ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಸೀತಾರಾಂ ಯಚೂರಿ ಮೃತದೇಹವನ್ನು ಏಮ್ಸ್‌ ಮೆಡಿಕಲ್ ಕೇಂದ್ರಕ್ಕೆ ದಾನ ಮಾಡಿದ ಕುಟುಂಬಸ್ಥರು

02:15 PM Sep 13, 2024 IST | BC Suddi
Advertisement

ನವದೆಹಲಿ :ಸಿಪಿಐ ಕಾರ್ಯದರ್ಶಿ ಸೀತಾರಾಂ ಯಚೂರಿ ಕುಟುಂಬಸ್ಥರು ಅವರ ಮೃತದೇಹವನ್ನು ಸಂಶೋಧನೆಗಾಗಿ ನವದೆಹಲಿಯ ಏಮ್ಸ್‌ ಮೆಡಿಕಲ್ ಕೇಂದ್ರಕ್ಕೆ ದಾನ ಮಾಡಿದ್ದಾರೆ.

Advertisement

ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಸಿಪಿಐ ಕಾರ್ಯದರ್ಶಿ ಸೀತಾರಾಂ ಯಚೂರಿ (72) ನಿನ್ನೆ ನಿಧನರಾದರು. ರಾಜ್ಯದ ಹಲವು ರಾಜಕೀಯ ಗಣ್ಯರು ಯಚೂರಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಇಂದು ಮಧ್ಯಾಹ್ನ ಯಚೂರಿ ಕುಟುಂಬಸ್ಥರು ಯಚೂರಿ ಅವರ ಮೃತದೇಹವನ್ನು ಸಂಶೋಧನೆಗಾಗಿ ನವದೆಹಲಿಯ ಏಮ್ಸ್‌ ಮೆಡಿಕಲ್ ಕೇಂದ್ರಕ್ಕೆ ನೀಡಲಾಗಿದೆ.

ಯಚೂರಿ ಅವರ ಮೃತದೇಹ ಉಪಯೋಗವಾಗಲಿ, ಅವರ ನಿಧನದ ಬಳಿಕವೂ ಅವರ ದೇಹ ಉಪಯೋಗವಾಗಲಿ ಎಂಬ ಕಾರಣಕ್ಕೆ ಏಮ್ಸ್ ಮೆಡಿಕಲ್ ಕೇಂದ್ರಕ್ಕೆ ನೀಡಲಾಗಿದೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಂಶೋಧನೆಗಾಗಿ ಶವವನ್ನು ಬಳಸಲಾಗುತ್ತದೆ. ಅಂತಹ ಬಳಕೆಗೆ ಯಚೂರಿ ಮೃತದೇಹ ಉಪಯೋಗವಾಗಲಿ ಎಂದು ಕುಟುಂಬಸ್ಥರು ಈ ನಿರ್ಧಾರ ಮಾಡಿದ್ದಾರೆ.

ತೀವ್ರ ಉಸಿರಾಟದ ಸೋಂಕಿನಿಂದ ಬಳಲುತ್ತಿದ್ದ ಸೀತಾರಾಂ ಯಚೂರಿ ಅವರನ್ನು ಏಮ್ಸ್‌ನ ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿತ್ತು. ಕಳೆದ ಕೆಲವು ದಿನಗಳಿಂದ ಅವರು ಕೃತಕ ಉಸಿರಾಟದ ಬೆಂಬಲದಲ್ಲಿದ್ದರು. ವೈದ್ಯರ ಬಹುಶಿಸ್ತೀಯ ತಂಡದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಕೊನೆಯುಸಿರೆಳೆದಿದ್ದರು.

 

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ

 

Advertisement
Next Article