ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

   ಹಣಕಾಸು ವ್ಯವಹಾರ ದುರುಪಯೋಗ : ಪಿ.ಡಿ.ಓ ಎನ್.ಪಾಲಯ್ಯ ಅಮಾನತು

08:21 AM Jul 27, 2024 IST | Bcsuddi
Advertisement

 

Advertisement

ಚಿತ್ರದುರ್ಗ : ಹಣಕಾಸು ವ್ಯವಹಾರದಲ್ಲಿ ಹಣ ದುರುಪಯೋಗ ಪಡಿಸಿಕೊಂಡ ಆರೋಪದಲ್ಲಿ ಚಿಕ್ಕಗೊಂಡನಹಳ್ಳಿ ಪಿ.ಡಿ.ಓ ಎನ್.ಪಾಲಯ್ಯ ಅವರನ್ನು ಅಮಾನತುಗೊಳಿಸಿ, ಅವರ ವಿರುದ್ದ ವಿಚಾರಣೆ ಕಾಯ್ದಿರಿಸಿ, ಜಿ.ಪಂ. ಸಿಇಓ ಎಸ್.ಜೆ.ಸೋಮಶೇಖರ್ ಆದೇಶ ಹೊರಡಿಸಿದ್ದಾರೆ.

ನನ್ನಿವಾಳ ಗ್ರಾ.ಪಂ. ಪಿಡಿಓ ಆಗಿ ಕರ್ತವ್ಯ ನಿರ್ವಹಿಸುವ ವೇಳೆ ಎನ್.ಪಾಲಯ್ಯ ಅವರು ಗ್ರಾ.ಪಂ. ಸಿಬ್ಬಂದಿ ವೇತನ, 14 ಮತ್ತು 15ನೇ ಹಣಕಾಸು ಯೋಜನೆ ಅನುದಾನ, ಲೇ ಔಟ್‌ಗಳ ತೆರಿಗೆ ಹಾಗೂ ಶುಲ್ಕ ಸಂಗ್ರಹದ ವ್ಯವಹಾರದಲ್ಲಿ ಹಣಕಾಸಿನ ದುರಪಯೋಗ ತೋರಿದ್ದಾರೆ, ಇದರ ಜೊತೆಗೆ ಕಿವುಡ ಹಾಗೂ ಮೂಗರ ನಿವೇಶನಗಳ ಹಂಚಿಕೆ, ವೈಯಕ್ತಿಕ ಲಾಭಕ್ಕಾಗಿ ಆಯಿಲ್ ಮಿಲ್, ಜಲ್ಲಿ ಕ್ರಷರ್‌ಗಳಿಗೆ ಕಡಿಮೆ ತೆರಿಗೆ ವಿಧಿಸಿ ಗ್ರಾ.ಪಂ.ಗೆ ಆರ್ಥಿಕ ನಷ್ಟ ಉಂಟು ಮಾಡಿದ ಆರೋಪಕ್ಕೆ ಗುರಿಯಾಗಿದ್ದರು.   ಆರೋಪಗಳ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ನೀಡಿದ ನೋಟಿಸ್‌ಗೂ ಸರಿಯಾದ ಉತ್ತರ ನೀಡದೆ ಕರ್ತವ್ಯ ಲೋಪ ಎಸಗಿದ್ದಾರೆ. ಈ ಹಿನ್ನಲೆಯಲ್ಲಿ ಚಳ್ಳಕೆರೆ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಯಿಂದ ವರದಿ ಪಡೆದು, ನಿಯಮಾನುಸಾರ ಎನ್. ಪಾಲಯ್ಯ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಸಿಇಓ ಎಸ್.ಜೆ.ಸೋಮಶೇಖರ್ ಆದೇಶದಲ್ಲಿ ತಿಳಿಸಿದ್ದಾರೆ

Tags :
ಹಣಕಾಸು ವ್ಯವಹಾರ ದುರುಪಯೋಗ : ಪಿ.ಡಿ.ಓ ಎನ್.ಪಾಲಯ್ಯ ಅಮಾನತು
Advertisement
Next Article