For the best experience, open
https://m.bcsuddi.com
on your mobile browser.
Advertisement

ಸಂಸತ್‌ ಭದ್ರತಾ ವೈಫಲ್ಯ -ಖಾಲಿ ಗ್ಯಾಸ್‌ ಕ್ಯಾನ್ ತೋರಿಸಲು ಟಿವಿ ವರದಿಗಾರರ ಕಿತ್ತಾಟ

09:42 AM Dec 14, 2023 IST | Bcsuddi
ಸಂಸತ್‌ ಭದ್ರತಾ ವೈಫಲ್ಯ  ಖಾಲಿ ಗ್ಯಾಸ್‌ ಕ್ಯಾನ್ ತೋರಿಸಲು ಟಿವಿ ವರದಿಗಾರರ ಕಿತ್ತಾಟ
Advertisement

ನವದೆಹಲಿ: ಸಂಸತ್‌ನಲ್ಲಿ ನಡೆದ ಹಳದಿ ಗ್ಯಾಸ್‌ ದಾಳಿ ಪ್ರಕರಣದ ವರದಿಯನ್ನು ಮಾಡುವ ವೇಳೆ ಗ್ಯಾಸ್‌ ಕ್ಯಾನಿಸ್ಟರ್‌ ನ್ನು ಟಿವಿಯಲ್ಲಿ ತೋರಿಸಲು ಮಾಧ್ಯಮದ ವರದಿಗಾರರು ಪರಸ್ಪರ ಕಿತ್ತಾಡಿರುವ ಘಟನೆ ನಡೆದಿದೆ.

ಇದೀಗ ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಖತ್‌ ವೈರಲ್‌ ಆಗಿದೆ.ಪ್ರತಿಭಟನಾಕಾರರು ಸಿಡಿಸಿದ ಗ್ಯಾಸ್‌ ಕ್ಯಾನಿಸ್ಟರ್‌ನ ಖಾಲಿ ಡಬ್ಬವನ್ನು ಹಿಡಿದು ಟಿವಿ 9 ವರದಿಗಾರರೊಬ್ಬರು ಲೈವ್‌ ನಲ್ಲಿ ಮಾತಾಡುತ್ತಿರುವಾಗಲೇ ಉಳಿದ ಪತ್ರಕರ್ತರು ಅದನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾರೆ.

ಈ ವೇಳೆ ಪತ್ರಕರ್ತರು ಪರಸ್ಪರ ಎಳೆದಾಡಿಕೊಂಡ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಝೀ ನ್ಯೂಸ್‌, ಟಿವಿ 9, ನ್ಯೂಸ್‌ 18, ವರದಿಗಾರರು ತಮ್ಮ ಸಂಸ್ಥೆಯ ಲೋಗೋ ಇರುವ ಮೈಕ್‌ಗಳನ್ನು ಕೈಯಲ್ಲಿ ಹಿಡಿದುಕೊಂಡೇ ಎಳೆದಾಟದಲ್ಲಿ ಭಾಗಿಯಾಗಿದ್ದಾರೆ.ನಮ್ಮ ಟಿ.ವಿಯಲ್ಲಿ ಮೊದಲು ಸುದ್ದಿ ಬ್ರೇಕ್‌ ಆಗಬೇಕು ಎಂಬ ಕಾತರದಲ್ಲಿ ಟಿವಿ ಮಾಧ್ಯಮಗಳ ಗಲಾಟೆಯನ್ನು ನೆಟ್ಟಿಗರು ಟ್ರೋಲ್‌ ಮಾಡಿದ್ದು ವೈರಲ್‌ ಆಗಿದೆ.

Advertisement

Author Image

Advertisement