ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಹಷ್ ಮನಿ ಪ್ರಕರಣದಲ್ಲಿ ಅಮೆರಿಕ ಮಾಜಿ ಅಧ್ಯಕ್ಷ ಟ್ರಂಪ್ ತಪ್ಪಿತಸ್ಥ: ನ್ಯೂಯಾರ್ಕ್‌ ಕೋರ್ಟ್‌ ತೀರ್ಪು

10:34 AM May 31, 2024 IST | Bcsuddi
Advertisement

ನ್ಯೂಯಾರ್ಕ್‌: ಹಷ್ ಮನಿ ಪ್ರಕರಣದ ಎಲ್ಲಾ 34 ಆರೋಪಗಳಲ್ಲಿ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ತಪ್ಪಿತಸ್ಥ ಎಂದು ಸಾಬೀತಾಗಿದೆ. ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಗೊಳಗಾಗುತ್ತಿರುವ ಅಮೆರಿಕದ ಮೊದಲ ಮಾಜಿ ಅಧ್ಯಕ್ಷರೆಂಬ ಕುಖ್ಯಾತಿ ಡೊನಾಲ್ಡ್‌ ಟ್ರಂಪ್ ಅವರಿಗೆ ಸಂದಿದೆ. ನ್ಯೂಯಾರ್ಕ್‌ ನ್ಯಾಯಾಲಯದ ನ್ಯಾಯಾಧೀಶರು ಡೊನಾಲ್ಡ್‌ ಟ್ರಂಪ್ ಅವರನ್ನು ಪೋರ್ನ್‌ ತಾರೆ ಸ್ಟಾರ್ಮಿ ಡೇನಿಯಲ್ಸ್ ಅವರೊಂದಿಗೆ ಸಂಬಂಧ ಮರೆಮಾಚಲು ಹಣ ನೀಡಿದ ಪ್ರಕರಣ ಸೇರಿದಂತೆ 34 ಪ್ರಕರಣಗಳಲ್ಲಿ ಅಪರಾಧಿ ಎಂದು ತೀರ್ಪು ನೀಡಿದ್ದಾರೆ. 12 ಸದಸ್ಯರ ತೀರ್ಪುಗಾರರು ಎರಡು ದಿನಗಳ ಕಾಲ 11 ಗಂಟೆಗಳಿಗೂ ಹೆಚ್ಚು ಕಾಲ ಪ್ರಕರಣದ ಬಗ್ಗೆ ಚರ್ಚಿಸಿ ಸರ್ವಾನುಮತದ ತೀರ್ಪನ್ನು ಪ್ರಕಟಿಸಿದ್ದಾರೆ. ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಮೀಪಿಸುತ್ತಿದೆ. ರಿಪಬ್ಲಿಕನ್ ಪಕ್ಷದ ನಾಯಕ ಮತ್ತೆ ಅಧ್ಯಕ್ಷ ಸ್ಥಾನಕ್ಕೆ ಏರಬಹುದು ಎನ್ನಲಾಗಿತ್ತು. ಈ ಸಂದರ್ಭದಲ್ಲಿ ಪ್ರಕರಣವೊಂದರಲ್ಲಿ ದೋಷಿಯಾಗಿದ್ದಾರೆ.

Advertisement

‘ನಾನು ತುಂಬಾ ಮುಗ್ಧ ಮನುಷ್ಯ. ನಿಜವಾದ ತೀರ್ಪು ಮತದಾರರಿಂದ ಬರಲಿದೆ’ ಎಂದು ಟ್ರಂಪ್ ಪ್ರತಿಕ್ರಿಯಿಸಿದ್ದಾರೆ. ಟ್ರಂಪ್ ಅವರು ನಟಿ ಸ್ಟಾರ್ಮಿ ಡೇನಿಯಲ್ಸ್‌ಗೆ ಹಣ ಪಾವತಿಸಿದ ಆರೋಪಕ್ಕೆ ಸಂಬಂಧಿಸಿ ‘ಹಷ್ ಮನಿ’ ಪ್ರಕರಣದಲ್ಲಿ ಕಾನೂನು ಸಂಕಷ್ಟ ಎದುರಿಸುತ್ತಿದ್ದರು. ಗೌಪ್ಯತೆ ಕಾಪಾಡಲು ನೀಡಿದ ಹಣಕ್ಕೆ ಹಷ್ ಮನಿ ಎನ್ನಲಾಗುತ್ತದೆ. ಸ್ಟಾರ್ಮಿ ಜೊತೆಗೆ 2006ರಲ್ಲಿ ಟ್ರಂಪ್ ಲೈಂಗಿಕ ಸಂಬಂಧ ಹೊಂದಿದ್ದರು. ಈ ಸಂಬಂಧ ಮೌನವಾಗಿರಲು ಸ್ಟಾರ್ಮಿ ಅವರಿಗೆ ಟ್ರಂಪ್‌ ತಮ್ಮ ವಕೀಲರ ಮೂಲಕ ಹಣ ನೀಡಿದ್ದರು ಎಂಬ ಆರೋಪ ಇತ್ತು. ಈ ಸಂಬಂಧ ವಿಚಾರಣೆ ಮಾಜಿ ಅಧ್ಯಕ್ಷ ಎದುರಿಸುತ್ತಿದ್ದರು. 2016 ರ ಅಧ್ಯಕ್ಷೀಯ ಚುನಾವಣೆ ಮೇಲೆ ಈ ಪ್ರಕರಣ ಪ್ರಭಾವ ಬೀರಬಹುದು ಎಂಬ ಕಾರಣಕ್ಕೆ ನಟಿಗೆ ಟ್ರಂಪ್ ಹಣ ನೀಡಿದ್ದರು ಎಂದು ಆರೋಪಿಸಲಾಗಿತ್ತು. ಈ ಆರೋಪಗಳನ್ನು ಅವರು ನಿರಾಕರಿಸಿದ್ದರು.

Advertisement
Next Article