ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಸಿಎಂ ಮುಂದುವರಿಸೋದು, ಬಿಡೋದು ಹೈಕಮಾಂಡ್‌ಗೆ ಬಿಟ್ಟ ವಿಚಾರ'- ಪರಮೇಶ್ವರ್‌

03:11 PM Jan 17, 2024 IST | Bcsuddi
Advertisement

ಬೆಂಗಳೂರು: ಸಿಎಂ ಬದಲಾವಣೆ ಮಾಡೋದು, ಬಿಡೋದು ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.

Advertisement

ಲೋಕಸಭೆಯಲ್ಲಿ ಹೆಚ್ಚು ಸ್ಥಾನ ಗೆದ್ದರೆ 5 ವರ್ಷ ಸಿದ್ದರಾಮಯ್ಯ ಸಿಎಂ ಆಗಿ ಇರಲಿದ್ದಾರೆ ಎಂಬ ಯತೀಂದ್ರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಲೋಕಸಭೆಯಲ್ಲಿ ಸಿದ್ದರಾಮಯ್ಯ ಒಬ್ಬರೇ ಅಲ್ಲ. ಕೆಪಿಸಿಸಿ ಅಧ್ಯಕ್ಷರು , ನಾವೆಲ್ಲರೂ ಇದ್ದೇವೆ. ನಾವೆಲ್ಲ ಸೇರಿ 28 ಕ್ಷೇತ್ರ ಗೆಲ್ಲಬೇಕು ಅಂತ ಪ್ರಯತ್ನ ಮಾಡ್ತೀವಿ. ಅಂತಿಮವಾಗಿ ಜನ ಹೇಗೆ ಸಹಕಾರ ಕೊಡ್ತಾರೆ, ಮತ ಹಾಕ್ತಾರೆ ಅನ್ನೋದು ಜನರಿಗೆ ಬಿಟ್ಟಿದ್ದು ಎಂದು ಹೇಳಿದರು.

ನಮಗೆ ವಿಶ್ವಾಸ ಇದೆ. ಗ್ಯಾರಂಟಿ ಅನುಷ್ಠಾನ ಮಾಡಿದ್ದೇವೆ. ಜನ ಸಮುದಾಯಕ್ಕೆ ಈ ಸರ್ಕಾರದ ಬಗ್ಗೆ ಒಳ್ಳೆಯ ಅಭಿಪ್ರಾಯ ಇದೆ. ಹಾಗಾಗಿ ನಾವು ಹೆಚ್ಚು ಸ್ಥಾನ ಗೆಲ್ಲಬೇಕು ಅಂತ ಹೇಳಿ ನಾವೆಲ್ಲ ಸಂಕಲ್ಪ ಮಾಡಿದ್ದೇವೆ. ಹೈಕಮಾಂಡ್ ಕೂಡಾ ನಮಗೆ ಇದನ್ನೇ ಹೇಳಿದೆ ಎಂದರು.

ಸಿಎಂ ಮುಂದುವರಿಸೋದು, ಬದಲಾವಣೆ ಮಾಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ. ಆ ತೀರ್ಮಾನ ನಮ್ಮ ‌ಹಂತದಲ್ಲಿ ಇಲ್ಲ. ಅದನ್ನ ‌ಹೈಕಮಾಂಡ್ ನವರು ತೀರ್ಮಾನ ‌ಮಾಡ್ತಾರೆ ಎಂದರು.
ಲೋಕಸಭೆ ಚುನಾವಣೆಗಾಗಿ 28 ಸಚಿವರ ಸಭೆಯನ್ನ ದೆಹಲಿಯಲ್ಲಿ ಮಾಡಿದ್ದಾರೆ. ಒಂದೊಂದು ಕ್ಷೇತ್ರದ ಜವಾಬ್ದಾರಿ ‌ಕೊಟ್ಟಿದ್ದಾರೆ. ನಾವು ಆ ಕ್ಷೇತ್ರ ಗೆದ್ದುಕೊಂಡು ಬರಬೇಕು ಎಂದರು. ಯತೀಂದ್ರ ಅವರ ಹೇಳಿಕೆ‌ ನಮಗೆ ಗೊತ್ತಿಲ್ಲ. ಅವರ ಹೇಳಿಕೆಯನ್ನು ನಾನು ಗಮನಿಸಿಲ್ಲ ಎಂದು ಹೇಳಿದರು.

Advertisement
Next Article