ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಸ್ಟ್ರಾಬೆರಿ ಹಣ್ಣುಗಳಲ್ಲಿದೆ ಆರೋಗ್ಯದ ಗುಟ್ಟು

09:03 AM Aug 22, 2024 IST | BC Suddi
Advertisement

ಆ್ಯಂಟಿ ಆ​ಕ್ಸಿಡೆಂಟ್​ ಗುಣಗಳನ್ನು ಹೊಂದಿರುವ ಸ್ಟ್ರಾಬೆರಿ ಹಣ್ಣುಗಳು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಲು ಸಹಾಯಕವಾಗಿದೆ. ವಿಟಮಿನ್​ ಸಿ ಅಂಶಗಳನ್ನು ಹೊಂದಿರುವ ಸ್ಟ್ರಾಬೆರಿ ಹಣ್ಣುಗಳು ದೇಹದ ತೂಕವನ್ನು ಇಳಿಸಿಕೊಳ್ಳಲು ಸಹಾಯಕವಾಗಿದೆ.

Advertisement

ಸ್ಟ್ರಾಬೆರಿಯಲ್ಲಿನ ವಿಟಮಿನ್​ ಸಿ ಅಂಶಗಳು ಜೀರ್ಣಶಕ್ತಿಯನ್ನು ಉತ್ತಮಗೊಳಿಸುತ್ತದೆ. ಜತೆಗೆ ದೇಹದ ವಿವಿಧ ಭಾಗಗಳ ನೋವನ್ನು ತೆಗೆಯಲು ನೆರವಾಗುತ್ತದೆ. ಯಥೇಚ್ಛವಾದ ಫೈಬರ್​ ಅಂಶವನ್ನು ಹೊಂದಿರುವ ಸ್ಟ್ರಾಬೆರಿ ಹಣ್ಣುಗಳು ವೇಗವಾಗಿ ದೇಹದ ತೂಕ ಇಳಿಕೆಗೆ ಸಹಕಾರಿಯಾಗಿದೆ. ಸ್ಟ್ರಾಬೆರಿ ಹಣ್ಣುಗಳ ಸಲಾಡ್​ ಅನ್ನು ಮೊಸರಿನೊಂದಿಗೆ ಬೆಳಗ್ಗಿನ ಉಪಹಾರವಾಗಿಯೂ ಸೇವಿಸಬಹುದಾಗಿದೆ.

ಸ್ಟ್ರಾಬೆರಿ ಸೇವನೆಯು ಮನುಷ್ಯನ ಅರಿವಿನ ಪ್ರಕ್ರಿಯೆಯ ವೇಗವನ್ನು ಶೇ 5.2ರಷ್ಟು ಹೆಚ್ಚಿಸಿದೆ. ಸಿಸ್ಟೊಲಿಕ್​ ರಕ್ತದೊತ್ತಡ ಕೂಡ ಶೇ 3.6ರಷ್ಟು ಕಡಿಮೆಯಾಗಿದೆ. ಒಟ್ಟಾರೆ ಆ್ಯಂಟಿ ಆಕ್ಸಿಡೆಂಟ್​ ಸಾಮರ್ಥ್ಯ ಗಮನಾರ್ಹವಾಗಿ ಶೇ 10.2ರಷ್ಟು ಹೆಚ್ಚಾಗಿದೆ. ಸೊಂಟದ ಸುತ್ತಳತೆ ಕೂಡ ಶೇ 1.1 ರಷ್ಟು ಕಡಿಮೆಯಾಗಿದೆ. ನಿಯಂತ್ರಣ ಮಟ್ಟದ ಪುಡಿ ಸೇವಿಸುವಾಗ ಭಾಗವಹಿಸುವವರು ಹೆಚ್ಚಿದ ಸೀರಮ್ ಟ್ರೈಗ್ಲಿಸರೈಡ್‌ಗಳನ್ನು ಅನುಭವಿಸಿದರು.

ಸ್ಟ್ರಾಬೆರಿ ಸೇವನೆಯೂ ನಿಮ್ಮ ಅರಿವಿನ ಕಾರ್ಯಾಚರಣೆಯನ್ನು ಹೆಚ್ಚಿಸುವ ಜೊತೆಗೆ ರಕ್ತ ದೊತ್ತಡದಂತಹ ಹೃದಯ ರಕ್ತನಾಳದ ಅಪಾಯ ತಗ್ಗಿಸುತ್ತದೆ ಎಂದು ಅಧ್ಯಯನ ತೋರಿಸಿದೆ ಎಂದು ಸ್ಯಾನ್​ ಡಿಯಾಗೊ ಸ್ಟೇಟ್​ ಯುನಿವರ್ಸಿಟಿ ಪ್ರೋ ಶಿರಿನ್​ ಹೂಶ್ಮಂಡ್​ ತಿಳಿಸಿದ್ದಾರೆ. ನಾವು ಪ್ರತಿನಿತ್ಯ ಸ್ಟ್ರಾಬೆರಿ ಸೇವನೆಯಂತಹ ಸರಳ ಆಹಾರ ಪದ್ಧತಿ ಬದಲಾವಣೆಗೆ ಪ್ರೋತ್ಸಾಹ ನೀಡಿದೆವು. ಇದು ವಯಸ್ಕರಲ್ಲಿ ಆರೋಗ್ಯ ಅಭಿವೃದ್ಧಿಗೆ ಕಾರಣವಾಗಿದೆ.

 

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.

Advertisement
Next Article