For the best experience, open
https://m.bcsuddi.com
on your mobile browser.
Advertisement

ಸಲ್ಮಾನ್‌ ಖಾನ್‌ ಫಾರ್ಮ್‌ ಹೌಸ್‌ಗೆ ನುಗ್ಗಲು ಯತ್ನಿ - ಇಬ್ಬರ ಬಂಧನ

03:29 PM Jan 08, 2024 IST | Bcsuddi
ಸಲ್ಮಾನ್‌ ಖಾನ್‌ ಫಾರ್ಮ್‌ ಹೌಸ್‌ಗೆ ನುಗ್ಗಲು ಯತ್ನಿ   ಇಬ್ಬರ ಬಂಧನ
Advertisement

ಮುಂಬೈ: ಮಹಾರಾಷ್ಟ್ರದ ಮುಂಬೈ ಸಮೀಪದ ಪನ್ವೇಲ್‌ನಲ್ಲಿರುವ ನಟ ಸಲ್ಮಾನ್‌ ಖಾನ್‌ ಅವರ ಫಾರ್ಮ್‌ಹೌಸ್‌ಗೆ ನುಗ್ಗಲು ಯತ್ನಿಸಿದ ಇಬ್ಬರನ್ನು ಬಂಧಿಸಿರುವ ಘಟನೆ ವರದಿಯಾಗಿದೆ.

ಅಜೇಶ್ ಕುಮಾರ್ ಮತ್ತು ಗುರುಸೇವಕ್ ಸಿಂಗ್ ಬಂಧಿತರು.

ಅರ್ಪಿತಾ ಫಾರ್ಮ್‌ಹೌಸ್‌ನಲ್ಲಿರುವ ಭದ್ರತಾ ಸಿಬ್ಬಂದಿಯ ಬಳಿ ನಾವು ಸಲ್ಮಾನ್‌ ಖಾನ್‌ ಅವರ ಅಭಿಮಾನಿ, ಅವರನ್ನು ಭೇಟಿ ಆಗಬೇಕೆಂದಿದ್ದಾರೆ.

Advertisement

ಆ ಬಳಿಕ ಕಂಪೌಂಡ್ ಮೇಲೆ ಹಾರಲು ಯತ್ನಿಸಿ, ಕಂಪೌಂಡ್‌ ಮೇಲಿನ ತಂತಿಯನ್ನು ತೆಗೆಲು ಯತ್ನಿಸಿ, ಫಾರ್ಮ್‌ ಹೌಸ್‌ ಪ್ರವೇಶಿಸಲು ಹೊರಟಿದ್ದಾರೆ.

ಇನ್ನು ಸಲ್ಮಾನ್‌ ಅವರ ಚಟುವಟಿಕೆಗಳ ಬಗ್ಗೆ ಭದ್ರತಾ ಸಿಬ್ಬಂದಿಗೆ ಅನುಮಾನ ಬಂದಾಗ ಅವರು ಪೊಲೀಸರಿಗೆ ಕರೆ ಮಾಡಿ ಬಳಿಕ ಆರೋಪಿಗಳನ್ನು ಹಿಡಿದು ಪೊಲೀಸ್ ತಂಡಕ್ಕೆ ಒಪ್ಪಿಸಲಾಗಿದೆ.

Author Image

Advertisement