For the best experience, open
https://m.bcsuddi.com
on your mobile browser.
Advertisement

ಸಂಸತ್ ಉಲ್ಲಂಘನೆ ಪ್ರಕರಣ : ಅಹಮದಾಬಾದ್ ನಲ್ಲಿ ಆರೋಪಿಗಳ ಮಂಪರು ಪರೀಕ್ಷೆ

02:43 PM Jan 11, 2024 IST | Bcsuddi
ಸಂಸತ್ ಉಲ್ಲಂಘನೆ ಪ್ರಕರಣ   ಅಹಮದಾಬಾದ್ ನಲ್ಲಿ ಆರೋಪಿಗಳ ಮಂಪರು ಪರೀಕ್ಷೆ
Advertisement

ನವದೆಹಲಿ: ಸಂಸತ್ತಿನ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಎಲ್ಲಾ ಆರು ಮಂದಿಯ ಪಾಲಿಗ್ರಾಫ್ ಮತ್ತು ಮಂಪರು ಪರೀಕ್ಷೆಗೆ ದೆಹಲಿ ಪೊಲೀಸರ ವಿಶೇಷ ಸೆಲ್ ಸಿದ್ದತೆ ನಡೆಸುತ್ತಿದ್ದು, ಈಗಾಗಲೇ ಗುಜರಾತ್ ತಲುಪಿದೆ.

ಆರೋಪಿಗಳನ್ನು ಸುಳ್ಳು ಪತ್ತೆ ಪರೀಕ್ಷೆ ಗೆ ಒಳಪಡಿಸಲು ಅನುಮತಿ ಕೋರಿ ದೆಹಲಿ ಪೊಲೀಸರು ಈ ಹಿಂದೆ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಪೈಕಿ ನೀಲಂಆಜಾದ್ ಹೊರತುಪಡಿಸಿ ಉಳಿದ ಆರೋಪಿಗಳು ಪರೀಕ್ಷೆಗೆ ಒಪ್ಪಿ ಗೆ ನೀಡಿದ್ದರು.

ನ್ಯಾಯಾಲಯದ ಆದೇಶದ ಮೇರೆಗೆ ದೆಹಲಿ ಪೊಲೀಸ್ ವಿಶೇಷ ಘಟಕದ ತಂಡ ಗುಜರಾತ್ ಅಹಮದಾಬಾದ್ ನಲ್ಲಿದ್ದು ಮನೋರಂಜನ್ ಡಿ ಮತ್ತು ಸಾಗರ್ ಶರ್ಮಾ ಅವರಿಗೆ ದೇಶದ ಪ್ರಮುಖ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಮಂಪರು ಪರೀಕ್ಷೆ ನಡೆಸಲಾಗುತ್ತಿದೆ. ಶುಕ್ರವಾರದ ವೇಳೆಗೆ ಎಲ್ಲಾ ಪರೀಕ್ಷೆಗಳು ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಎಲ್ಲಾ ಐವರು ಆರೋಪಿಗಳನ್ನು ಪಾಲಿಗ್ರಾಫ್ ಪರೀಕ್ಷೆಗೆ ಒಳಪಡಿಸಲಾಗುವುದು. ಅದೇ ಸಮಯದಲ್ಲಿ, ಸಾಗರ್ ಮತ್ತು ಮನೋರಂಜನ್ ಅವರು ಮಂಪರು ಪರೀಕ್ಷೆ ಮತ್ತು ಬ್ರೈನ್ ಮ್ಯಾಪಿಂಗ್ ಪರೀಕ್ಷೆಗಳಿಗೆ ಒಳಗಾಗಲಿದ್ದಾರೆ ಎನ್ನಲಾಗಿದೆ.

Advertisement

ಪ್ರಕರಣದ ಹಿನ್ನಲೆ:
ಸಂಸರ್ ಮೇಲಿನ ದಾಳಿಯ 22ನೇ ವರ್ಷದ ಕಹಿ ನೆನಪಿನ ದಿನವೇ( 2023ರ ಡಿ.13) ಭಾರಿ ಭದ್ರತಾಲೋಪದ ಘಟನೆಗೆ ಲೋಕಸಭೆ ಸಾಕ್ಷಿಯಾಗಿತ್ತು . ಕಲಾಪ ನಡೆಯುತ್ತಿರುವಾಗಲೇ ಇಬ್ಬರು ಯುವಕರು ಸಂದರ್ಶಕರ ಗ್ಯಾ ಲರಿಯಿಂದ ಸದನದೊಳಗೆ ಜಿಗಿದು ಘೋಷಣೆಗಳನ್ನು ಕೂಗುತ್ತಾ ‘ಸ್ಮೋ ಕ್ ಕ್ಯಾ ನ್’ ಹಾರಿಸಿ ದಾಂದಲೆ ಎಬ್ಬಿ ಸಿದರು. ಇದರಿಂದಾಗಿ, ಸದನದಲ್ಲಿ ಆತಂಕ ಸೃಷ್ಟಿ ಯಾಗಿತ್ತು

Author Image

Advertisement