ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಸೋರೆಕಾಯಿ ಪಾಯಸ ಮಾಡುವ ವಿಧಾನ

09:06 AM Oct 04, 2024 IST | BC Suddi
Advertisement

ಸೋರೆಕಾಯಿ ಸೇವನೆ ಆರೋಗ್ಯಕ್ಕೂ ಒಳ್ಳೆಯದು. ಈ ಸೋರೆಕಾಯಿಂದ ನೀವು, ಸಾರು, ಪಲ್ಯ ಮಾಡಿರಬಹದು. ಆದ್ರೆ ನಿಮಗೆ ಗೊತ್ತಾ..? ಸೋರೆಕಾಯಿಯಿಂದ ಪಾಯಸ ಕೂಡಾ ಮಾಡಬಹುದು.

Advertisement

ಪಾಯಸಕ್ಕೆ ಬೇಕಾಗುವ ಸಾಮಗ್ರಿಗಳು ಒಂದು ಚಿಕ್ಕ ಸೋರೆಕಾಯಿ. ಸಕ್ಕರೆ ಅಥವಾ ಬೆಲ್ಲ ಸಿಹಿಗೆ ತಕ್ಕಷ್ಟು. ತೆಂಗಿನಕಾಯಿ ತುರಿ. ಏಲಕ್ಕಿ-2 ರಿಂದ 3. ಹಾಲು -1 ಕಪ್. ಮಾಡುವ ವಿಧಾನ : ಸೋರೆಕಾಯಿಯನ್ನು ಸಿಪ್ಪೆ ತೆಗೆದು ಅದನ್ನ ಹೆಚ್ಚಿ ಕುಕ್ಕರಿನಲ್ಲಿ ಬೇಯಿಸಿಕೊಳ್ಳಿ. ನಂತರ, ಬೆಂದ ಮೇಲೆ ಅದನ್ನ ತಣ್ಣಗಾಗುವವರೆಗೂ ಬಿಡಿ. ಬಳಿಕ ಮಿಕ್ಸಿಗೆ ಹಾಕಿ ರುಬ್ಬಿಟ್ಟುಕೊಳ್ಳಿ. ಇನ್ನೊಂದು ಕಡೆ ತೆಂಗಿನಕಾಯಿ ತುರಿಯನ್ನೂ ನುಣ್ಣಗೆ ರುಬ್ಬಿ. ಪಾತ್ರೆಯಲ್ಲಿ ರುಬ್ಬಿದ ಸೋರೆಕಾಯಿ, ತೆಂಗಿನ ತುರಿ, ಹಾಲು ಹಾಕಿ ಕುದಿಸಿ. ಒಂದು ಕುದಿಯ ನಂತರ ಅದಕ್ಕೆ ರುಚಿಗೆ ತಕ್ಕಷ್ಟು ಸಕ್ಕರೆ ಅಥವಾ ಬೆಲ್ಲ ಹಾಕಿ ಮತ್ತೊಮ್ಮೆ ಕುದಿಸಿ, ಏಲಕ್ಕಿ ಪುಡಿ ಸೇರಿಸಿ. ಬಿಸಿ ಬಿಸಿಯಾದ ಸೋರೆಕಾಯಿ ಪಾಯಸ ಸವಿದು ನೋಡಿ.

Advertisement
Next Article