For the best experience, open
https://m.bcsuddi.com
on your mobile browser.
Advertisement

'ಸಿದ್ದರಾಮಯ್ಯಗೆ ಸುಳ್ಳು ಹೇಳುವುದರಲ್ಲಿ ನೊಬೆಲ್ ಪ್ರಶಸ್ತಿ ನೀಡಬೇಕು'- ಈಶ್ವರಪ್ಪ ಕಿಡಿ

04:36 PM Nov 04, 2023 IST | Bcsuddi
 ಸಿದ್ದರಾಮಯ್ಯಗೆ ಸುಳ್ಳು ಹೇಳುವುದರಲ್ಲಿ ನೊಬೆಲ್ ಪ್ರಶಸ್ತಿ ನೀಡಬೇಕು   ಈಶ್ವರಪ್ಪ ಕಿಡಿ
Advertisement

ಕೇರಳ : ಪಾಸ್ ಪೋರ್ಟ್ ಒಬ್ಬ ವ್ಯಕ್ತಿಗೆ ಒಂದು ದೇಶದಿಂದ ಸಿಗುವ ಅತ್ಯಂತ ವಿಶ್ವಸನೀಯ ಅಧಿಕೃತ ದಾಖಲೆ, ಅದನ್ನು ಎಷ್ಟು ಜೋಪಾನವಾಗಿ ಇಟ್ಟುಕೊಳ್ಳುತ್ತಾರೆ. ಆದರೆ ಇಲ್ಲೊಂದು ಪಾಸ್ ಪೋರ್ಟ್ ಮಾತ್ರ ಮೊಬೈಲ್ ನಂಬರ್ ಗಳನ್ನು ಬರೆದಿಟ್ಟುಕೊಳ್ಳುವ ಡೈರಿಯಾಗಿ ಬಳಕೆಯಾಗಿದ್ದು. ಪಾಸ್ ಪೋರ್ಟ್ ನವೀಕರಣದ ವೇಳೆ ಪಾಸ್ ಪೋರ್ಟ್ ನೋಡಿದ ಅಧಿಕಾರಿ ಬೆಚ್ಚಿಬಿದ್ದಿದ್ದಾರೆ. ಇದೀಗ ವಿಡಿಯೋ ವೈರಲ್ ಆಗಿದೆ.

ಕೇರಳದ ವ್ಯಕ್ತಿಯೊಬ್ಬರು ಪಾಸ್​ಪೋರ್ಟ್​ ನವೀರಕರಣಕ್ಕೆಂದು ಪಾಸ್​ಪೋರ್ಟ್​ ಆಫೀಸಿಗೆ ಹೋದಾಗ ಅಲ್ಲಿಯ ಅಧಿಕಾರಿ ಪಾಸ್​ಪೋರ್ಟ್ ತಪಾಸಣೆ ನಡೆಸಿದ್ದಾರೆ. ಅದರ ಅವಸ್ಥೆ ನೋಡಿ ದಿಗ್ಭ್ರಾಂತರಾಗಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.
ಎರಡು ದಿನಗಳ ಹಿಂದೆ ಟ್ವೀಟರ್ ನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋವನ್ನು ಈತನಕ 8 ಲಕ್ಷಕ್ಕಿಂತಲೂ ಹೆಚ್ಚು ಜನ ನೋಡಿದ್ದಾರೆ. 4,000ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಸುಮಾರು 900 ಜನರು ರೀಪೋಸ್ಟ್ ಮಾಡಿದ್ದಾರೆ. ಸುಮಾರು 270 ಜನರು ಪ್ರತಿಕ್ರಿಯಿಸಿದ್ದಾರೆ.

Advertisement
Author Image

Advertisement