For the best experience, open
https://m.bcsuddi.com
on your mobile browser.
Advertisement

ಹಸಿ ಈರುಳ್ಳಿ ಸೇವಿಸಿದರೆ ಆರೋಗ್ಯಕ್ಕೆ ಏನೆಲ್ಲ ಉಪಯೋಗವಿದೆ ಗೊತ್ತಾ?

09:01 AM Jun 11, 2024 IST | Bcsuddi
ಹಸಿ ಈರುಳ್ಳಿ ಸೇವಿಸಿದರೆ ಆರೋಗ್ಯಕ್ಕೆ ಏನೆಲ್ಲ ಉಪಯೋಗವಿದೆ ಗೊತ್ತಾ
Advertisement

ಈರುಳ್ಳಿ (Onion) ಬಹಳ ಮುಖ್ಯವಾದ ಪದಾರ್ಥ. ಆದರೆ, ಈ ಈರುಳ್ಳಿ ಕೇವಲ ನಿಮ್ಮ ಅಡುಗೆಗೆ ವಿಶಿಷ್ಟವಾದ ರುಚಿ ನೀಡುವುದು ಮಾತ್ರವಲ್ಲದೆ ಆರೋಗ್ಯಕ್ಕೂ ಬಹಳ ಉಪಯುಕ್ತವಾಗಿದೆ. ಹಲವರು ಹಸಿ ಈರುಳ್ಳಿಯನ್ನು ತಿನ್ನಲು ಇಷ್ಟಪಡುವುದಿಲ್ಲ. ಹಸಿ ಈರುಳ್ಳಿ ತಿಂದರೆ ಬಾಯೆಲ್ಲಾ ವಾಸನೆ ಬರುತ್ತದೆ ಎಂಬುದು ಇದಕ್ಕೆ ಮುಖ್ಯಕಾರಣ.ಆದರೆ, ಹಸಿ ಈರುಳ್ಳಿಯನ್ನು ಸೇವಿಸುವುದರಿಂದ ನಿಮ್ಮದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.

ಈ ಈರುಳ್ಳಿ ಮೂಳೆಗಳ ಆರೋಗ್ಯ, ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ ಮತ್ತು ಕೆಲವು ಕ್ಯಾನ್ಸರ್ ಮತ್ತು ಮಧುಮೇಹದಿಂದ ರಕ್ಷಿಸುತ್ತದೆ. ಕೆಮ್ಮು ನೆಗಡಿ ಮತ್ತು ಕಣ್ಣಿನ ಪೊರೆಗೆ ಕೂಡ ಈರುಳ್ಳಿ ರಾಮಬಾಣವಾಗಿದೆ. ಬೇಸಿಗೆಯ ಋತುವಿನಲ್ಲಿ, ನಿಮ್ಮ ಆಹಾರದಲ್ಲಿ ಹಸಿ ಈರುಳ್ಳಿಯನ್ನು ಸೇರಿಸುವುದು ಸೋಂಕುಗಳನ್ನು ತಡೆಗಟ್ಟಲು ಮತ್ತು ನಿಮ್ಮರೋಗನಿರೋಧಕ ಶಕ್ತಿಯನ್ನು ಅಗತ್ಯವಾಗಿ ಹೆಚ್ಚಿಸಲು ಸಹಾಯ ಮಾಡುತ್ತದೆ.

ಹಸಿ ಈರುಳ್ಳಿಯನ್ನು ತಿನ್ನುವುದು ಅನಾರೋಗ್ಯದ ಹರಡುವಿಕೆಯನ್ನು ತಡೆಯುವ ನಿಮ್ಮ ರೋಗನಿರೋಧಕ ವ್ಯವಸ್ಥೆಯ ಸಾಮರ್ಥ್ಯವನ್ನು ಸುಧಾರಿಸುತ್ತದೆ. ಬೇಸಿಗೆಯಲ್ಲಿ ರೋಗಗಳು, ವಿಶೇಷವಾಗಿ ಕೀಟಗಳಿಂದ ಹರಡುವ ರೋಗಗಳು ಹೆಚ್ಚಾಗಿರುತ್ತವೆ. ಹೀಗಾಗಿ, ಬೇಸಿಗೆಯಲ್ಲಿ ಹಸಿ ಈರುಳ್ಳಿ ತಿನ್ನುವುದರಿಂದ ಹಲವು ಉಪಯೋಗಗಳಿವೆ. ಈರುಳ್ಳಿಯು ವಿಟಮಿನ್‌ಗಳು, ಖನಿಜಗಳಿಂದ ತುಂಬಿದ್ದು, ಇವು ಆರೋಗ್ಯಕ್ಕೆ ವಿವಿಧ ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತವೆ. ಈರುಳ್ಳಿಯು ಪ್ರಾಚೀನ ಕಾಲದಿಂದಲೂ ತಲೆನೋವು, ಹೃದಯ ಕಾಯಿಲೆಗಳು ಮತ್ತು ಬಾಯಿ ಹುಣ್ಣುಗಳಿಗೆ ಚಿಕಿತ್ಸೆ ನೀಡಲು ಬಳಸುವ ಔಷಧೀಯ ಪರಿಣಾಮಗಳನ್ನು ಹೊಂದಿದೆ ಎಂದು ತಿಳಿದುಬಂದಿದೆ.

Advertisement

ಈರುಳ್ಳಿ ಕೇವಲ 44 ಕ್ಯಾಲೊರಿಗಳನ್ನು ಹೊಂದಿರುತ್ತದೆ ಮತ್ತು ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಈರುಳ್ಳಿಯಲ್ಲಿ ಕ್ವೆರ್ಸೆಟಿನ್ ಎಂಬ ವಸ್ತುವಿದ್ದು ಅದು ನೈಸರ್ಗಿಕ ಆಂಟಿಹಿಸ್ಟಮೈನ್ ಆಗಿ ಕಾರ್ಯನಿರ್ವಹಿಸುತ್ತದೆ. ಈರುಳ್ಳಿ ಮನುಷ್ಯನ ಜೀರ್ಣಾಂಗದ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಹೃದಯದ ಹೆಚ್ಚಿಸುತ್ತದೆ. ಏಕೆಂದರೆ ಪ್ರತಿ ದಿನ ನಾವು ಸೇವಿಸುವ ಆಹಾರದಲ್ಲಿ ತುಂಬಿರುವ ಕೆಟ್ಟ ಕೊಲೆಸ್ಟ್ರಾಲ್ ಅಂಶ ನಮ್ಮಹೃದಯದ ಕಾರ್ಯವನ್ನು ಹಠಾತ್ತನೆ ಯಾವಾಗ ಸ್ಥಗಿತಗೊಳಿಸುತ್ತದೆ ಎಂಬುದನ್ನು ಹೇಳಲಿಕ್ಕಾಗುವುದಿಲ್ಲ ಆದ್ದರಿಂದ, ಈರುಳ್ಳಿಯ ಸೇವನೆಯಿಂದ ಈ ಸಮಸ್ಯೆಯಿಂದ ಪಾರಾಗಬಹುದು. ಇದು ಕೇವಲ ಒಂದು ಉದಾಹರಣೆ ಅಷ್ಟೇ. ಇಂತಹ ಹತ್ತು ಹಲವಾರು ಪ್ರಯೋಜನಗಳು ಹಸಿ ಈರುಳ್ಳಿ ತಿನ್ನುವುದರಿಂದ ನಮಗೆ ಸಿಗುತ್ತವೆ. ದೇಹದ ಅಲರ್ಜಿ ಸಮಸ್ಯೆಗಳು ಎಂದರೆ ಕಣ್ಣಿನ ಕೆರೆತ, ಗಂಟಲು ಕೆರೆತ, ನೆಗಡಿಗೆ ಕಾರಣವೆಂದರೆ ‘ಹಿಸ್ಟಮಿನ್’ ಎಂಬ ಹಾರ್ಮೋನ್ ನಮ್ಮದೇಹದಲ್ಲಿ ಬಿಡುಗಡೆಯಾಗುವುದು.

ಇಂತಹ ಅಲರ್ಜಿ ಸಮಸ್ಯೆಗಳಿಂದ ಪಾರಾಗಲು ಈ ಹಿಸ್ಟಮಿನ್ ಹಾರ್ಮೋನಿನ ಬಿಡುಗಡೆಯನ್ನು ನಿಲ್ಲಿಸಬೇಕು. ಇದಕ್ಕೆ ದಿನವೂ 1 ಹಸಿ ಈರುಳ್ಳಿ ತಿನ್ನುವ ಅಭ್ಯಾಸ ಮಾಡಿಕೊಳ್ಳಿ. ಈರುಳ್ಳಿ ಸೇವನೆಯು ಗ್ಯಾಸ್ ಸಮಸ್ಯೆಯಲ್ಲಿ ಸಾಕಷ್ಟು ಪರಿಹಾರವನ್ನು ನೀಡುತ್ತದೆ. ಇದಕ್ಕಾಗಿ ಒಂದು ಟೀಸ್ಪೂನ್ ಈರುಳ್ಳಿ ರಸ, 1 ಬೆಳ್ಳುಳ್ಳಿ, ಸ್ವಲ್ಪ ಶುಂಠಿ,1 ಟೀಸ್ಪೂನ್ ಜೇನುತುಪ್ಪ ಮತ್ತು 2 ಟೀಸ್ಪೂನ್ ನೀರು ಮಿಶ್ರಣ ಮಾಡಿ. ಅದರ ಮಿಶ್ರಣವನ್ನು ತಯಾರಿಸಿ, ದಿನಕ್ಕೆ ಒಮ್ಮೆ ಸೇವಿಸಿ, ಈರುಳ್ಳಿ ಸೇವಿಸುವುದರಿಂದ ಶೀತ, ಕೆಮ್ಮು, ಕಿವಿ, ಜ್ವರ ಮತ್ತು ಚರ್ಮದ ಸಮಸ್ಯೆಗಳಲ್ಲೂ ಪರಿಹಾರ ಸಿಗುತ್ತದೆ.

Author Image

Advertisement