For the best experience, open
https://m.bcsuddi.com
on your mobile browser.
Advertisement

ಸುವರ್ಣ ಗೆಡ್ಡೆಯಲ್ಲಿ ಇರುವ ಔಷಧೀಯ ಗುಣಗಳು

09:02 AM Feb 11, 2024 IST | Bcsuddi
ಸುವರ್ಣ ಗೆಡ್ಡೆಯಲ್ಲಿ ಇರುವ ಔಷಧೀಯ ಗುಣಗಳು
Advertisement

ನಾವು ಸೇವಿಸುವ ಆಹಾರವು ನಮ್ಮನ್ನು ಆರೋಗ್ಯವಾಗಿರಿಸುತ್ತದೆ. ಅನೇಕ ಜನರು ತರಕಾರಿಗಳನ್ನು ತಿನ್ನಲು ಇಷ್ಟಪಡುವುದಿಲ್ಲ. ಆದರೆ ತರಕಾರಿಗಳಲ್ಲಿ ಉತ್ತಮ ಪೋಷಕಾಂಶಗಳಿವೆ ಎಂಬುದನ್ನು ತಿಳಿದುಕೊಳ್ಳುವುದು ಅವಶ್ಯಕ. ಸುವರ್ಣ ಗೆಡ್ಡೆಯನ್ನು ಇಷ್ಟಪಟ್ಟು ತಿನ್ನುವವರ ಸಂಖ್ಯೆ ತೀರಾ ಕಡಿಮೆ. ಆದರೆ ಇದರಲ್ಲಿ ಅನೇಕ ಆರೋಗ್ಯಕಾರಿ ಗುಣಗಳು ಅಡಗಿದ್ದು, ಅನೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.

ಸುವರ್ಣ ಗೆಡ್ಡೆ ತಿಂದರೆ ದೇಹದಲ್ಲಿರುವ ಕಲ್ಮಶಗಳು, ವಿಷಕಾರಿ ಅಂಶಗಳು ಹೊರ ಹೋಗುತ್ತವೆ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ನಿತ್ಯವೂ ಸುವರ್ಣ ಗೆಡ್ಡೆ ತಿಂದರೆ ಕರುಳು, ಯಕೃತ್, ಹೊಟ್ಟೆ ಸ್ವಚ್ಛವಾಗಿದ್ದು, ಜೀರ್ಣಕ್ರಿಯೆ ಸರಾಗವಾಗುತ್ತದೆ. ಅನೇಕ ಜನರು ಹೆಚ್ಚಿದ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುತ್ತಿರುತ್ತಾರೆ.

ಅಧಿಕ ಕೊಲೆಸ್ಟ್ರಾಲ್ ಹೃದಯ ಸಮಸ್ಯೆಗಳು, ತೂಕ ಹೆಚ್ಚಾಗುವುದು ಮತ್ತು ಇತರ ಸಮಸ್ಯೆಗಳಿಗೆ ಕಾರಣವಾಗಬಹುದು. ಸುವರ್ಣ ಗೆಡ್ಡೆ ತಿಂದರೆ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಬಹುದು. ಸುವರ್ಣ ಗೆಡ್ಡೆಯಲ್ಲಿ ಫೈಬರ್ ಅಂಶ ಹೆಚ್ಚಾಗಿರುತ್ತದೆ. ಇದು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.

Advertisement

ಮಧುಮೇಹದಿಂದ ಬಳಲುತ್ತಿರುವವರು ಸುವರ್ಣ ಗೆಡ್ಡೆಯನ್ನು ತಮ್ಮ ಆಹಾರದಲ್ಲಿ ಸೇರಿಸುವುದರಿಂದ ಉತ್ತಮ ಫಲಿತಾಂಶವನ್ನು ಕಾಣಬಹುದು. ಸುವರ್ಣ ಗೆಡ್ಡೆ ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದ್ದು, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಹಾಗಾಗಿ ಮಧು ಮೇಹ ಇರುವವರು ಸುವರ್ಣ ಗೆಡ್ಡೆ ತಿಂದರೆ ಶುಗರ್ ಲೆವೆಲ್ ಕಂಟ್ರೋಲ್ ಆಗುತ್ತದೆ. ಸುವರ್ಣ ಗೆಡ್ಡೆ ಒಮೆಗಾ 3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿದೆ. ಇದು ವಿಟಮಿನ್ ಸಿ, ಬಿ 6 ಮತ್ತು ಬೀಟಾ ಕ್ಯಾರೋಟಿನ್ ಅನ್ನು ಹೊಂದಿರುತ್ತದೆ. ಇದು ನಿಮ್ಮ ತ್ವಚೆಯನ್ನು ಮೃದುವಾಗಿಸುತ್ತದೆ ಮತ್ತು ಸುಕ್ಕುಗಳಿಂದ ಮುಕ್ತಗೊಳಿಸುತ್ತದೆ. ಅಂತೆಯೇ, ಇದು ಕೂದಲು ಬೆಳವಣಿಗೆಗೆ ತುಂಬಾ ಸಹಾಯ ಮಾಡುತ್ತದೆ.

Author Image

Advertisement