ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಸರ್ಕಾರಿ ಶಾಲೆಯ ಅತಿಥಿ ಶಿಕ್ಷಕನಾಗಿ ರೌಡಿಶೀಟರ್ ನೇಮಕ..!

02:49 PM Nov 05, 2024 IST | BC Suddi
Advertisement

ಯಾದಗಿರಿ: ರೌಡಿಶೀಟರ್ ಓರ್ವ ಸರ್ಕಾರಿ ಶಾಲೆಯ ಅತಿಥಿ ಶಿಕ್ಷಕನಾಗಿ ನೇಮಕಗೊಂಡಿರುವ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ರಸ್ತಾಪುರ ಸರ್ಕಾರಿ ಶಾಲೆ ಅತಿಥಿ ಶಿಕ್ಷಕನಾಗಿ ರೌಡಿಶೀಟರ್ ಭಾಗಪ್ಪ ಎಂಬಾತ ನೇಮಕಗೊಂಡಿದ್ದು, ಕಳೆದ 5 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾನೆ.
ಹಿಂದಿ ಭಾಷೆ ಶಿಕ್ಷಕನಾಗಿದ್ದಾನೆ. ರೌಡಿಶೀಟರ್ ಸರ್ಕಾರಿ ಶಾಲೆಯ ಅತಿಥಿ ಶಿಕ್ಷಕನಾಗಿದ್ದರೂ ಇಲಾಖೆ ಮಾತ್ರ ಕಣ್ಮುಚ್ಚಿ ಕುಳಿತಿದೆ.

Advertisement

ರೌಡಿಶೀಟರ್ ಶಿಕ್ಷಕನ ಉಪಟಳಕ್ಕೆ ಬೇಸತ್ತು ಉಳಿದ ಶಿಕ್ಷಕರು ಬೇರೆಡೆ ವರ್ಗಾವಣೆ ಮಾಡಿಸಿಕೊಂಡು ಹೋಗುತ್ತಿದ್ದಾರೆ. 2017ರಲ್ಲಿ ಭಾಗಪ್ಪ ವಿರುದ್ಧ ರೌಡಿಶೀಟರ್ ಓಪನ್ ಆಗಿದೆ. ಆದರೂ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದಾನೆ. ಶಾಲೆಗೆ ಕುಡಿದು ಬಂದು ವಿದ್ಯಾರ್ಥಿಗಳು, ಶಿಕ್ಷಕರ ಜೊತೆ ಜಗಳಮಾಡುವುದು, ಅಸಭ್ಯವಾಗಿ ವರ್ತಿಸುವುದು ಮಾಡುತ್ತಿದ್ದಾನೆ. ಈ ಬಗ್ಗೆ ಸಾರ್ವಜನಿಕ ಗ್ರಂಥಾಲಯದ ಮೇಲ್ವಿಚಾರಕ ಶಿವಪ್ಪ ಎಂಬುವವರು ಯಾದಗಿರಿ ಡಿಸಿಗೆ ದೂರು ನೀಡಿದ್ದು, ಭಾಗಪ್ಪನನ್ನು ವಜಾಗೊಳಿಸುವಂತೆ ಮನವಿ ಮಾಡಿದ್ದಾರೆ.

Advertisement
Next Article