For the best experience, open
https://m.bcsuddi.com
on your mobile browser.
Advertisement

ಸರ್ಕಾರದ 'ಸ್ವಾವಲಂಬಿ ಸಾರಥಿ' ಯೋಜನೆ ಅಡಿಯಲ್ಲಿ ವಾಹನ ಖರೀದಿಸಲು ಸಿಗಲಿದೆ 3 ಲಕ್ಷ ಸಬ್ಸಿಡಿ- ಅರ್ಜಿ ವಿಸ್ತರಣೆ, 2 ವಾರ ಬಾಕಿ ಈಗಲೇ ಅರ್ಜಿ ಸಲ್ಲಿಸಿ

11:10 AM Sep 02, 2024 IST | BC Suddi
ಸರ್ಕಾರದ  ಸ್ವಾವಲಂಬಿ ಸಾರಥಿ  ಯೋಜನೆ ಅಡಿಯಲ್ಲಿ ವಾಹನ ಖರೀದಿಸಲು ಸಿಗಲಿದೆ 3 ಲಕ್ಷ ಸಬ್ಸಿಡಿ  ಅರ್ಜಿ ವಿಸ್ತರಣೆ  2 ವಾರ ಬಾಕಿ ಈಗಲೇ ಅರ್ಜಿ ಸಲ್ಲಿಸಿ
Advertisement

ಸ್ವಾವಲಂಬಿ ಸಾರಥಿ ಯೋಜನೆಯ ಮೂಲಕ ಒಬ್ಬ ಕುಟುಂಬಸ್ಥನೂ ನಾಲ್ಕು ಚಕ್ರದ ವಾಹನವನ್ನು ಖರೀದಿಸಲು ಸರ್ಕಾರವು ಸಬ್ಸಿಡಿಯ ಮೂಲಕ ಆರ್ಥಿಕ ಸಹಾಯವನ್ನು ನೀಡುತ್ತಿದ.. ಅಷ್ಟೇ ಅಲ್ಲದೆ ಈ ಯೋಜನೆಗೆ ಯಾವುದೇ ಕೆಲವರ್ಗ ಮತ್ತು ಬಡ ರೇಖೆಗಿಂತ ಕೆಳಗಿರುವ ಕುಟುಂಬಸ್ಥರು ಈ ಯೋಜನೆ ಅಡಿಯಲ್ಲಿ 3 ಲಕ್ಷ ಸಬ್ಸಿಡಿಯನ್ನು ಪಡೆಯುವ ಮೂಲಕ ನಾಲ್ಕು ಚಕ್ರದ ವಾಹನಗಳನ್ನು ಖರೀದಿಸುವ ಮೂಲಕ ಸ್ವಂತ ಉದ್ಯೋಗವನ್ನು ಪ್ರಾರಂಭಿಸಬಹುದು.

ಅಂದರೆ ಈ ಯೋಜನೆ ಅಡಿಯಲ್ಲಿ ಒಬ್ಬ ವ್ಯಕ್ತಿಯು ಕಾರು ಅಥವಾ ಗೂಡ್ ವಾಹನಗಳಂತಹ ನಾಲ್ಕು ಚಕ್ರದ ವಾಹನಗಳನ್ನು ಖರೀದಿಸುವ ಮೂಲಕಸ್ವಂತ ಉದ್ಯೋಗವನ್ನು ಪ್ರಾರಂಭಿಸಬಹುದು .

ಯೋಜನೆಗೆ ಸಬ್ಸಿಡಿ ಪಡೆಯಲು ಬೇಕಾಗುವ ಅರ್ಹತೆಗಳು.?

Advertisement

  • ಈ ಯೋಜನೆಗೆ ಅರ್ಜಿ ಸಲ್ಲಿಸುವ ಅರ್ಜಿದಾರನು ಕನಿಷ್ಠ 21ರಿಂದ 45 ವರ್ಷದೊಳಗಿನ ನಿರುದ್ಯೋಗಿ ಆಗಿರಬೇಕು.
  • ಅಷ್ಟೇ ಅಲ್ಲದೆ ಆ ಕುಟುಂಬಸ್ಥನ ವಾರ್ಷಿಕ ಆದಾಯವು 1.5 ಲಕ್ಷಕ್ಕಿಂತ ಮೇಲ್ಪಟ್ಟಿರಬಾರದು,.
  • ಜೊತೆಗೆ ಆ ವ್ಯಕ್ತಿಯು ಸಾರಿಗೆ ಅಧಿಕಾರಿಯಿಂದ ನೀಡಲಾದ (DL) ಡ್ರೈವಿಂಗ್ ಲೈಸೆನ್ಸ್ ನನ್ನು ಹೊಂದಿರಬೇಕು. ಆ ಕುಟುಂಬದ ಯಾವುದೇ ಸದಸ್ಯನೋ ಸರಕಾರಿ ಉದ್ಯೋಗದ ಅಡಿಯಲ್ಲಿ , ಕಾರ್ಯನಿರ್ವಹಿಸಿದ ಬಾರದು.
  • ಅಷ್ಟೇ ಅಲ್ಲದೆ ಅರ್ಜಿ ಸಲ್ಲಿಸುವ ಕುಟುಂಬಸ್ಥರು ಭಾರತದ ಬಡತನ ರೇಖೆಗಿಂತ ಕೆಳಗಿರುವವರು ಮತ್ತು ಹಿಂದುಳಿದ ವರ್ಗದವರಾಗಿರಬೇಕು.
  • ಅರ್ಜಿ ಸಲ್ಲಿಸಲು ಬೇಕಾಗುವ ಮುಖ್ಯ ದಾಖಲೆಗಳು.?
    1. ಆಧಾರ್ ಕಾರ್ಡ್
    2. ಬ್ಯಾಂಕ್ ಪಾಸ್ ಬುಕ್
    3. ಆದಾಯ ದೃಡೀಕರಣ ಪತ್ರ / ಜಾತಿ ದೃಢೀಕರಣ ಪತ್ರ
    4. (DL) ಡ್ರೈವಿಂಗ್ ಲೈಸೆನ್ಸ್
    5. ಫೋಟೋ
    6. ಮೊಬೈಲ್ ನಂಬರ್

ಈ ಮೊದಲು ಮೇಲೆ ತಿಳಿಸಿರುವ ನಿಗಮ ಯೋಜನೆಗಳಿಗೆ ಅರ್ಜಿ ಸಲ್ಲಿಸಲು 31 ಆಗಸ್ಟ್ 2024 ಕೊನೆಯ ದಿನಾಂಕ ಎಂದು ನಿಗದಿಪಡಿಸಲಾಗಿತ್ತು ಇನ್ನು ಹಲವು ಅರ್ಹ ಅರ್ಜಿದಾರರು ಅರ್ಜಿ ಸಲ್ಲಿಸುವುದು ಬಾಕಿಯಿರುವ ಕಾರಣ ಈಗ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು 15 ಸೆಪ್ಟೆಂಬರ್ 2024ಗೆ ಮುಂದೂಡಿಕೆ ಮಾಡಲಾಗಿದೆ

ಎಲ್ಲಾ ಮುಖ್ಯ ದಾಖಲೆಗಳನ್ನು ಹೊಂದಿಸಿಕೊಂಡು. ನಿಮ್ಮ ಹತ್ತಿರದ ಗ್ರಾಮ ಓನ್/ ಕರ್ನಾಟಕ ಓನ್/ ಬೆಂಗಳೂರು ಓನ್ ನಾಗರಿಕ ಸೇವ ಕೇಂದ್ರಗಳಲ್ಲಿ, ಈ ಯೋಜನೆಗೆ ನಿಮ್ಮ ದಾಖಲೆಗಳನ್ನು ನೀಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

.ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ

Author Image

Advertisement