For the best experience, open
https://m.bcsuddi.com
on your mobile browser.
Advertisement

ಸರ್ಕಾರಿ ಬಸ್ಸಿನಲ್ಲಿ ಸೀಟಿಗಾಗಿ ಚಪ್ಪಲಿಯಲ್ಲಿ ಹೊಡೆದಾಡಿದ ಮಹಿಳೆಯರು

03:42 PM Oct 25, 2024 IST | BC Suddi
ಸರ್ಕಾರಿ ಬಸ್ಸಿನಲ್ಲಿ ಸೀಟಿಗಾಗಿ ಚಪ್ಪಲಿಯಲ್ಲಿ ಹೊಡೆದಾಡಿದ ಮಹಿಳೆಯರು
Advertisement

ಬೆಳಗಾವಿ : ಸರ್ಕಾರಿ ಬಸ್ಸಿನಲ್ಲಿ ಸೀಟಿಗಾಗಿ ಮಹಿಳೆಯರಿಬ್ಬರು ಹೊಡೆದಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

ಮಹಿಳೆಯರು ಸವದತ್ತಿ ರೇಣುಕಾ ಯಲ್ಲಮ್ಮದೇವಿ ದರ್ಶನ ಪಡೆಯಲು ಸವದತ್ತಿಗೆ ಹೋಗುವ ಬಸ್ಸನ್ನು ಹತ್ತಿದ್ದಾರೆ. ಈ ವೇಳೆ ಬಸ್‌ನಲ್ಲಿ ಸೀಟ್ ನನ್ನದು ನನ್ನದು ಎಂದು ಮಹಿಳೆಯರ ಮಧ್ಯೆ ಜಗಳ ಆರಂಭವಾಗಿದೆ.

ಮೊದಲಿಗೆ ಮಹಿಳೆಯರು ಪರಸ್ಪರ ಬೈದಾಡಿಕೊಂಡಿದ್ದಾರೆ. ನಂತರ ಗಲಾಟೆ ತಾರಕ್ಕೇರಿ ಕೈಕೈ ಮಿಲಾಯಿಸಿ ಚಪ್ಪಲಿಯಲ್ಲಿ ಹೊಡೆದಾಡಿದ್ದಾರೆ. ಜಗಳದ ವೇಳೆ ಅಡ್ಡ ಬಂದ ಬಾಲಕಿಗೂ ಚಪ್ಪಲಿಯಿಂದ ಮಹಿಳೆ ಹೊಡೆದಿದ್ದಾಳೆ.

Advertisement

Author Image

Advertisement