ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಸರ್ಕಾರಿ ಯೋಜನೆಯ ಆಸೆಗೆ ಸಹೋದರನನ್ನೆ ಮದುವೆಯಾದ ಸಹೋದರಿ

12:01 PM Mar 19, 2024 IST | Bcsuddi
Advertisement

ಉತ್ತರ ಪ್ರದೇಶ: ರಾಜ್ಯದ ಸರ್ಕಾರವು ಜಾರಿಗೊಳಿಸಿರುವ ಮುಖ್ಯಮಂತ್ರಿಗಳ ಸಾಮೂಹಿಕಾ ವಿವಾಹ ಯೋಜನೆಯ ಲಾಭ ಪಡೆಯಲು ಬಹಳಷ್ಟು ಜನ ಕಾಯುತ್ತಿರುತ್ತಾರೆ. ಈಗಾಗಲೇ ಒಂದಿಲ್ಲೊಂದು ವಿಚಿತ್ರ ಘಟನೆಗಳು ನೆಡಯುತ್ತಲೇ ಇವೆ.ಇದೀಗ ಇಂತಹದ್ದೇ ಒಂದು ಘಟನೆ ನಡೆದಿದ್ದು ಯೋಜನೆಯ ಲಾಭ ಪಡೆಯಲು ಸ್ವಂತ ಅಕ್ಕ ತನ್ನ ಸಹೋದರನ್ನು ವಿವಾಹವಾಗಿದ್ದಾಳೆ. ಈ ಘಟನೆ ಮಹಾರಾಜ್‌ಗಂಜ್‌ನಲ್ಲಿ ನಡೆದಿದೆ.

Advertisement

ಏನಿದು ಯೋಜನೆ ಎಂದು ನೋಡುವುದಾದರೆ, ಮುಖ್ಯಮಂತ್ರಿಗಳ ಸಾಮೂಹಿಕ ವಿವಾಹ ಯೋಜನೆಯಡಿ ಯೋಗಿ ಆದಿತ್ಯನಾಥ್ ಸರ್ಕಾರ ವತಿಯಿಂದ ಸಾಮೂಹಿಕ ಮದುವೆ ಆಯೋಜಿಸಲಾಗುತ್ತದೆ ಹಾಗೂ ನವ ದಂಪತಿಗಳಿ ಯೋಜನೆಯಡಿ ಗೃಹೋಪಯೋಗಿ ವಸ್ತುಗಳು ಹಾಗೂ ರೂ. 35 ಸಾವಿರ ನಗದು ನೀಡಲಾಗುವುದು.

ಹಾಗಾಗಿ ಈ ಯೋಜನೆಯ ಲಾಭ ಪಡೆಯಲು ಸಹೋದರನ್ನನೆ ವಿವಾಹವಾದ ಘಟನೆ ನಡೆದಿದೆ. ಮಧ್ಯವರ್ತಿಗಳ ಒತ್ತಾಯದ ಮೇರೆಗೆ ವಿವಾಕ್ಕೆ ತಯಾರಿ ನಡೆಸಿದ್ದಾರೆ ನಂತರ ನಿಯೋಜಿತ ವರ ಸಮಯಕ್ಕೆ ಬರಲಿಲ್ಲವೆಂದು ಸ್ವಂತ ತಮ್ಮನ ಮನವೊಲಿಸಿದ ಮಧ್ಯವರ್ತಿಗಳು ಅಕ್ಕನ ಜೊತೆ ವಿವಾಹ ಮಾಡಿಸಿದ್ದಾರೆ. ವಿಷೇಶ ಏನೆಂದರೆ ಆಕೆಗೆ ಈಗಾಗಲೇ ಮದುವೆ ಆಗಿ ಪತಿ ಬೇರೆ ಕಡೆ ಕೆಲಸದಲ್ಲಿದ್ದಾನೆ . ಮಾಹಿತಿ ಸಿಕ್ಕ ಕೂಡಲೇ ಅಧಿಕಾರಿಗಳು ಎಚ್ಚೆತ್ತರು. ಮಹಾರಾಜಗಂಜ್‌ನ ಪ್ರದೇಶಾಭಿವೃದ್ಧಿ ಅಧಿಕಾರಿಗಳು (ಬಿಡಿಒ) ದಂಪತಿಗೆ ನಿಗದಿಪಡಿಸಿದ ಪೀಠೋಪಕರಣಗಳು ಮತ್ತು ಹಣವನ್ನು ಹಿಂಪಡೆದಿದ್ದಾರೆ

Advertisement
Next Article