ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಸಿಲ್ಕ್ಯಾರಾ ಸುರಂಗ ಆಪರೇಷನ್‌ನ 'ಹೀರೋ' ಡಿಕ್ಸ್ ಯಾರು? ಕಾರ್ಮಿಕರಿಗಾಗಿ ಪ್ರಾರ್ಥಿಸಿದ್ದ 'ಅರ್ನಾಲ್ಡ್'

06:23 PM Nov 28, 2023 IST | Bcsuddi
Advertisement

ಉತ್ತರಕಾಶಿ: ಉತ್ತರಾಖಂಡದ ಸಿಲ್ಕ್ಯಾರಾ ಸುರಂಗದ ಒಳಗೆ ಕಳೆದ 17 ದಿನಗಳಿಂದ ಸಿಲುಕಿದ್ದ ರಕ್ಷಣಾ ಕಾರ್ಯ ಅಂತಿಮ ಘಟ್ಟ ತಲುಪಿದ್ದು 41 ಕಾರ್ಮಿಕರನ್ನು ಸ್ಥಳಾಂತರಿಸಲು ಹೆಲಿಕ್ಯಾಪ್ಟರ್, ಅಂಬುಲೆನ್ಸ್‌ಗಳನ್ನು, ತಾತ್ಕಲಿಕ ಆಸ್ಪತ್ರೆ ಸಹಿತ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ.

Advertisement

ಅಂತಾರಾಷ್ಟ್ರೀಯ ಸುರಂಗ ತಜ್ಞ ಅರ್ನಾಲ್ಡ್ ಡಿಕ್ಸ್ ನವೆಂಬರ್ 12 ರಿಂದ ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಕ್ಕಿಬಿದ್ದ 41 ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಹಾಗಿದ್ರೆ ಪ್ರೊಫೆಸರ್ ಅರ್ನಾಲ್ಡ್ ಡಿಕ್ಸ್ ಯಾರು?

ಇಂಟರ್ನ್ಯಾಷನಲ್ ಟನೆಲಿಂಗ್ ಮತ್ತು ಅಂಡರ್‌ಗ್ರೌಂಡ್ ಸ್ಪೇಸ್ ಅಸೋಸಿಯೇಷನ್‌ನ ಆಸ್ಟ್ರೇಲಿಯಾ ಮೂಲದ ಅಧ್ಯಕ್ಷ ಅರ್ನಾಲ್ಡ್ ಡಿಕ್ಸ್ ಅವರು ರಕ್ಷಣಾ ಕಾರ್ಯಾಚರಣೆಯ ತಂಡಗೆ ಸಲಹೆ ನೀಡುವ ತಜ್ಞರಲ್ಲಿ ಒಬ್ಬರಾಗಿದ್ದಾರೆ. ಜೊತೆಗೆ ಭೂವಿಜ್ಞಾನಿಯೂ ಆಗಿದ್ದಾರೆ. ಇವರು ಭೂಗತ ನಿರ್ಮಾಣಕ್ಕೆ ಸಂಬಂಧಿಸಿದ ಅಪಾಯಗಳ ಬಗ್ಗೆ ಸಲಹೆಯನ್ನು ಸಹ ನೀಡುತ್ತಾರೆ ಮತ್ತು ಭೂಗತ ಸುರಂಗ ಮಾರ್ಗದಲ್ಲಿ ವಿಶ್ವದ ಪ್ರಮುಖ ಖ್ಯಾತ ತಜ್ಞರಾಗಿ ಗುರುತಿಸಲ್ಪಟ್ಟಿದ್ದಾರೆ. ಭೂಗತ ನಿರ್ಮಾಣದ ವೇಳೆ ಎದುರಿಸುವ ಕಾನೂನು, ಪರಿಸರ, ರಾಜಕೀಯ ಮತ್ತು ನೈತಿಕ ಅಪಾಯದ ಬಗ್ಗೆಯೂ ಸಲಹೆ ನೀಡುತ್ತಾರೆ.ಸುರಂಗ ಕುಸಿತದ ಹಿನ್ನೆಲೆಯಲ್ಲಿ, ಡಿಕ್ಸ್ ನಿಖರವಾದ ಯೋಜನೆ ಮತ್ತು ಸುರಕ್ಷತೆಯ ಪ್ರಾಮುಖ್ಯತೆಯನ್ನು ಒತ್ತಿಹೇಳಿದ್ದರು

ಕಾರ್ಮಿಕರ ರಕ್ಷಣೆ ಅರ್ನಾಲ್ಡ್ ಡಿಕ್ಸ್ ಪ್ರಾರ್ಥನೆ:

ಗ್ರೇಟ್‌ ಸುರಂಗ ಆಪರೇಷನ್‌ ನಲ್ಲಿ ಅರ್ನಾಲ್ಡ್ ಡಿಕ್ಸ್ ಪಾತ್ರ ಪ್ರಮುಖವಾಗಿದ್ದು, ಅವರು 41 ನಿರ್ಮಾಣ ಕಾರ್ಮಿಕರ ಸುರಕ್ಷಿತ ರಕ್ಷಣೆಗಾಗಿ ಮಂಗಳವಾರ ಬೆಳಿಗ್ಗೆ ದೇವರಲ್ಲಿ ಬೇಡಿಕೊಳ್ಳುವ ವಿಡಿಯೋ ವೈರಲ್ ಆಗಿದೆ.

ಸಿಕ್ಕಿಬಿದ್ದ 41 ಕಾರ್ಮಿಕರನ್ನು "ಕ್ರಿಸ್‌ಮಸ್ ವೇಳೆಗೆ" ಮನೆಗೆ ತಲುಪಿಸುವ ಬಗ್ಗೆ ಅವರು ಈ ಹಿಂದೆ ಭರವಸೆ ನೀಡಿದ್ದರು. ಆದರೆ ಸಮಯಕ್ಕಿಂತ ಮುಂಚಿತವಾಗಿಯೇ ಅವರು ನೀಡಿದ ಭರವಸೆ ಈಡೇರಿದಂತಿದೆ. ಏಕೆಂದರೆ ಕುಸಿದ ಸಿಲ್ಕ್ಯಾರಾ ಸುರಂಗದ ಅವಶೇಷಗಳ 60 ಮೀಟರ್ ವಿಸ್ತಾರವನ್ನು ಮಂಗಳವಾರದಂದು ರಕ್ಷಣಾ ತಂಡವು ಯಶಸ್ವಿಯಾಗಿ ಕೊರೆಯುವಲ್ಲಿ ಯಶಸ್ವಿಯಾಗಿದೆ. ರಕ್ಷಣಾ ಕಾರ್ಯಾಚರಣೆಯ ಪ್ರಗತಿಯನ್ನು ಡಿಕ್ಸ್ "ಅದ್ಭುತ" ಎಂದು ಕರೆದಿದ್ದಾರೆ.

Advertisement
Next Article