ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

'ಸಿದ್ದರಾಮಯ್ಯ ಅವರದ್ದು ಪಾರದರ್ಶಕ ಭ್ರಷ್ಟ ಸರ್ಕಾರ'- ಸಿ.ಟಿ. ರವಿ

12:28 PM Jul 19, 2024 IST | Bcsuddi
Advertisement

ಬೆಂಗಳೂರು: ಸಿದ್ದರಾಮಯ್ಯ ಸರ್ಕಾರ ಭ್ರಷ್ಟಾಚಾರದ ಎಲ್ಲೆ ಮೀರಿದೆ. ಸಿದ್ದರಾಮಯ್ಯ ಅವರದ್ದು ಪಾರದರ್ಶಕ ಭ್ರಷ್ಟ ಸರ್ಕಾರ. ಇಲಾಖೆಗಳಲ್ಲಿ ವರ್ಗಾವಣೆಗೆ ರೇಟ್ ಕಾರ್ಡ್ ಫಿಕ್ಸ್ ಮಾಡಲಾಗಿದೆ. ಈ ರೇಟ್ ಕಾರ್ಡ್ ಫಿಕ್ಸ್ ಸತ್ಯ ಎಂದು ಪರಿಷತ್ ಸದಸ್ಯ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.

Advertisement

ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಪರಿಷತ್‌ನ ಬಿಜೆಪಿ, ಜೆಡಿಎಸ್ ಸದಸ್ಯರು ಸರ್ಕಾರದ ರೇಟ್ ಕಾರ್ಡ್ ವಿರುದ್ಧ ಧರಣಿ ನಡೆಸಿದರು. ಈ ವೇಳೆ ಮಾತನಾಡಿದ ಸಿ.ಟಿ ರವಿ ಅವರು, ಮುಡಾ, ವಾಲ್ಮೀಕಿ ನಿಗಮದ ಅಕ್ರಮಗಳ ಬೆನ್ನಲ್ಲೇ ಇದೀಗ ದೋಸ್ತಿಗಳು ಸರ್ಕಾರದ ವಿರುದ್ಧ ವರ್ಗಾವಣೆಗೆ ರೇಟ್ ಕಾರ್ಡ್ ಫಿಕ್ಸ್ ಮಾಡಲಾಗಿದೆ. ರೇಟ್ ಕಾರ್ಡ್ ಸತ್ಯ ಇದೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ. ಇವರ ಭ್ರಷ್ಟಾಚಾರ ಬರಿಗಣ್ಣಿಗೆ ಕಾಣುತ್ತದೆ. 40 ವರ್ಷಗಳ ಸಾರ್ವಜನಿಕ ಜೀವನದಲ್ಲಿ ಒಂದೇ ಒಂದು ಕಪ್ಪುಚುಕ್ಕೆ ಇಲ್ಲ ಎನ್ನುವ ಸಿದ್ದರಾಮಯ್ಯ ಅವರ ಮಾತನ್ನು ಯಾರೂ ಒಪ್ಪಲ್ಲ ಎಂದು ಹೇಳಿದರು.

ನಗರಾಭಿವೃದ್ಧಿ ಇಲಾಖೆಯಲ್ಲಿ ಚದರಡಿಗೆ 100 ರೂ. ನೀಡಬೇಕು. ಭೂ ಪರಿವರ್ತನೆಗೆ ಎಕರೆಗೆ 27 ಲಕ್ಷ ರೂ., ಪೊಲೀಸ್ ಇನ್‌ಸ್ಪೆಕ್ಟರ್ ವರ್ಗಾವಣೆಗೆ 50 ಲಕ್ಷದಿಂದ 1 ಕೋಟಿ ರೂ., ಎಇ 50 ಲಕ್ಷದಿಂದ 75 ಲಕ್ಷ. ರೂ., ತಹಶಿಲ್ದಾರ್ 50 ಲಕ್ಷದಿಂದ 1 ಕೋಟಿ ರೂ. ಬೆಂಗಳೂರು ಎಸಿ 5 ಕೋಟಿ ರೂ. ಎಸಿಪಿ 1.5 ಕೋಟಿಯಿಂದ 2 ಕೋಟಿ. ಎಇ 20-25 ಲಕ್ಷ ರೂ., ಎಸಿ (ಬೆಂಗಳೂರು) 5-7 ಕೋಟಿ ರೂ., ಡಿಸಿ 1-1.5 ಕೋಟಿ ರೂ. ನೀಡಬೇಕು ಸಬ್ ರಿಜಿಸ್ಟ್ರಾರ್ ಹರಾಜು ಹೋಲ್‌ಸೇಲ್ ಬಿಡ್ ನಡೆಸಲಾಗ್ತಿದೆ ಎಂದು ಕಿಡಿ ಕಾರಿದರು.

ಪ್ರತಿಭಟನೆ ವೇಳೆ ಯಾವ ಇಲಾಖೆಯಲ್ಲಿ ಯಾವೆಲ್ಲ ಹುದ್ದೆಗಳಿಗೆ ಎಷ್ಟೆಷ್ಟು ರೇಟ್ ಕಾರ್ಡ್ ಫಿಕ್ಸ್ ಮಾಡಲಾಗಿದೆ ಎನ್ನುವ ಪೋಸ್ಟರ್‌ಗಳನ್ನ ಬಿಜೆಪಿ, ಜೆಡಿಎಸ್ ಸದಸ್ಯರು ಪ್ರದರ್ಶಿಸಿ ಸರ್ಕಾರದ ವಿರುದ್ಧ ಧಿಕ್ಕಾರ ಘೋಷಣೆ ಕೂಗಿದರು.

 

Advertisement
Next Article