಿಂಗಳು, ನಾವು ಮೊಸರು ಮಾರಾಟದಲ್ಲಿ ಎರಡು ಮೈಲಿಗಲ್ಲುಗಳನ್ನು ಮುಟ್ಟಿದ್ದೇವೆ. ಮೊದಲ ವಾರದಲ್ಲಿ, ನಾವು 11.5 ಲಕ್ಷ ಲೀಟರ್ ಮಾರಾಟವಾಗಿದೆ. ಐದು ದಿನಗಳಲ್ಲಿ, ಇದು 16.5 ಲಕ್ಷ ಲೀಟರ್‌ಗೆ ಏರಿಕೆಯಾಗಿದೆ, ನಂದಿನಿಯನ್ನು ಆದ್ಯತೆಯ ಬ್ರಾಂಡ್ ಮಾಡಲಾಗಿದೆ ಎಂದು ಹೇಳಿದ್ದಾರೆ.

ಐಸ್‌ಕ್ರೀಂ ಮಾರಾಟ ಕೂಡ ಹೆಚ್ಚಳ
ನಂದಿನಿ ಐಸ್‌ಕ್ರೀಂ ಮಾರಾಟದಲ್ಲಿ ಕೂಡ ಭಾರಿ ಹೆಚ್ಚಳವಾಗಿದೆ. ಈ ವರ್ಷ ಐಸ್‌ಕ್ರೀಮ್ ಮಾರಾಟದಲ್ಲಿ 40% ಏರಿಕೆ ಕಂಡಿದೆ. ಫೆಬ್ರವರಿಯಲ್ಲೇ ರಾಜ್ಯದಲ್ಲಿ ತಾಪಮಾನ ಹೆಚ್ಚಿದ್ದ ಕಾರಣ, ಹೆಚ್ಚುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಪೂರೈಕೆಗೆ ನಾವು ಸಿದ್ಧರಾಗಿದ್ದೇವೆ ಎಂದರು.

ಮಾರಾಟ ಹೆಚ್ಚಳದೊಂದಿಗೆ ಈ ವರ್ಷದ ಈ ತ್ರೈಮಾಸಿಕದಲ್ಲಿ ಕೆಎಂಎಫ್ ಉತ್ತಮ ಆದಾಯದ ನಿರೀಕ್ಷೆಯಲ್ಲಿದೆ. ಶೀಘ್ರದಲ್ಲೇ ಬೇಸಿಗೆಯ ವಿಶೇಷ ಪಾನೀಯಗಳನ್ನು ಮಾರುಕಟ್ಟೆಗೆ ತರಲು ಸಿದ್ಧತೆ ಮಾಡಿಕೊಳ್ಳುತ್ತಿದೆ.

Advertisement
Next Article