ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಹಸಿಮೆಣಸಿನಕಾಯಿ ತಿಂಗಳುಗಟ್ಟಲೇ ಹಾಳಾಗದಿರಲು ಈ ರೀತಿ ಸಂಗ್ರಹಿಸಿಡಿ

09:34 AM Mar 15, 2024 IST | Bcsuddi
Advertisement

ದಿನನಿತ್ಯದ ಅಡುಗೆಯಲ್ಲಿ ಹಸಿಮೆಣಸಿನಕಾಯಿಯನ್ನು ಬಳಸಿಯೇ ಬಳಸುತ್ತಾರೆ. ಆದರೆ ಇದನ್ನು ಹೆಚ್ಚು ದಿನಗಳ ಕಾಲ ಸಮಗ್ರಹಿಸುವುದೇ ದೊಡ್ಡ ತಲೆನೋವಿನ ಸಂಗತಿಯಾಗಿದೆ.

Advertisement

ಹೆಚ್ಚು ಖಾರ ಇಷ್ಟಪಡುವ ಜನರು ತಮ್ಮ ಹೆಚ್ಚಿನ ಆಹಾರದಲ್ಲಿ ಹಸಿ ಮೆಣಸಿನಕಾಯಿಯನ್ನು ಬಳಸುವುದುನ್ನು ಕಂಡಿರುತ್ತೀರಿ. ಕೇವಲ ಖಾರ ಇಷ್ಟಪಡುವವರಷ್ಟೇ ಅಲ್ಲ, ಸಾಮಾನ್ಯವಾಗಿ ಜನರು ಸ್ವಲ್ಪ ಪ್ರಮಾಣದಲ್ಲಾದರೂ ತಮ್ಮ ದಿನನಿತ್ಯದ ಅಡುಗೆಯಲ್ಲಿ ಹಸಿಮೆಣಸಿನಕಾಯಿಯನ್ನು ಬಳಸಿಯೇ ಬಳಸುತ್ತಾರೆ. ಆದರೆ ಇದನ್ನು ಹೆಚ್ಚು ದಿನಗಳ ಕಾಲ ಸಮಗ್ರಹಿಸುವುದೇ ದೊಡ್ಡ ತಲೆನೋವಿನ ಸಂಗತಿಯಾಗಿದೆ.

ಮಾರುಕಟ್ಟೆಯಿಂದ ಖರೀದಿಸಿದ ಹಸಿರು ಮೆಣಸಿನಕಾಯಿಗಳನ್ನು ಫ್ರಿಜ್ನಲ್ಲಿ ಇಟ್ಟರೂ ಕೊಳೆತು ಹೋಗುವುದೇ ಜಾಸ್ತಿ. ನೀವು ಸಮಸ್ಯೆಯಿಂದ ಬೇಸತ್ತಿದ್ದರೆ , ನಿಮಗಾಗಿ ನಾವಿಂದು ಕೆಲ ಸಲಹೆಗಳನ್ನು ನೀಡಲಿದ್ದೇವೆ. ಈ ಮೂಲಕ ನೀವು ಹಸಿಮೆಣಸಿನ ಕಾಯಿಯಯನ್ನು ಹೆಚ್ಚು ದಿನಗಳ ಕಾಲ ಇಟ್ಟು ಬಳಸಬಹುದು.

ಹಸಿಮೆಣಸಿನಕಾಯಿ ತಾಜಾವಾಗಿರಲು ಅದನ್ನು ಹೇಗೆ ಸಂಗ್ರಹಿಸಬೇಕು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ವಾರದವರೆಗೆ ತಾಜಾವಾಗಿರಲು ಹೀಗೆ ಮಾಡಿ: ಇದು ಬಹಳ ಸುಲಭ ಹಾಗೂ ಹೆಚ್ಚಿನವರು ಮಾಡಿರುವ ಟ್ರಿಕ್ ಆಗಿದೆ. ಇದಕ್ಕಾಗಿ ಹಸಿಮೆಣಸಿನಕಾಯಿಯನ್ನು ತೆಗೆದುಕೊಂಡು, ಒಂದು ಪೇಪರ್ ನಲ್ಲಿ ಸುತ್ತಿ, ಅದನ್ನು ಒಂದು ಪ್ಲಾಸ್ಟಿಕ್ ಕವರ್ ನೊಳಗೆ ಹಾಕಿ, ಫ್ರಿಜ್ ನಲ್ಲಿ ಇಡಿ. ಇದು ಕೇವಲ ಹಸಿಮೆಣಸಿನ ಕಾಯಿಗೆ ಮಾಅತ್ರ ಸೀಮಿತವಲ್ಲ, ನೀವು ಮಾರುಕಟ್ಟೆಯಿಂದ ತರುವ ಕೊತ್ತಂಬರಿ ಸೊಪ್ಪು, ಪುದಿನಾದಂತಹ ಹಸಿರು ಸೊಪ್ಪುಗಳಿಗೂ ಅನ್ವಯವಾಗುವುದು. ಅವುಗಳ ಬೇರು ತೆಗೆದು, ಪೇಪರ್ ನಲ್ಲಿ ಸುತ್ತಿಡಿ. ಇದರಿಂದ ಒಂದು ವಾರಗಳವರಗೆ ತಾಜಾವಾಗಿರುತ್ತದೆ.

15 ದಿನಗಳವರೆಗೆ ತಾಜಾವಾಗಿರಲು ಹೀಗೆ ಮಾಡಿ:

ನೀವು ಎರಡು ವಾರಗಳವರೆಗೆ ಹಸಿರು ಮೆಣಸಿನಕಾಯಿಗಳನ್ನು ಸಂಗ್ರಹಿಸಲು ಬಯಸಿದರೆ, ಈ ವಿಧಾನವನ್ನು ಅನುಸರಿಸಿ. ಹಸಿ ಮೆಣಸಿನಕಾಯಿಗಳನ್ನು ಸಂಗ್ರಹಿಸಲು, ಮೊದಲು ಅದನ್ನು ನೀರಿನಿಂದ ತೊಳೆದು ತಣ್ಣೀರಿನಲ್ಲಿ ಅರ್ಧ ಘಂಟೆಯವರೆಗೆ ನೆನೆಸಿ. ಅದರ ನಂತರ ಅವುಗಳ ಕಾಂಡ ಅಥವಾ ತೊಟ್ಟನ್ನು ತೆಗೆಯಿರಿ. ಮೆಣಸಿನಕಾಯಿ ಮೊದಲೇ ಹಾಳಾಗಿದ್ದರೆ ಅಥವಾ ಕೊಳೆತಿದ್ದರೆ, ಅದನ್ನು ತೆಗೆದುಹಾಕಿ ಅಥವಾ ಅರ್ಧದಷ್ಟು ಕತ್ತರಿಸಿ ಉತ್ತಮವಾಗಿರುವ ಭಾಗವನ್ನು ಮಾತ್ರ ಇಡಿ. ಈಗ ನೀರಿನಿಂದ ಹಸಿ ಮೆಣಸಿನಕಾಯಿಗಳನ್ನು ತೆಗೆದು ಕಾಗದದ ಟವಲ್ ಮೇಲೆ ಒಣಗಿಸಿ. ನಂತರ ಅವುಗಳನ್ನು ಟಿಸ್ಯು ಪೇಪರ್ ನಲ್ಲಿ ಸುತ್ತಿ, ಕೋಲ್ಡ್ ನೇರವಾಗಿ ತಲುಪದಂತೆ ಫ್ರಿಜ್‌ನಲ್ಲಿರುವ ಜಿಪ್‌ಲಾಕ್ ಚೀಲದಲ್ಲಿ ಸಂಗ್ರಹಿಸಿ. ಇದನ್ನು ಮಾಡುವುದರಿಂದ ಮೆಣಸಿನಕಾಯಿ ಎರಡು ವಾರಗಳವರೆಗೆ ತಾಜಾವಾಗಿರುತ್ತದೆ.

ತಿಂಗಳವರೆಗೆ ಸಂಗ್ರಹಿಸಲು ಹೀಗೆ ಮಾಡಿ:

ಅಡುಗೆ ತಯಾರಿಸುವಾಗ ಹಸಿ ಮೆಣಸಿನಕಾಯಿಯನ್ನು ಬಳಸುತ್ತಿದ್ದರೆ, ನೀವು ಹಸಿರು ಮೆಣಸಿನಕಾಯಿಗಳ ಪೇಸ್ಟ್ ತಯಾರಿಸಿ ಅವುಗಳನ್ನು ಸಂಗ್ರಹಿಸಬಹುದು. ಪೇಸ್ಟ್ ಹಾಗೂ ಹಾಗೂ ತರಕಾರಿಗೆ ಯಾವುದ ಏ ವ್ಯತ್ಯಾಸ ಇರುವುದಿಲ್ಲ. ಹಸಿಮೆಣಸಿನಕಾಯಿ ಬೇಗ ಹಾಳಾಗುವುದುರಿಂದ ಅದರ ಪೇಸ್ಟ್ ತಯಾರಿಸಿಟ್ಟರೆ, ಹಸಿಮೆಣಸಿನ ಅವಶ್ಯಕತೆಯಿದ್ದಾಗ ಆ ಪೇಸ್ಟನ್ನೇ ಬಳಸಬಹುದು.

ಇದಕ್ಕಾಗಿ ಮೆಣಸಿನಕಾಯಿಯನ್ನು ರುಬ್ಬಿಕೊಳ್ಳಿ. ಇದಕ್ಕೆ ಬೇರೆ ಏನನ್ನೂ ಸೇರಿಸುವ ಅಗತ್ಯವಿಲ್ಲ, ಅದರ ತೊಟ್ಟನ್ನು ತೆಗೆದು, ಪೇಸ್ಟ್ ಮಾಡಿ. ನಂತರ, ಅದನ್ನು ಒಂದು ಪಾತ್ರೆಗೆ ಹಾಕಿ, ಅಂಟಿಕೊಳ್ಳುವ ಪ್ಲಾಸ್ಟಿಕ್ ಸಹಾಯದಿಂದ ಅದನ್ನು ಮುಚ್ಚಿ. ಸ್ವಲ್ಪ ಸಮಯದ ಕಾಲ ಫ್ರೀಜರ್ನಲ್ಲಿ ಸಂಗ್ರಹಿಸಿ. ನಂತರ ಅವುಗಳನ್ನು ಹೊರ ತೆಗೆದು, ಫ್ರೀಜರ್ ಸುರಕ್ಷಿತ ಕವರ್ ಗೆ ವರ್ಗಾಯಿಸಿ ಮತ್ತು ಡ್ರೈಯರ್ ಸಹಾಯದಿಂದ ಆ ಕವರ್ ನಿಂದ ಹೆಚ್ಚುವರಿ ಗಾಳಿಯನ್ನು ಹೊರತೆಗೆಯಿರಿ. ಈ ರೀತಿಯಾಗಿ, ನೀವು ಹಸಿರು ಮೆಣಸಿನಕಾಯಿಯನ್ನು ಕೆಲವು ತಿಂಗಳುಗಳವರೆಗೆ ಸಂಗ್ರಹಿಸಬಹುದು. ಇದರಿಂದ ಪೇಸ್ಟ್ ಹಾಳಾಗುವುದಿಲ್ಲ, ಹೆಚ್ಚು ಸಮಯದವರೆಗೆ ಇಡಬಹುದು.

Advertisement
Next Article