For the best experience, open
https://m.bcsuddi.com
on your mobile browser.
Advertisement

ಹನಿ ಟ್ರ್ಯಾಪ್ ಮಾಡಿ ಬಾಂಗ್ಲಾ ಸಂಸದನ ಹತ್ಯೆ; ಮಹಿಳೆ ಸೇರಿ ಢಾಕಾ ಮೂವರ ಬಂಧನ

03:38 PM May 24, 2024 IST | Bcsuddi
ಹನಿ ಟ್ರ್ಯಾಪ್ ಮಾಡಿ ಬಾಂಗ್ಲಾ ಸಂಸದನ ಹತ್ಯೆ  ಮಹಿಳೆ ಸೇರಿ ಢಾಕಾ ಮೂವರ ಬಂಧನ
Advertisement

ಬೆಂಗಳೂರು: ಭಾರತದಲ್ಲಿ ನಾಪತ್ತೆಯಾಗಿದ್ದ ಬಾಂಗ್ಲಾದೇಶದ ಹಿರಿಯ ಸಂಸದ ಅನ್ವರುಲ್ ಅಜೀಂ ಅನಾರ್ ಅವರನ್ನು ಕೊಲ್ಕತ್ತಾದಲ್ಲಿ ಭೀಕರವಾಗಿ ಹತ್ಯೆ ಮಾಡಲಾಗಿದ್ದು, ಪ್ರಕರಣ ಸಂಬಂಧ ಮೂವರನ್ನು ಬಂಧಿಸಲಾಗಿದೆ.

ವೈದ್ಯಕೀಯ ಚಿಕಿತ್ಸೆಗಾಗಿ ಮೇ 12 ರಂದು ಕೋಲ್ಕತ್ತಾಗೆ ಬಂದಿದ್ದ 56 ವರ್ಷದ ಬಾಂಗ್ಲಾದೇಶ ಸಂಸದ ಅನ್ವರುಲ್ ಅಜೀಂ ಅನಾರ್ ಅವರು ಕೊಲೆಯಾಗಿದ್ದು ಅವರುಕೋಲ್ಕತ್ತಾಗೆ ಬಂದ ಕೆಲವು ದಿನಗಳ ಕಾಲ ಅವರು ಸ್ನೇಹಿತ ಗೋಪಾಲ್ ಬಿಸ್ವಾಸ್ ಅವರೊಂದಿಗೆ ವಾಸಿಸುತ್ತಿದ್ದರು. ಬಳಿಕ ಕಾಣೆಯಾಗಿದ್ದರು.

ಕೊಲೆ ಮಾಡಿ ಅವರ ದೇಹವನ್ನು ಚರ್ಮ ಸುಲಿದು, ಕತ್ತರಿಸಿ ಮತ್ತು ತುಂಡುಗಳನ್ನು ಪ್ಲಾಸ್ಟಿಕ್ ಪ್ಯಾಕೆಟ್‌ಗಳಲ್ಲಿ ತುಂಬಿ ನಗರದಾದ್ಯಂತ ಎಸೆಯಲಾಗಿದೆ.ಇದೀಗ ಸಂಸದ ಅನ್ವರುಲ್ ಅಜೀಂ ಅನ್ವರ್ ಕೋಲ್ಕತ್ತಾದಲ್ಲಿ ಹತ್ಯೆಯಾಗುವ ಮೊದಲು ಅವರನ್ನು ಹನಿ ಟ್ರ್ಯಾಪ್ ಮಾಡಲು ಬಳಸಿದ್ದ ಮಹಿಳೆಯನ್ನು ಢಾಕಾದಲ್ಲಿ ಬಂಧಿಸಲಾಗಿದೆ.

Advertisement

ಬಾಂಗ್ಲಾದೇಶದ ಸಚಿವ ಅಸಾದುಝಮಾನ್ ಖಾನ್ ಈ ಬಗ್ಗೆ ಮಾಹಿತಿ ನೀಡಿದ್ದು"ಭಾರತದಲ್ಲಿ ನಾಪತ್ತೆಯಾಗಿದ್ದ ಅವಾಮಿ ಲೀಗ್ ಸಂಸದ ಅನ್ವರುಲ್ ಅಜೀಂ ಅನಾರ್ ಅವರನ್ನು ಕೋಲ್ಕತ್ತಾದ ಫ್ಲಾಟ್‌ನಲ್ಲಿ ಕೊಲೆ ಮಾಡಲಾಗಿದೆ" ಎಂದು ಖಾನ್ ಸುದ್ದಿಗಾರರಿಗೆ ತಿಳಿಸಿದ್ದಾರೆ್"ಇದುವರೆಗೆ, ಕೊಲೆಯಲ್ಲಿ ಭಾಗಿಯಾಗಿರುವ ಎಲ್ಲಾ ಹಂತಕರು ಬಾಂಗ್ಲಾದೇಶೀಯರು ಎಂದು ನಮಗೆ ತಿಳಿದು ಬಂದಿದೆ. ಇದು ಯೋಜಿತ ಕೊಲೆ" ಎಂದು ಅವರು ಹೇಳಿದ್ದಾರೆ.

ಈ ಪ್ರಕರಣದಲ್ಲಿ ಶಿಲಾಂತಿ ರೆಹಮಾನ್ ಎಂಬ ಬಾಂಗ್ಲಾದೇಶದ ಪ್ರಜೆಯನ್ನು ಬಂಧಿಸಲಾಗಿದೆ. ಮುಖ್ಯ ಆರೋಪಿ ಅಖ್ತರುಝಾಮಾನ್ ಶಾಹಿನ್ ಅವರ ಗೆಳತಿ ಎಂದು ತಿಳಿದುಬಂದಿದೆ. ಅಮೆರಿಕದ ಪ್ರಜೆಯಾಗಿರುವ ಅಖ್ತರುಜ್ಜಮಾನ್ ಅವರು ಅವಾಮಿ ಲೀಗ್ ಸಂಸದರ ಸ್ನೇಹಿತರಾಗಿದ್ದರು. ಕೋಲ್ಕತ್ತಾದ ನ್ಯೂ ಟೌನ್ ಪ್ರದೇಶದಲ್ಲಿ ಅಖ್ತರುಝಾಮಾನ್ ಅವರ ಬಾಡಿಗೆ ನಿವಾಸದಲ್ಲಿ ಸಂಸದರನ್ನು ಹತ್ಯೆ ಮಾಡಲಾಗಿದೆ. ಅನ್ವರುಲ್ ಹತ್ಯೆಯಾದಾಗ ಶಿಲಾಂತಿ ಕೋಲ್ಕತ್ತಾದಲ್ಲಿ ಇದ್ದಳು ಮತ್ತು ಮೇ 15 ರಂದು ಮುಖ್ಯ ಶಂಕಿತ ಕೊಲೆಗಾರ ಅಮಾನುಲ್ಲಾ ಅಮನ್ ಜೊತೆಗೆ ಢಾಕಾಗೆ ಮರಳಿದಳು. ಅನ್ವರುಲ್ ನನ್ನು ಬಾಂಗ್ಲಾದೇಶದಿಂದ ಕೋಲ್ಕತ್ತಾಗೆ ಕರೆತರಲು ಶಿಲಾಂತಿಯನ್ನು ಅಖ್ತರುಜ್ಜಮಾನ್ ಹನಿ ಟ್ರ್ಯಾಪ್ ಆಗಿ ಬಳಸಿಕೊಂಡಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Author Image

Advertisement