ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಸೂಳೆಕೆರೆ ಕುರಿತ ಸಂಶೋಧನಾ ಮಹಾಪ್ರಬಂಧಕ್ಕೆ ಡಾಕ್ಟರೇಟ್

07:51 AM Jan 11, 2024 IST | Bcsuddi
Advertisement

 

Advertisement

ಚಿತ್ರದುರ್ಗ: ರಾಜ್ಯದ ಅತಿ ದೊಡ್ಡ ಕೆರೆ ಎಂದೇ ಹೆಸರಾದ ಸೂಳೆಕೆರೆ ( ಶಾಂತಿ ಸಾಗರ) ಕುರಿತ ಸಂಶೋಧನಾ ಮಹಾಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ನೀಡಲಾಗಿದೆ.

ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು, ಗೆದ್ದಲಹಟ್ಟಿ ಗ್ರಾಮದ ದಿ. ಬಿ.ರಂಗಪ್ಪ  ಹಾಗೂ ಶಾರದಮ್ಮ ಅವರ ಮಗನಾದ  ಜಿ.ಆರ್.ಮಹಾಂತೇಶ ಅವರು ವಿಶ್ವ ವಿದ್ಯಾಲಯದ ಜಾನಪದ ವಿಭಾಗದ ಸಹ ಪ್ರಾಧ್ಯಾಪಕ ಡಾ.ಎಸ್.ಎಲ್.ಮಂಜುನಾಥ ಮಾರ್ಗದರ್ಶನದಲ್ಲಿ "ಸೂಳೆಕೆರೆ ಸಾಂಸ್ಕøತಿಕ ಅಧ್ಯಯನ" ಎಂಬ ಶಿರ್ಷಿಕೆ ಅಡಿ ಮಹಾಪ್ರಬಂಧ ರಚಿಸಿದ್ದರು. ವಿಶ್ವ ವಿದ್ಯಾಲಯದ ಪರೀಕ್ಷಾ ಮಂಡಳಿ, ಕನ್ನಡ ವಿಶ್ವ ವಿದ್ಯಾಲಯ ಅಧಿನಿಯಮ ಹಾಗೂ ಪಿ.ಹೆಚ್.ಡಿ ಪದವಿ ನಿಯಮಗಳ ಅನುಸಾರ ಮಹಾಪ್ರಬಂಧ ಅತ್ಯುತ್ತಮ ಶ್ರೇಣಿಯದ್ದು ಎಂದು ಪರಿಗಣಿಸಿ ಪಿ.ಹೆಚ್.ಡಿ ಪದವಿ ನೀಡಿದೆ.

ಜನವರಿ 10 ರಂದು ನಡೆದ ಘಟಿಕೋತ್ಸವದಲ್ಲಿ ಜಿ.ಆರ್.ಮಹಾಂತೇಶ ಅವರಿಗೆ ಡಾಕ್ಟರೇಟ್ ಪದವಿಯನ್ನು  ಪ್ರಧಾನ ಮಾಡಲಾಗಿದೆ.

Tags :
ಸೂಳೆಕೆರೆ ಕುರಿತ ಸಂಶೋಧನಾ ಮಹಾಪ್ರಬಂಧಕ್ಕೆ ಡಾಕ್ಟರೇಟ್
Advertisement
Next Article