For the best experience, open
https://m.bcsuddi.com
on your mobile browser.
Advertisement

ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ ವತಿಯಿಂದ 968 ಹುದ್ದೆಗಳಿಗೆ ನೇಮಕಾತಿ

02:25 PM Mar 30, 2024 IST | Bcsuddi
ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ ವತಿಯಿಂದ 968 ಹುದ್ದೆಗಳಿಗೆ ನೇಮಕಾತಿ
Advertisement

ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ ವಿವಿಧ ಕೇಂದ್ರ ಇಲಾಖೆಗಳಲ್ಲಿ ಖಾಲಿ ಇರುವ 968 ಜೂನಿಯರ್‌ ಇಂಜಿನಿಯರ್‌ ಹುದ್ದೆಗಳಿಗೆ ನೇಮಕಾತಿಗೆ ಅರ್ಜಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.

ಅಪ್ಲಿಕೇಶನ್‌ ಸಲ್ಲಿಸಲು ಕೊನೆಯ ದಿನ ಏಪ್ರಿಲ್‌ 18, 2024. ಅರ್ಹ ಅಭ್ಯರ್ಥಿಗಳು SSC ಅಧಿಕೃತ ವೆಬ್‌ಸೈಟ್‌ ssc.gov.in ಮೂಲಕ ಅರ್ಜಿ ಸಲ್ಲಿಸಬಹುದು.

ಗಡಿ ರಸ್ತೆಗಳ ಸಂಸ್ಥೆ, ಮಿಲಿಟರಿ ಎಂಜಿನಿಯರ್‌ ಸೇವೆಗಳು ಸೇರಿದಂತೆ ವಿವಿಧ ಕೇಂದ್ರ ಇಲಾಖೆಗಳಲ್ಲಿ ಹುದ್ದೆಗಳಿವೆ.

Advertisement

ಅಭ್ಯರ್ಥಿಗಳು ಸಂಬಂಧಪಟ್ಟ ವಿಷಯದಲ್ಲಿ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿರಬೇಕು. ಆರಂಭಿಕ ವೇತನ 35,400.

ಹೆಚ್ಚಿನ ಮಾಹಿತಿಗೆ https://ssc.gov.in /api/attachment/uploads/masterData/NoticeBoards/notice_28032024.pdf

Author Image

Advertisement