For the best experience, open
https://m.bcsuddi.com
on your mobile browser.
Advertisement

ಸಿದ್ದರಾಮಯ್ಯರವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ: ಛಲವಾದಿ ನಾರಾಯಣಸ್ವಾಮಿ.!

07:45 AM Aug 19, 2024 IST | BC Suddi
ಸಿದ್ದರಾಮಯ್ಯರವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ  ಛಲವಾದಿ ನಾರಾಯಣಸ್ವಾಮಿ
Advertisement

ಚಿತ್ರದುರ್ಗ : ಗವರ್ನರ್ ಪ್ರಾಸಿಕ್ಯೂಷನ್ಗೆ ಏಕೆ ಕೊಟ್ಟರೆಂದು ಕೇಳುವ ಅಧಿಕಾರ ಇಲ್ಲ.. ಕಾನೂನು ಮೂಲಕ ಸಿದ್ಧರಾಮಯ್ಯರವರು ಹೋರಾಟ ಮಾಡಲಿ. ಅಲ್ಲಿಯವರೆಗ ಸಿದ್ದರಾಮಯ್ಯರವರು ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿ ಆರೋಪ ಸುಳ್ಳು ಎಂದು ಸಾಬೀತಾದಾಗ ಮತ್ತೋಮ್ಮೆ ಮುಖ್ಯಮಂತ್ರಿಯಾಗಲಿ ಎಂದು ವಿಧಾನ ಪರಿಷತ್ನ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಸಿ.ಎಂ.ಗೆ ಸವಾಲ್ ಹಾಕಿದ್ದಾರೆ.

ಚಿತ್ರದುರ್ಗ ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,  ಸಿಎಂ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರ ಅನುಮತಿ ವಿಚಾರಕ್ಕೆ ಪ್ರತಿಕ್ರಿಯಿಸಿ ಕಾಂಗ್ರೆಸ್ ಪಕ್ಷ ಪ್ರತಿಭಟನೆ ಮಾಡುತ್ತಿರುವುದು ಸರಿಯಲ್ಲ. ಬಿ.ಎಸ್.ವೈ ವಿಚಾರದಲ್ಲಿ ಅಂದು ಕಾಂಗ್ರೆಸ್ ಸ್ವಾಗತಿಸಿತ್ತು.ಈಗ ರಾಜ್ಯಪಾಲರ ನಿರ್ಧಾರ ವಿರೋಧಿಸುವ ಬದಲು ಸ್ವಾಗತಿಸಬೇಕಿತ್ತು. ಸಿದ್ದರಾಮಯ್ಯರವರ ಬಳಿ ದೇಶಪ್ರೇಮವಿದೆ ಈ ಆರೋಪವನ್ನು ಒಪ್ಪಿಕೊಂಡಿದ್ದರೆ ಭ್ರಷ್ಟಾಚಾರ ವಿರೋಧಿಗಳೆನ್ನಬಹುದಿತ್ತು ಈ ರೀತಿ ಪ್ರತಿಭಟಿಸಿದರೆ ಭ್ರಷ್ಟಾಚಾರಕ್ಕೆ ಅವಕಾಶ ಕೊಡಿ ಎಂದಾಗುತ್ತದೆ. ಸಿಎಂ ಸಿದ್ಧರಾಮಯ್ಯರವರ ಭ್ರಷ್ಟಾಚಾರ ಈಗ ಬಯಲಾಗಿದೆ...ಎಷ್ಟೇ ಮುಚ್ಚಿದರೂ ಸಿಎಂ ಭ್ರಷ್ಟಾಚಾರ ಬಯಲಾಗಿದೆ. ಎಂದರು.

Advertisement

187 ಕೋಟಿ ರೂ ಎಸ್.ಟಿ ಸಮುದಾಯದ ಹಣ ಕಬಳಿಕೆ ಮಾಡಿ ಚುನಾವಣೆಗೆ, ಲ್ಯಾಂಬರ್ ಗಿನಿ ಕಾರ್ ಖರೀದಿಗೆ ಹಣ ಬಳಕೆ ಮಾಡಿದ್ದಾರೆ.ವೈನ್ ಶಾಪ್ ಖಾತೆಗೆ, ಚಿನ್ನ ಖರೀದಿ ಮಾಡಿದ್ದಾರೆ, ಜಮೀನು ಖರೀದಿಗೆ ಎಸ್.ಟಿ ನಿಗಮದ ಹಣ ವರ್ಗಾವಣೆ ಆಗಿದೆ. ದಲಿತನಿಗೆ ಸೇರಬೇಕಾದ ಜಮೀನ ಪರಿಹಾರ ಸಿಎಂ ಪಡೆದಿದ್ದಾರೆ..ಅದು ಸರ್ಕಾರದ ಜಮೀನಾಗಿತ್ತು, ಇವೆಲ್ಲ ಭ್ರಷ್ಟಾಚಾರದ ಭಾಗ.ಸಿಎಂ ರಾಜೀನಾಮೆ ಕೊಡಲ್ಲ ಎಂದು ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಸಿದ್ಧರಾಮಯ್ಯ ಇನ್ನೋರ್ವ ಕೇಜ್ರಿವಾಲ್ ಆಗೋದಾದರೆ ಆಗಲಿ.ಕೋರ್ಟ್ಲ್ಲಿ ನ್ಯಾಯ ಪಡೆದು ಮತ್ತೆ ಬನ್ನಿ ತೊಂದರೆ ಇಲ್ಲ...ಸಿಎಂ ಸ್ಥಾನದಲ್ಲಿದ್ದರೆ ಪ್ರಕರಣ ಮುಚ್ಚಿ ಹಾಕುವ ಸಂದರ್ಭ ಇರುತ್ತದೆ ಎಂದು ದೂರಿದರು.

ಸಿಎಂ ಸಿದ್ಧರಾಮಯ್ಯ ಬಂಧನ ಆಗಲೇಬೇಕಾಗುತ್ತದೆ...ಬಂಧನ ಆಗದೆ ತನಿಖೆ ಹೇಗೆ ಎದುರಿಸುತ್ತೀರಿ.?ಬಿಎಸ್ ವೈ ಪ್ರಕರಣದಲ್ಲಿ ರಾಜ್ಯಪಾಲರು ಕಾನೂನು ಪಾಲನೆ ಎಂದಿದ್ದೀರಿ..ಈಗ ರಾಜ್ಯಪಾಲರು ಕಾನೂನು ಉಲ್ಲಂಘಿಸಿದ್ದಾರೆ ಎನ್ನುತ್ತೀರಿ.ಗೃಹ ಸಚಿವ ಪರಮೇಶ್ವರ್ಗೆ ಆವತ್ತು ಗೊತ್ತಿರಲಿಲ್ಲವೇ ಸಂವಿಧಾನದ ಹುದ್ದೆಯಲ್ಲಿರುವವರಿಗೆ ಗೌರವಿಸುವುದು ಕಲಿಯಿರಿ..ಕಾಂಗ್ರೆಸ್ ಕಾಲದಲ್ಲಿ ಅನೇಕ ರಾಜ್ಯ ಸರ್ಕಾರಗಳ ವಜಾ.. ಬಿಜೆಪಿ ಕಾಲದಲ್ಲಿ ಯಾವುದೇ ರಾಜ್ಯ ಸರ್ಕಾರವನ್ನೂ ಬೀಳಿಸಿಲ್ಲ. ಕಾಂಗ್ರೆಸ್ ಭ್ರಷ್ಟಾಚಾರದ ವಿರುದ್ಧ ನಿರಂತರ ಹೋರಾಟ.ಹೆಚ್.ಡಿ.ಕೆ, ನಿರಾಣಿ, ಜೊಲ್ಲೆ ಕೇಸ್ ಪ್ರಾಸಿಕ್ಯೂಷನ್ಗೆ ಕೊಟ್ಟಿಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ ಕೋರ್ಟ್ಗೆ ಹೋಗಿ ಈ ಬಗ್ಗೆ ಪ್ರಶ್ನೆ ಮಾಡಲಿ. ರಾಜ್ಯಪಾಲರಿಗೆ ದಾಖಲೆ ಅವಲೋಕಿಸಿ ನಿರ್ಧಾರಿಸುವ ಹಕ್ಕಿದೆ.ಅವರಿಗೇಕೆ ಕೊಟ್ಟಿಲ್ಲ, ನಮಗೇಕೆ ಕೊಟ್ಟಿರೆನ್ನುವುದು ಮಕ್ಕಳಾಟ.ಯೋಗ್ಯವಲ್ಲದ ಪ್ರಕರಣ ಪ್ರಾಸಿಕ್ಯೂಷನ್ ಕೊಟ್ಟಿರಲಿಕ್ಕಿಲ್ಲ..ಇಡೀ ರಾಜ್ಯ ಹೋರಾಟ ಮಾಡುವಾಗ ರಾಜ್ಯಪಾಲ ಕೈಕಟ್ಟಿರಬೇಕಾ...? ಎಂದರು.

ಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಮುರಳಿ, ಜಿ.ಪಂ. ಮಾಜಿ ಅಧ್ಯಕ್ಷರಾದ ಶ್ರೀಮತಿ ಸೌಭಾಗ್ಯ ಬಸವರಾಜನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಂಪತ್ ಕುಮಾರ್, ವಕ್ತಾರ ದಗ್ಗೆ ಶಿವಪ್ರಕಾಶ್, ಶಿವಣ್ಣಚಾರ್, ತಿಪ್ಪೇಸ್ವಾಮಿ ಛಲವಾದಿ, ಭಾರ್ಗವಿ ದ್ರಾವಿಡ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags :
Author Image

Advertisement