ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಸರ್ದಾರ್​ 2 ಸೆಟ್ ನಲ್ಲಿ ಅವಘಡ: 20 ಅಡಿ ಎತ್ತರದಿಂದ ಬಿದ್ದು ಸ್ಟಂಟ್ ಮ್ಯಾನ್ ಮೃತ್ಯು

04:02 PM Jul 17, 2024 IST | Bcsuddi
Advertisement

ಚೆನ್ನೈ: ತಮಿಳು ನಟ ಕಾರ್ತಿ ಹೊಸ ಸಿನಿಮಾ 'ಸರ್ದಾರ್​ 2' ಚಿತ್ರದ ಚಿತ್ರೀಕರಣದ ಸೆಟ್ ನಲ್ಲಿ ಅವಘಡ ಸಂಭವಿಸಿ ಸ್ಟಂಟ್ ಮ್ಯಾನ್ ಮೃತಪಟ್ಟಿರುವ ಘಟನೆ ನಡೆದಿದೆ.

Advertisement

ಸಾಹಸದೃಶ್ಯವೊಂದರ ಶೂಟಿಂಗ್ ನಡೆಯುತ್ತಿದ್ದ ವೇಳೆ ಬೃಹತ್​ ಸೆಟ್‌ನಲ್ಲಿ ಸ್ಟಂಟ್‌ಮ್ಯಾನ್ ಎಜುಮಲೈ ಸುಮಾರು 20 ಅಡಿ ಎತ್ತರದಿಂದ ಕುಸಿದುಬಿದ್ದು, ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ.

ಎಜುಮಲೈ ಆಯಕ್ಷನ್ ಸೀಕ್ವೆನ್ಸ್‌ನ ಚಿತ್ರೀಕರಣದ ವೇಳೆ ದಿಢೀರ್​ 20 ಅಡಿ ಎತ್ತರದಿಂದ ಕುಸಿದು ಬಿದ್ದು, ತೀವ್ರ ರಕ್ತಸ್ರಾವದಿಂದ ಮೃತಪಟ್ಟಿರುವುದಾಗಿ ವರದಿಯಾಗಿದೆ. ಇತ್ತೀಚೆಗಷ್ಟೇ ಮಹೂರ್ತ ಈಡೇರಿಸಿ, ಶುಭಾರಂಭ ಮಾಡಿದ್ದ ಸಿನಿಮಾ ತಂಡಕ್ಕೆ ಇದೀಗ ಎಜುಮಲೈ ಅವರ ಅಕಾಲಿಕ ಸಾವಿನಿಂದ ಅತೀವ ದುಃಖ ಉಂಟಾಗಿದೆ. ಪಿ.ಎಸ್. ಮಿತ್ರನ್ ನಿರ್ದೇಶನದ ಚಿತ್ರ ಇದಾಗಿದೆ.

ಇದೇ ಜುಲೈ 15ರಂದು 'ಸರ್ದಾರ್ 2' ಚಿತ್ರೀಕರಣ ಪ್ರಾರಂಭವಾಗಿತ್ತು.

 

Advertisement
Next Article