ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಸಿದ್ದರಾಮಯ್ಯ ಇವತ್ತು ಇರಬಹುದು ನಾಳೆ ಇಲ್ಲದೇ ಇರಬಹುದು..! ಖರ್ಗೆ ಹೀಗೆ ಅಂದಿದ್ದು ಯಾಕೆ ?

04:59 PM Sep 27, 2024 IST | BC Suddi
Advertisement

ಬೆಂಗಳೂರು : ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ ನೀಡಿದ್ದು, ಸಿದ್ದರಾಮಯ್ಯ ಇವತ್ತು ಇರಬಹುದು ನಾಳೆ ಇಲ್ಲದೇ ಇರಬಹುದು.ಆದ್ರೆ ಪಕ್ಷ ಮುಂದುವರೆಯಲಿದೆ ಎಂಬ ಹೇಳಿಕೆ ಕಾಂಗ್ರೆಸ್ ಪಕ್ಷದಲ್ಲಿ ಸಂಚಲನ ಸೃಷ್ಟಿಸಿದೆ. ಬೆಂಗಳೂರಿನ‌ ತಮ್ಮ ನಿವಾಸದಲ್ಲಿ ಮಾತನಾಡಿರುವ ಮಲ್ಲಿಕಾರ್ಜುನ ಖರ್ಗೆ, ಎಫ್ ಐ ಆರ್ ಆದರೆ ಸಿಎಂ ರಾಜೀನಾಮೆ ಕೊಡಬೇಕು ಅನ್ನೋದಾದರೆ ಗೋದ್ರಾ ಪ್ರಕರಣ ಆದಾಗ ಮೋದಿಯವರು ರಾಜೀನಾಮೆ ನೀಡಿದ್ದರಾ..?

Advertisement

ಅಮಿತ್ ಶಾ ಅವರದು ಸಾಕಷ್ಟು ಪ್ರಕರಣ ಆಗಿತ್ತು ಅವರು ರಾಜೀನಾಮೆ ನೀಡಿದ್ದರಾ..? ಯಾರನ್ನೆ ಆಗಲಿ ವೈಯುಕ್ತಿಕವಾಗಿ ಟಾರ್ಗೆಟ್ ಮಾಡಬಾರದು,ಸಿದ್ದರಾಮಯ್ಯ ಇಮೇಜ್ ಡ್ಯಾಮೇಜ್ ಮಾಡಿದರೆ ಅದು ಪಕ್ಷಕ್ಕೂ ಡ್ಯಾಮೇಜ್ ಆಗುತ್ತದೆ. ಆದ್ರೆ ಅವರ ಆಸಕ್ತಿ ಇರೋದು ಕಾಂಗ್ರೆಸ್ ಪಕ್ಷಕ್ಕೆ ಡ್ಯಾಮೇಜ್ ಮಾಡುವುದು ವೈಯುಕ್ತಿಕ ಅಲ್ಲಾ ಇವತ್ತು ಅವರು ಇರಬಹುದು ನಾಳೆ ಇಲ್ಲದೆ ಇರಬಹುದು ಆದರೆ ಪಕ್ಷ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ. ಇದೇ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಖರ್ಗೆ ಕಾಂಗ್ರೆಸ್ ಪಕ್ಷದ ಮೂಲ ಮತಗಳನ್ನು ಹಾಳು ಮಾಡಲಿಕ್ಕೆ ಇದನ್ನೆಲ್ಲಾ ಮಾಡುತ್ತಿದ್ದಾರೆ. ಕಾನೂನು ಅದರದೇ ಆದ ಕ್ರಮಗಳನ್ನು ಕೈಗೊಳ್ಳುತ್ತದೆ‌. ಪರಿಸ್ಥಿತಿ ಏನು ಬರುತ್ತದೆ ಅನ್ನೋದನ್ನ ಪರಿಶೀಲಿಸುತ್ತದೆ.

ಏನೂ ಇಲ್ಲದಿದ್ದರು ಪ್ರತಿ ದಿನ ಮೂಡ ಮೂಡ ಅಂತಿದಾರೆ. 16 ಲಕ್ಷ ಕೋಟಿ ಉದ್ಯಮಿಗಳು ಹಣ ಲೂಟಿ ಮಾಡಿದ್ರು ಈಗ ಸಣ್ಣ ವಿಚಾರ ತಗೆದುಕೊಂಡು ಫೈಟ್ ಮಾಡ್ತಿದಾರೆ. ಅದರಲ್ಲೂ ಚಾರ್ಜ್ ಶೀಟ್ ಸಹಾ ಆಗಿಲ್ಲ ಕನ್ವಿಕ್ಷನ್ ಆಗಿಲ್ಲ ಪ್ರತಿದಿನ ಇದನ್ನೆ ಮಾರಾಡ್ತಿದಾರೆ ಎಂದು ವಿಪಕ್ಷಗಳ ವಿರುದ್ಧ ಕಿಡಿ ಕಾರಿದರು. ಎಫ್ ಐ ಆರ್ ದಾಖಲಾದ ಮೇಲೆ ಹೈ ಕಮಾಂಡ್ ಸಿಎಂ ಜೊತೆ ನಿಲ್ಲುತ್ತಾ ಅನ್ನೋದು ಹೈ ಪೊತೆಟಿಕಲ್‌ ಪ್ರಶ್ನೆ,ನಾವು ಅವರ ಜೊತೆ ನಿಂತಿದ್ದೇವೆ.ಅವರಿಗೆ ಬೆಂಬಲ ಕೊಟ್ಟಿದ್ದೇವೆ. ಯಾಕೆಂದರೆ ಅವರು ಪಕ್ಷವನ್ನು ಪ್ರತಿನಿಧಿಸುತ್ತಾರೆ ಅವರು ವೈಯುಕ್ತಿಕ ಅಲ್ಲಾ ಎಂದಿದ್ದಾರೆ.

Advertisement
Next Article