For the best experience, open
https://m.bcsuddi.com
on your mobile browser.
Advertisement

ಸುಪ್ರೀಂ ಆದೇಶದಂತೆ ಆಯೋಗಕ್ಕೆ ಚುನಾವಣಾ ಬಾಂಡ್ ಮಾಹಿತಿ ಸಲ್ಲಿಸಿದ ಎಸ್​ಬಿಐ

11:34 AM Mar 13, 2024 IST | Bcsuddi
ಸುಪ್ರೀಂ ಆದೇಶದಂತೆ ಆಯೋಗಕ್ಕೆ ಚುನಾವಣಾ ಬಾಂಡ್ ಮಾಹಿತಿ ಸಲ್ಲಿಸಿದ ಎಸ್​ಬಿಐ
Advertisement

ನವದೆಹಲಿ: ಸುಪ್ರೀಂ ಕೋರ್ಟ್ ನ ಆದೇಶದಂತೆ ಚುನಾವಣಾ ಬಾಂಡ್ ಪಡೆದವರ ವಿವರವನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ಎಸ್​ಬಿಐ ಇಂದು ಸಲ್ಲಿಸಿದೆ.

ಚುನಾವಣಾ ಬಾಂಡ್ ಗಳ ವಿವರಗಳನ್ನು ಮಾ. 12 ರ ಸಂಜೆಯ ಒಳಗೆ ಚುನಾವಣಾ ಆಯೋಗಕ್ಕೆ ಸಲ್ಲಿಸುವಂತೆ ಎಸ್​ಬಿಐಗೆ ಸುಪ್ರೀಂ ಸೋಮವಾರ ಸೂಚನೆ ನೀಡಿತ್ತು. ಜೊತೆಗೆ ಎಸ್​ಬಿಐ ಸಲ್ಲಿಸಿದ ಈ ಮಾಹಿತಿಯನ್ನು ಮಾರ್ಚ್‌ 15ರ ಸಂಜೆ 5ರೊಳಗೆ ಚುನಾವಣಾ ಆಯೋಗವು ತನ್ನ ಅಧಿಕೃತ ವೆಬ್​ಸೈಟ್​ನಲ್ಲಿ ಪ್ರಕಟಿಸುವಂತೆ ಸುಪ್ರೀಂ ಹೇಳಿದೆ.

ಚುನಾವಣಾ ಬಾಂಡ್ ವಿವರಗಳನ್ನು ಬಹಿರಂಗಪಡಿಸಲು ಜೂನ್ 30 ರವರೆಗೆ ಸಮಯವನ್ನು ವಿಸ್ತರಿಸುವಂತೆ ಎಸ್​ಬಿಐ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿತ್ತು. ಈ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠ ನಡೆಸಿತ್ತು.

Advertisement

Author Image

Advertisement