For the best experience, open
https://m.bcsuddi.com
on your mobile browser.
Advertisement

ಹಾನಗಲ್‌ ಪ್ರಕರಣ- ಮತ್ತಿಬ್ಬರು ಆರೋಪಿಗಳ ಬಂಧನ

12:40 PM Jan 15, 2024 IST | Bcsuddi
ಹಾನಗಲ್‌ ಪ್ರಕರಣ  ಮತ್ತಿಬ್ಬರು ಆರೋಪಿಗಳ ಬಂಧನ
Advertisement

ಹಾವೇರಿ:ಹಾನಗಲ್‌ನಲ್ಲಿ ನಡೆದ ಅತ್ಯಾಚಾರ ಪ್ರಕರಣದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಒಟ್ಟು ಎಂಟು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತ ಆರೋಪಿಗಳಾದ ಅಕ್ಕಿಆಲೂರಿನ ಸಂತೆ ವ್ಯಾಪಾರಿ ಸಾದಿಕ್ ಬಾಬುಸಾಬ್ ಅಗಸಿಮನಿ (29) ಮತ್ತು ಶೋಯೆಬ್ ಮುಲ್ಲಾ (19) ಎಂದು ಗುರುತಿಸಲಾಗಿದೆ.

ಇಂದು ಹಾವೇರಿ ಜಿಲ್ಲೆಗೆ ಸಿಎಂ ಭೇಟಿ ನೀಡುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಪೊಲೀಸರು ಭಾನುವಾರ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.ಪ್ರಕರಣಕ್ಕೆ ಸಂಬಂಧಪಟ್ಟಂತೆ ಈ ಃಈಮಧೇ ಅಕ್ಕಿಆಲೂರಿನ ಅಫ್ತಾಬ್‌ ಚಂದನಕಟ್ಟಿ, ಮದರಸಾಬ್‌ ಮಂಡಕ್ಕಿ ಹಾಗೂ ಅಬ್ದುಲ್ಲಾ ಖಾದರ್‌, ಜಾಫರ್ ಸಾಬ್‌ ಹಂಚಿನಮನಿ ಎಂಬ ಮೂವರು ಆರೋಪಿಗಳನ್ನು ಬಂಧಿಸಲಾಗಿತ್ತು.
ಒಬ್ಬ ಆರೋಪಿ ಮುಹಮದ್ ಸೈಫ್‌ ಎಂಬಾತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಪೂರ್ಣಗೊಂಡ ಬಳಿಕ ಬಂಧಿಸಲಾಗುವುದು ಎಂದು ಎಸ್ಪಿ ಅಂಶುಕುಮಾರ್ ಹೇಳಿದ್ದಾರೆ.

Advertisement

Author Image

Advertisement