ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಸಂಸತ್ ಭವನದ ರಕ್ಷಣೆ ಹೊಣೆ CISF ಹೆಗಲಿಗೆ..!

05:15 PM Dec 21, 2023 IST | Bcsuddi
Advertisement

ನವದೆಹಲಿ : ಸಂಸತ್‌ ಭವನದ ಭದ್ರತಾ ಜವಾಬ್ದಾರಿಯನ್ನು ದೆಹಲಿ ಪೊಲೀಸರಿಂದ ಹಿಂಪಡೆದ ಕೇಂದ್ರ ಸರ್ಕಾರ ಸಿಐಎಸ್‌ಎಫ್ ಹೆಗಲಿಗೇರಿಸಿದೆ.

Advertisement

ಸಂಸತ್ ಭವನದಲ್ಲಿ ಲೋಕಸಭೆ ಅಧಿವೇಶನ ನಡೆಯುತ್ತಿರುವಾಗಲೇ ಸಂಸತ್‌ ಪ್ರೇಕ್ಷಕರ ಗ್ಯಾಲರಿಯಿಂದ ನುಗ್ಗಿದ ಕಿಡಿಗೇಡಿಗಳು ದಾಂಧಲೆ ನಡೆಸಿದ್ದರು. ಸಂಸತ್ ಭದ್ರತಾ ಲೋಪಕ್ಕೆ ಇಡೀ ದೇಶವೇ ಬೆಚ್ಚಿ ಬಿದ್ದಿತ್ತು. ಇದೀಗ ಎಚ್ಚೆತ್ತುಕೊಂಡ ಕೇಂದ್ರ ಗೃಹ ಸಚಿವಾಲಯ ಸಂಸತ್‌ಗೆ ಭದ್ರತೆ ನೀಡುತ್ತಿದ್ದ ದೆಹಲಿ ಪೊಲೀಸರನ್ನು ಬದಲಾಯಿಸಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆಗಳಿಗೆ (CISF) ಭದ್ರತಾ ಹೊಣೆ ನೀಡಿದೆ.

ಪ್ರವೇಶಿಸುವವರನ್ನು ಪರೀಕ್ಷಿಸುವುದು ಸೇರಿದಂತೆ ಎಲ್ಲಾ ಹೊಣೆ ಸಿಐಎಸ್‌ಎಫ್‌ ಹೆಗಲೇರಿದೆ. ಸಂಸತ್ ಭದ್ರತೆಯ ಎಲ್ಲಾ ಜವಾಬ್ದಾರಿಗಳನ್ನು ಸಿಐಎಸ್‌ಎಫ್‌ ತೆಗೆದುಕೊಳ್ಳುತ್ತದೆ ಎಂದು ಗೃಹ ಸಚಿವಾಲಯ ತಿಳಿಸಿದೆ.ಆದ್ರೆ ಕಟ್ಟಡದೊಳಗಿನ ಭದ್ರತೆ ಲೋಕಸಭೆಯ ಸಚಿವಾಲಯದ ಜವಾಬ್ದಾರಿಯಾಗಿ ಮುಂದುವರಿಯುತ್ತದೆ,
CISF ಬಗ್ಗೆ ಒಂದಿಷ್ಟು:
CISF 1969 ರಲ್ಲಿ ಅಸ್ಥಿತ್ವಕ್ಕೆ ಬಂದ ಪೂರ್ಣ ರೂಪ ಕೇಂದ್ರ ಕೈಗಾರಿಕಾ ಭದ್ರತಾ ಪಡೆ.ಪ್ರಸ್ತುತ 1, 74,000 ಯೋಧರನ್ನು ಒಳಗೊಂಡ ಭಾರತದ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯಾಗಿದೆ. ಇದು ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಪ್ರಧಾನ ಕಚೇರಿಯು ನವದೆಹಲಿಯಲ್ಲಿದೆ. CISF ದೆಹಲಿ ಮೆಟ್ರೋ, ಸರ್ಕಾರಿ ಕಟ್ಟಡಗಳು, ದೇಶದ ಅನೇಕ ವಿಮಾನ ನಿಲ್ದಾಣಗಳು, ಸಮುದ್ರ ಬಂದರುಗಳು ಮತ್ತು ಪರಮಾಣು ಸೌಲಭ್ಯಗಳನ್ನು ಒಳಗೊಂಡಂತೆ 350 ಕ್ಕೂ ಹೆಚ್ಚು ಸ್ಥಳಗಳ ರಕ್ಷಣೆಯ ಹೊಣೆ ಹೊತ್ತಿದೆ.

Advertisement
Next Article