For the best experience, open
https://m.bcsuddi.com
on your mobile browser.
Advertisement

ಸಿಎಂಗೆ ರಾಜ್ಯಪಾಲರು ಕೊಟ್ಟ ನೋಟಿಸ್ ತಿರಸ್ಕರಿಸಿದ ಕ್ಯಾಬಿನೆಟ್‌ : ಕಾನೂನು ಹೋರಾಟಕ್ಕೆ ನಿರ್ಣಯ

09:22 AM Aug 02, 2024 IST | BC Suddi
ಸಿಎಂಗೆ ರಾಜ್ಯಪಾಲರು ಕೊಟ್ಟ ನೋಟಿಸ್ ತಿರಸ್ಕರಿಸಿದ ಕ್ಯಾಬಿನೆಟ್‌   ಕಾನೂನು ಹೋರಾಟಕ್ಕೆ ನಿರ್ಣಯ
Advertisement

ಬೆಂಗಳೂರು: ಮುಡಾ ವಿಚಾರವಾಗಿ ಸಿಎಂ ಸಿದ್ದರಾಮಯ್ಯಗೆ ರಾಜ್ಯಪಾಲರು ನೀಡಿರುವ ಶೋಕಾಸ್ ನೋಟಿಸ್ ಹಿಂಪಡೆಯುವಂತೆ ಒತ್ತಾಯಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಗೈರಲ್ಲಿ, ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸಂಪುಟ ಸಭೆ ನಡೆಯಿತು. ಜೊತೆಗೆ, ಮುಡಾ ಸಂಬಂಧ ಕಾನೂನು ಹೋರಾಟ ಮಾಡಲು ತೀರ್ಮಾನ ಕೈಗೊಳ್ಳಲಾಗಿದ್ದು, ರಾಜ್ಯಪಾಲರ ನೋಟಿಸ್​​ಗೆ ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಯಿತು. ಸಚಿವ ಸಂಪುಟ ಸಭೆ ಬಳಿಕ ಸಚಿವರುಗಳ ಜೊತೆ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ''ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಯ್ಕೆಯಾದ ಸಿಎಂಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. ಪ್ರಜಾಪ್ರಭುತ್ವದ ಕಗ್ಗೊಲೆಯನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಕಾಂಗ್ರೆಸ್​​ಗೆ 136 ಸೀಟು ಕೊಟ್ಟು ರಾಜ್ಯದ ಜನತೆ ಆಶೀರ್ವಾದ ಮಾಡಿದ್ದಾರೆ. ಸಂವಿಧಾನಕ್ಕೆ ನಾವು ಗೌರವ ಕೊಡುತ್ತೇವೆ. ಕೇಂದ್ರ ಸರ್ಕಾರ ರಾಜ್ಯಪಾಲರನ್ನು ಬಳಸಿ ಟಿ.ಜೆ.ಅಬ್ರಾಹಂ ಎಂಬ ವ್ಯಕ್ತಿಯ ಮೂಲಕ ಸಿಎಂ ಮೇಲೆ ಅಭಿಯೋಜನೆಗೆ ಯತ್ನಿಸುತ್ತಿದೆ'' ಎಂದು ದೂರಿದರು. ರಾಜ್ಯಪಾಲರ ನಡೆಯ ವಿರುದ್ಧ ಸಂದೇಶ ರಾಜಭವನಕ್ಕೆ ಕಳುಹಿಸಲು ನಿರ್ಧರಿಸಲಾಗಿದ್ದು, ಬಳಿಕ ಕಾನೂನಾತ್ಮಕ ಹೋರಾಟಕ್ಕೆ ಸಿದ್ಧತೆ ನಡೆಸಲು ತೀರ್ಮಾನಿಸಲಾಗಿದೆ. ಕ್ಯಾಬಿನೆಟ್‌ ನಿರ್ಣಯ ರಾಜಭವನ ಮುಟ್ಟಿದ ತಕ್ಷಣ ರಾಜ್ಯಪಾಲರು ಮುಂದಿನ ನಡೆ ಕೈಗೊಳ್ಳಬಹುದು ಎಂದು ತರ್ಕಿಸಲಾಗಿದೆ. ಸರ್ಕಾರದ ನಡೆಗೆ ಅಸಮಾಧಾನ ವ್ಯಕ್ತಪಡಿಸುವ ಸಾಧ್ಯತೆಯೇ ಹೆಚ್ಚಾಗಿದೆ. ಈಗಾಗಲೇ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿರುವ ಸಾಮಾಜಿಕ ಹೋರಾಟಗಾರ ಟಿ.ಜೆ ಅಬ್ರಹಾಂಗೆ ಕೇಸು ದಾಖಲಿಸಲು ಅವರು ಅನುಮತಿ ಕೊಡುವುದು ಖಚಿತ. ಸಚಿವ ಸಂತೋಷ್ ಲಾಡ್ ಈ ಬಗ್ಗೆ ಹೇಳಿಕೆ ನೀಡಿದ್ದು, ʼರಾಜ್ಯಪಾಲರ ಶೋಕಾಸ್ ನೋಟಿಸ್‌ ತಿರಸ್ಕರಿಸಿ ನಿರ್ಣಯ ಮಾಡಿದ್ದೇವೆʼ ಎಂದಿದ್ದಾರೆ.

Author Image

Advertisement