For the best experience, open
https://m.bcsuddi.com
on your mobile browser.
Advertisement

ಸ್ಟ್ರಾಬೆರಿ ಹಣ್ಣುಗಳ ಆರೋಗ್ಯ ಪ್ರಯೋಜನ

09:04 AM May 21, 2024 IST | Bcsuddi
ಸ್ಟ್ರಾಬೆರಿ ಹಣ್ಣುಗಳ ಆರೋಗ್ಯ ಪ್ರಯೋಜನ
Advertisement

ಹೇರಳವಾದ ಮಿನರಲ್ಸ್​ ಮತ್ತು ವಿಟಮಿನ್ಸ್​ಗಳನ್ನು ಹೊಂದಿರುವ ಸ್ಟ್ರಾಬೆರಿ ಹಣ್ಣುಗಳು ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯಕವಾಗಿದೆ, ಇಲ್ಲಿದೆ ನೋಡಿ ಸ್ಟ್ರಾಬೆರಿ ಹಣ್ಣಿನ ಉಪಯೋಗಗಳು.

ಆ್ಯಂಟಿ ಆ​ಕ್ಸಿಡೆಂಟ್​ ಗುಣಗಳನ್ನು ಹೊಂದಿರುವ ಸ್ಟ್ರಾಬೆರಿ ಹಣ್ಣುಗಳು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಲು ಸಹಾಯಕವಾಗಿದೆ. ಫೈಬರ್​ ಅಂಶವನ್ನು ಹೊಂದಿರುವ ಸ್ಟ್ರಾಬೆರಿ ಹಣ್ಣುಗಳು ವೇಗವಾಗಿ ದೇಹದ ತೂಕವನ್ನು ಇಳಿಸಿಕೊಳ್ಳಲು ಸಹಾಯಕವಾಗಿದೆ. ಸ್ಟ್ರಾಬೆರಿಯಲ್ಲಿನ ವಿಟಮಿನ್​ ಸಿ ಅಂಶಗಳು ಜೀರ್ಣಶಕ್ತಿಯನ್ನು ಉತ್ತಮಗೊಳಿಸುತ್ತದೆ. ಜತೆಗೆ ದೇಹದ ವಿವಿಧ ಭಾಗಗಳ ನೋವನ್ನು ತೆಗೆಯಲು ನೆರವಾಗುತ್ತದೆ.

ಸ್ಟ್ರಾಬೆರಿಗಳನ್ನು ನಿಯಮಿತವಾಗಿ ಸೇವಿಸುವ ವ್ಯಕ್ತಿಗಳಿಗೆ ಅಧಿಕ ರಕ್ತದೊತ್ತಡದ ಅಪಾಯವು ಕಡಿಮೆಯಾಗುತ್ತದೆ ಎಂದು ಫಲಿತಾಂಶಗಳು ತೋರಿಸಿವೆ. ಟೈಪ್ 2 ಮಧುಮೇಹದ ಸಂದರ್ಭದಲ್ಲಿ ಸ್ಟ್ರಾಬೆರಿ ಪ್ರಯೋಜನಕಾರಿಯಾಗಿದೆ.

Advertisement

ಸ್ಟ್ರಾಬೆರಿಯು ಫ್ಲೇವನಾಯ್ಡ್‌ಗಳನ್ನು ಹೊಂದಿದ್ದು, ಇದು ಗ್ಲೂಕೋಸ್ ಸೇವನೆಯನ್ನು ಪ್ರತಿಬಂಧಿಸುವ ಮೂಲಕ ಮತ್ತು ರಕ್ತ-ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳುವ ಮೂಲಕ ಮಧುಮೇಹ-ವಿರೋಧಿ ಕ್ರಿಯೆಯನ್ನು ತೋರಿಸಬಹುದು. ಸ್ಟ್ರಾಬೆರಿ ಹಣ್ಣುಗಳ ಸಲಾಡ್​ ಅನ್ನು ಮೊಸರಿನೊಂದಿಗೆ ಬೆಳಗ್ಗಿನ ಉಪಹಾರವಾಗಿಯೂ ಸೇವಿಸಬಹುದು.

Author Image

Advertisement