For the best experience, open
https://m.bcsuddi.com
on your mobile browser.
Advertisement

ಸ್ವಾತಂತ್ರ್ಯೋತ್ಸವದಂದು ರಾಷ್ಟ್ರಪತಿ ಶೌರ್ಯ ಪದಕ ಸೇರಿ 1,037 ಮಂದಿಗೆ ಪೊಲೀಸ್ ಪದಕ

02:43 PM Aug 14, 2024 IST | BC Suddi
ಸ್ವಾತಂತ್ರ್ಯೋತ್ಸವದಂದು ರಾಷ್ಟ್ರಪತಿ ಶೌರ್ಯ ಪದಕ ಸೇರಿ 1 037 ಮಂದಿಗೆ ಪೊಲೀಸ್ ಪದಕ
Advertisement

ನವದೆಹಲಿ: ಕೇಂದ್ರೀಯ ಹಾಗೂ ರಾಜ್ಯ ಪೊಲೀಸ್ ಪಡೆಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 1,037 ಸಿಬ್ಬಂ ದಿಗೆ ಕೇಂ ದ್ರ ಸರ್ಕಾರವು ಸ್ವಾತಂತ್ರ್ಯೋ ತ್ಸವದ ಮುನ್ನಾದಿನ (ಬುಧವಾರ) ಪೊಲೀಸ್ ಪದಕಗಳನ್ನು ಘೋಷಿಸಿದೆ.

ಕೇಂದ್ರ ಗೃಹ ಸಚಿವಾಲಯದ ಹೇಳಿಕೆ ಪ್ರಕಾರ, ರಾಷ್ಟ್ರ ಪತಿ ಶೌರ್ಯ ಪದಕ ಸೇರಿದಂತೆ ಶೌರ್ಯ ಪದಕಕ್ಕೆ 214 ಸಿಬ್ಬಂದಿಯನ್ನು ಆಯ್ಕೆ ಮಾಡಲಾಗಿದೆ.

ತೆಲಂಗಾಣದ ಪೊಲೀಸ್ ಹೆಡ್ ಕಾನ್ಸ್ಟೆಬಲ್ ಛದುವು ಯದಯ್ಯ ಅವರಿಗೆ ಏಕೈಕ ರಾಷ್ಟ್ರಪತಿ ಶೌರ್ಯ ಪದಕ ಘೋಷಣೆಯಾಗಿದೆ. ಅವರು 2022ರ ಜುಲೈ 25ರಂದು ಇಬ್ಬರು ಕುಖ್ಯಾತ ಸರಗಳ್ಳರು ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆದಾರರನ್ನು ಬಂಧಿಸಿದ್ದರು. ದುಷ್ಕರ್ಮಿ ಗಳು ಸಾಕಷ್ಟು ಬಾರಿ ಚಾಕುವಿನಿಂದ ಇರಿದರೂ, ಅವರು ತಪ್ಪಿಸಿಕೊಳ್ಳದಂತೆ ಹಿಡಿದಿದ್ದ ಯದಯ್ಯ, ಗಂಭೀರ ಗಾಯಗೊಂಡಿದ್ದ ಅವರು 17 ದಿನ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಗೃಹ ಸಚಿವಾಲಯ ತಿಳಿಸಿದೆ.

Advertisement

ಗರಿಷ್ಠ 52 ಶೌರ್ಯ ಪದಕಗಳು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸಿಬ್ಬಂ ದಿಗೆ ಲಭಿಸಿವೆ. ಜಮ್ಮು ಮತ್ತು ಕಾಶ್ಮೀ ರ ಪೊಲೀಸರಿಗೆ 31, ಉತ್ತರ ಪ್ರದೇ ಶ ಹಾಗೂ ಮಹಾರಾಷ್ಟ್ರ ಪೊಲೀಸರಿಗೆ ತಲಾ 17, ಛತ್ತೀ‍ಸಗಢ ಪೊಲಸರಿಗೆ 15, ಮಧ್ಯಪ್ರದೇ ಶ ಪೊಲೀಸರಿಗೆ 12 ಪದಕಗಳು ದೊರೆತಿವೆ.

ವಿಶಿಷ್ಟ ಸೇವೆ ಸಲ್ಲಿಸಿದ 94 ಮಂದಿಗೆ ರಾಷ್ಟ್ರ ಪತಿಯವರ ಸೇವಾ ಪದಕ ಘೋ ಷಿಸಲಾಗಿದೆ. ಶ್ಲಾಘನ ಯ ಸೇ ವೆಗಾಗಿ 729 ಮಂ ದಿಗೆ ಪದಕ ಪ್ರಕಟಿಸಲಾಗಿದೆ.

Author Image

Advertisement