ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಹರಿವೆ ಸೊಪ್ಪಿನಲ್ಲಿರುವ ಆರೋಗ್ಯ ಪ್ರಯೋಜನ

09:04 AM Jun 02, 2024 IST | Bcsuddi
Advertisement

ಕೆಂಪು ಬಣ್ಣದ ಎಲೆಗಳನ್ನು ಹೊಂದಿರುವ ಹರಿವೆ ಸೊಪ್ಪಿನಲ್ಲಿ ಅನೇಕ ಆರೋಗ್ಯ ಗುಣಗಳಿವೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

Advertisement

ಸೊಪ್ಪಿನ ಸೇವನೆಯಿಂದ ದೇಹದಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಂಡುಕೊಳ್ಳಬಹುದಾಗಿದೆ. ಆರೋಗ್ಯ ವೃದ್ಧಿಸುವ ಅನೇಕ ಸೊಪ್ಪುಗಳೂ ಇವೆ. ದೇಹಕ್ಕೆ ಬೇಕಾದ ಪೋಷಕಾಂಶ, ನಾರಿನಾಂಶಗಳನ್ನು ನೀಡುವ ಸೊಪ್ಪುಗಳು ಆರೋಗ್ಯವನ್ನು ಕಾಪಾಡಿಕೊಳ್ಳಲು ಇರುವ ಉತ್ತಮ ಮಾರ್ಗವಾಗಿದೆ. ಅಂತಹ ಸೊಪ್ಪುಗಳಲ್ಲಿ ಹರಿವೆ ಸೊಪ್ಪು ಕೂಡ ಒಂದು. ಕೆಂಪು ಬಣ್ಣದ ಎಲೆಯನ್ನು ಹೊಂದಿರುವ ಈ ಹರಿವೆ ಸೊಪ್ಪು ಹೇರಳವಾದ ಪ್ರೋಟೀನ್, ಕ್ಯಾಲ್ಸಿಯಂ, ಸತು, ಸೇರಿದಂತೆ ಅಗತ್ಯ ಜೀವಸತ್ವಗಳನ್ನು ಹೊಂದಿದೆ. ಇವುಗಳಿಂದ ದೇಹದಲ್ಲಿನ ಉತ್ಕರ್ಷಣ ನಿರೋಧಕ ಗುಣಗಳಿಂದ ಹಿಡಿದು ಕೆಂಪು ರಕ್ತ ಕಣ ಉತ್ಪಾದನೆ, ಜೀರ್ಣಕ್ರಿಯೆಯನ್ನು ಉತ್ತಮವಾಗಿಸುವವರೆಗೂ ಹರಿವೆ ಸೊಪ್ಪು ಸಹಕಾರಿಯಾಗಿದೆ.

ಚಳಿಗಾಲದಲ್ಲಿ ಹೆಚ್ಚಾಗಿ ಸಿಗುವ ಈ ಸೊಪ್ಪು ಆರೋಗ್ಯಕ್ಕೆ ಇನ್ನು ಯಾವೆಲ್ಲ ಪ್ರಯೋಜನಗಳನ್ನು ನೀಡುತ್ತವೆ ಎನ್ನುವ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ 100 ಗ್ರಾಂ ಹರಿವೆ ಸೊಪ್ಪಿನಲ್ಲಿ ಸರಿಸುಮಾರು ಶೇ. 70ರಷ್ಟು ದೇಹಕ್ಕೆ ಪ್ರತಿದಿನ ಬೇಕಾಗುವ ವಿಟಮಿನ್‌ ಸಿ ಅಂಶವಿದೆ. ಇದು ನೀರಿನಲ್ಲಿ ಕರಗಬಲ್ಲ ವಿಟಮಿನ್‌ ಆಗಿದೆ. ಹೀಗಾಗಿ ಸೋಂಕಿನ ವಿರುದ್ಧ ಹೋರಾಡಿ ದೇಹವನ್ನು ರಕ್ಷಿಸುತ್ತದೆ. ಅಲ್ಲದೆ ಇದರಲ್ಲಿನ ನಾರಿನಾಂಶ ತೂಕ ಇಳಿಕೆಗೆ, ಮಲಬದ್ಧತೆ ನಿವಾರಣೆಗೂ ಸಹಾಯಕವಾಗಿದೆ. ಹೀಗಾಗಿ ಹರಿವೆ ಸೊಪ್ಪನ್ನು ಕಿಚಡಿ, ಸಾಂಬಾರು, ಪಲ್ಯದಂತಹ ಪದಾರ್ಥ ಮಾಡಿ ಸೇವಿಸಬಹುದಾಗಿದೆ. ರಕ್ತದೊತ್ತಡವನ್ನು ಸಮತೋಲನದಲ್ಲಿಡುತ್ತದೆ ಕಡಿಮೆ ಕೊಲೆಸ್ಟ್ರಾಲ್‌ ಅಂಶವನ್ನು ಹೊಂದಿರುವ ಹರಿವೆ ಸೊಪ್ಪಿನ ಸೇವನೆಯಿಂದ ದೇಹದಲ್ಲಿ ರಕ್ತದೊತ್ತಡವನ್ನು ಸಮತೋಲನದಲ್ಲಿ ಇಟ್ಟುಕೊಳ್ಳಬಹುದು. ಈ ಸೊಪ್ಪಿನಲ್ಲಿ ಕರಗಬಲ್ಲ ಹಾಗೂ ಕರಗದ ನಾರಿನಾಂಶವಿದೆ.

ಹರಿವೆ ಸೊಪ್ಪಿನ ಸೇವನೆಯಿಂದ ದೇಹದ ತೂಕವನ್ನು ಕಡಿಮೆ ಮಾಡಬಹುದಾಗಿದೆ. ಇದರಲ್ಲಿನ ಕಡಿಮೆ ಕೊಲೆಸ್ಟ್ರಾಲ್‌ ಮಟ್ಟದಿಂದ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ನಿವಾರಿಸಬಹುದಾಗಿದೆ. ರಕ್ತಹೀನತೆಯನ್ನು ನಿವಾರಿಸುತ್ತದೆ ಹರಿವೆ ಸೊಪ್ಪಿನಲ್ಲಿರುವ ಕಬ್ಬಿಣಾಂಶವು ದೇಹದಲ್ಲಿ ಕೆಂಪು ರಕ್ತಕಣಗಳನ್ನು ಉತ್ಪಾದಿಸುತ್ತದೆ. ಇದರಲ್ಲಿನ ಕ್ಯಾಲ್ಸಿಯಂ ಅಂಶವು ಮೂಳೆ, ಸ್ನಾಯುಗಳು ಮತ್ತು ದಂತ ಸಮಸ್ಯೆಗಳನ್ನು ನಿವಾರಿಸುತ್ತದೆ. ಹೆಣ್ಣುಮಕ್ಕಳ ಆರೋಗ್ಯಕ್ಕೆ ಹರಿವೆ ಸೊಪ್ಪು ಹೆಚ್ಚು ಉಪಯುಕ್ತವಾಗಿದೆ. ಪೌಷ್ಟಿಕ ತಜ್ಞರೂ ಕೂಡ ಹರಿವೆ ಸೊಪ್ಪಿನ ಸೇವನೆಗೆ ಶಿಫಾರಸ್ಸು ಮಾಡುತ್ತಾರೆ. ಪೋಷಕಾಂಶಗಳ ಆಗರ ಹರಿವೆ ಸೊಪ್ಪಿನಲ್ಲಿ ಬ್ಯಾಕ್ಟೀರಿಯಾಗಳನ್ನು ನಿವಾರಿಸುವ ಗುಣವಿದೆ.

ಅಲ್ಲದೆ ಫೈನ್ಯೂಟ್ರಿಯೆಂಟ್ಸ್‌ಗಳನ್ನು ಸಮೃದ್ಧವಾಗಿ ಹೊಂದಿದ್ದು ಉರಿಯೂತವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ವಿಟಮಿನ್‌ ಎ, ವಿಟಮಿನ್‌ ಸಿ ಸೇರಿದಂತೆ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಹೊಂದಿದೆ. ದೇಹಕ್ಕೆ ಅಗತ್ಯವಿರುವ ಕೆಂಪು ರಕ್ತದ ಕಣಗಳನ್ನು ಉತ್ಪಾದಿಸುವ ಗುಣವನ್ನು ಹರಿವೆ ಸೊಪ್ಪು ಹೊಂದಿದ್ದು, ರಕ್ತದ ಹರಿವನ್ನು ದೇಹದಲ್ಲಿ ಹೆಚ್ಚಾಗಿಸುತ್ತದೆ. ಸಮೃದ್ಧ ವಿಟಮಿನ್ ಇ ಅಂಶ ಮೆದುಳಿನ ಕಾರ್ಯಕ್ಷಮತೆ, ಕಣ್ಣಿನ ಆರೋಗ್ಯ ಹಾಗೂ ಮೂಳೆಗಳ ಆರೋಗ್ಯವನ್ನು ಕಾಪಾಡುವ ವಿಟಮಿನ್‌ ಇ ಅಂಶವನ್ನು ಹರಿವೆ ಸೊಪ್ಪು ಹೇರಳವಾಗಿ ಹೊಂದಿದೆ. ಇದರ ಜೊತೆಗೆ ಫೋಲೆಟ್‌ಗಳು, ರಿಬೋಫ್ಲಾವಿನ್, ನಿಯಾಸಿನ್‌ ಜೀವಸತ್ವಗಳನ್ನು ಹೊಂದಿದೆ.

Advertisement
Next Article