For the best experience, open
https://m.bcsuddi.com
on your mobile browser.
Advertisement

ಸಮುದ್ರದಲ್ಲಿ ವಿಮಾನ ಪತನ, ಹಾಲಿವುಡ್ ನಟ ಸೇರಿ ಇಬ್ಬರು ಪುತ್ರಿಯರು ಸಾವು

10:48 AM Jan 06, 2024 IST | Bcsuddi
ಸಮುದ್ರದಲ್ಲಿ ವಿಮಾನ ಪತನ  ಹಾಲಿವುಡ್ ನಟ ಸೇರಿ ಇಬ್ಬರು ಪುತ್ರಿಯರು ಸಾವು
Advertisement

ಲಾಸ್ ಎಂಜಲೀಸ್: ಕೆರೆಬಿಯನ್ ದ್ವೀಪದ ಕರಾವಳಿಯಲ್ಲಿನಡೆದ ವಿಮಾನ ಅಪಘಾತದಲ್ಲಿ ಹಾಲಿವುಡ್ ನಟ ಕ್ರಿಶ್ಚಿಯನ್ ಆಲಿವರ್ ಮತ್ತು ಅವರ ಇಬ್ಬರು ಪುತ್ರಿಯರು ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಜರ್ಮನ್ ಮೂಲದ ಹಾಲಿವುಡ್ ನಟ ಕ್ರಿಸ್ಟಿಯನ್ ಆಲಿವರ್ ಮತ್ತು ಅವರ ಇಬ್ಬರು ಪುಟ್ಟ ಹೆಣ್ಣುಮಕ್ಕಳು ಪ್ರಯಾಣಿಸುತ್ತಿದ್ದ ಸಣ್ಣ ವಿಮಾನವು ಟೇಕ್ ಆಫ್ ಆದ ನಂತರ ಕೆರಿಬಿಯನ್ ಸಮುದ್ರಕ್ಕೆ ಅಪ್ಪಳಿಸಿತು ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ಇವರು ಸೇಂಟ್ ಲೂಸಿಯಾಕ್ಕೆ ಹೋಗುತ್ತಿದ್ದಾಗ ಬೆಕ್ವಿಯಾ ಬಳಿಯ ಪೆಟಿಟ್ ನೆವಿಸ್ ದ್ವೀಪದ ಪಶ್ಚಿಮದಲ್ಲಿ ತಾಂತ್ರಿಕ ತೊಂದರೆಗೆ ಒಳಗಾಗಿ ಸಮುದ್ರದಲ್ಲಿ ಪತನಗೊಂಡಿದೆ. ಪರಿಣಾಮ ಕ್ರಿಶ್ಚಿಯ ಆಲಿವರ್ (51), ಅವರ ಪುತ್ರಿಯರಾದ ಮಡಿತಾ (10), ಅನ್ನಿಕ್ (12) ಮತ್ತು ಪೈಲಟ್ ರಾಬರ್ಟ್ ಸ್ಯಾಚ್ಸ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ವಿಮಾನ ಸಮುದ್ರದಲ್ಲಿ ಪತನಗೊಳ್ಳುತ್ತಿದ್ದಂತೆ ಮೀನುಗಾರರು, ಮುಳುಗುತಜ್ಞರು ಮತ್ತು ಕೋಸ್ಟ್ ಗಾರ್ಡ್ ಸಿಬಂದಿಗಳು ಸ್ಥಳಕ್ಕೆ ಧಾವಿಸಿ, ಆಲಿವರ್ ಅವರ ಪುತ್ರಿಯರಾದ ಆನಿಕ್ ಮತ್ತು ಮಡಿತಾ ಕ್ಲೆಪ್ಸರ್ ಮತ್ತು ವಿಮಾನದ ಪೈಲಟ್ ಸೇರಿದಂತೆ ನಾಲ್ವರ ಶವಗಳನ್ನು ಹೊರತೆಗೆದಿದ್ದಾರೆ.

Advertisement

ಆಲಿವರ್, ಕ್ರಿಶ್ಚಿಯನ್ ಕ್ಲೆಪ್ಸರ್‌ನಲ್ಲಿ ಜನಿಸಿದರು, 60 ಕ್ಕೂ ಹೆಚ್ಚು ಚಲನಚಿತ್ರ ಮತ್ತು ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ.

Author Image

Advertisement