ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಹರಿದ ಸಾಕ್ಸ್ ಹಾಕಿದ ಬಗ್ಗೆ ಟ್ರೋಲ್ - ಖಡಕ್ ಉತ್ತರ ಕೊಟ್ಟ ಪ್ರೊಫೆಸರ್

03:51 PM Oct 02, 2024 IST | BC Suddi
Advertisement

ನವದೆಹಲಿ: ದೆಹಲಿಯ 5ಸ್ಟಾರ್ ಹೊಟೇಲ್‌ನಲ್ಲಿ ಬಾಂಬೆ ಐಐಟಿ ಪ್ರಾಧ್ಯಾಪಕ ಚೇತನ್ ಸೋಲಂಕಿ ಅವರು ಹರಿದ ಸಾಕ್ಸ್ ಧರಿಸಿ ಕುಳಿತಿದ್ದಾರೆ‌. ಇದರ ಫೋಟೋ ವೈರಲ್ ಆಗಿತ್ತು. ಅದೇ ಫೋಟೋ ಆಧರಿಸಿ ಟ್ರೋಲಿಗರು ಟ್ರೋಲ್ ಮಾಡಿದ್ದರು.

Advertisement

ದೊಡ್ಡ ಪ್ರೊಫೆಸರ್‌ಗೆ ಉತ್ತಮ ಖರೀದಿಸುವಷ್ಟು ದುಡ್ಡಿಲ್ಲವೇ ಎಂದು ಕೆಲವರು ಪ್ರಶ್ನಿಸಿ ಕುಹಕವಾಡಿದ್ದರು. ಈ ಟ್ರೋಲ್‌ಗೆ ಪ್ರೊಫೆಸರ್ ಚೇತನ್ ಸೋಲಂಕಿ ಖಡಕ್ ಉತ್ತರ ನೀಡಿದ್ದಾರೆ.

ಹೌದು. ನಾನು ಹರಿದ ಸಾಕ್ಸ್ ಧರಿಸಿದ್ದೇನೆ‌. ಈ ಸಾಕ್ಸ್ ಬದಲಾಯಿಸಬೇಕಿದೆ. ನಾನು ಬದಲಾಯಿಸುತ್ತೇನೆ. ಹೊಸ ಸಾಕ್ಸ್ ಖರೀದಿ ನನಗೆ ಸುಲಭ, ಆದರೆ ಪರಿಸರಕ್ಕೆ ಅದನ್ನು ತಡೆದುಕೊಳ್ಳಲು ಸಾಧ್ಯವಿಲ್ಲ. ಪರಿಸರ ಈ ರೀತಿಯ ತ್ಯಾಜ್ಯಗಳನ್ನು ಸಹಿಸುವುದಿಲ್ಲ. ನನ್ನ ಉತ್ಪಾದಕತೆ, ಅನುಕೂಲಕ್ಕಾಗಿ ನಾನು ಅತ್ಯುತ್ತಮ ಎಲೆಕ್ಟ್ರಾನಿಕ್ ಗ್ಯಾಜೆಟ್ ಬಳಸಬಹುದು. ಆದರೆ ಪರಿಸರದ ಮೇಲೆ ನನ್ನಿಂದ ಆಗುವ ಇಂಗಾಲದ ಪರಿಣಾಮವನ್ನು ಅತ್ಯಂತ ಕಡಿಮೆಗೊಳಿಸಲು ನಾನು ಪ್ರಯತ್ನಿಸುತ್ತೇನೆ. ಹೀಗಾಗಿ ಈ ರೀತಿಯ ವಸ್ತುಗಳನ್ನು ಅತೀ ಕಡಿಮೆ ಬಳಸುತ್ತೇನೆ ಎಂದು ಉತ್ತರಿಸಿದ್ದಾರೆ.

ಚೇತನ್ ಸೋಲಂಕಿ ಪರಿಸರ ಪೂರಕ ಸೋಲಾರ್ ಬಳಕೆ ಕುರಿತು ದೇಶದ ಹಳ್ಳಿ ಹಳ್ಳಿಯಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಪರಿಸರ ಪೂರಕ ಇಂಧನ ಬಳಕೆಯಿಂದ ದೇಶವನ್ನು ಮಹಾ ಸಂಕಷ್ಟದಿಂದ ಹೇಗೆ ಪಾರು ಮಾಡಬಹುದು ಅನ್ನೋದನ್ನು ಸೋಲಂಕಿ ಪದೇ ಪದೇ ಹೇಳಿದ್ದಾರೆ. ಇದೀಗ ತಮ್ಮ ನಡೆಯಲ್ಲೂ ತೋರಿಸಿದ್ದಾರೆ ಎಂದು ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement
Next Article