ಹಾಲಿಲ್ಲದೆ ರುಚಿಕರವಾದ ಹಾಲು ಕೋವಾ ಮಾಡುವ ವಿಧಾನ
09:52 AM Feb 04, 2024 IST
|
Bcsuddi
Advertisement
ಬೇಕಾಗುವ ಪದಾರ್ಥಗಳು...
Advertisement
- ಮೈದಾ ಹಿಟ್ಟು- 2 ಚಿಕ್ಕ ಬಟ್ಟಲು
- ತುಪ್ಪ- 1 ಬಟ್ಟಲು
- ಸಕ್ಕರೆ- 1 1/2 ಬಟ್ಟಲು
- ಏಲಕ್ಕಿ- 3
ಮಾಡುವ ವಿಧಾನ...
- ಒಂದು ಪಾತ್ರೆಯಲ್ಲಿ 1 ಕಪ್ ತುಪ್ಪ ಮತ್ತು 2 ಕಪ್ ಮೈದಾವನ್ನು ಹಾಕಿ. ಕಡಿಮೆ ಉರಿಯಲ್ಲಿ ಚೆನ್ನಾಗಿ ಮಿಶ್ರಣ ಮಾಡಿ. 10 ನಿಮಿಷಗಳ ಬಳಿಕ ಮೈದಾ ತುಪ್ಪದೊಂದಿಗೆ ಚೆನ್ನಾಗಿ ಮಿಶ್ರಣವಾಗಿ ಗಟ್ಟಿಯಾಲು ಶುರುವಾಗುತ್ತದೆ. ಗಟ್ಟಿಯಾದ ಬಳಿಕ ಇದನ್ನು ಒಂದು ಪಾತ್ರೆಗೆ ವರ್ಗಾಯಿಸಿ ತಣ್ಣಗಾಗಲು ಬಿಡಿ.
- ಮಿಕ್ಸಿ ಜಾರ್'ಗೆ ಸಕ್ಕರೆ ಹಾಗೂ ಏಲಕ್ಕಿ ಪುಡಿ ಹಾಕಿ ಪುಡಿ ಮಾಡಿಕೊಳ್ಳಿ. ಈ ಪುಡಿಯನ್ನು ಸ್ವಲ್ಪ ಸ್ವಲ್ಪವೇ ಮೈದಾಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಇದು ಗಟ್ಟಿಯಾಗುತ್ತದೆ.
- ಬಳಿಕ ಇದನ್ನು ತುಪ್ಪ ಸವರಿದ ತಟ್ಟೆಗೆ ವರ್ಗಾಯಿಸಿ, ಸಮತಟ್ಟಾಗಿಸಿ, 2 ಗಂಟೆಗಳ ಕಾಲ ಫ್ರಿಡ್ಜ್ ನಲ್ಲಿಡಿ. ಬಳಿಕ ಫ್ರಿಡ್ಜ್ ನಿಂದ ಹೊರ ತೆಗೆದ 30 ನಿಮಿಷಗಳ ಬಳಿಕ ನಿಮಗೆ ಬೇಕಾದ ಆಕಾರಕ್ಕೆ ಕತ್ತರಿಸಿಕೊಳ್ಳಿ. ಇದೀಗ ರುಚಿಕರವಾದ ಹಾಲು ಕೋವಾ ಸವಿಯಲು ಸಿದ್ಧ.
Next Article