ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಶ್ರೀ ಗೌರಸಂದ್ರ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವದ ವಿವರ.!

07:50 AM Sep 15, 2024 IST | BC Suddi
Advertisement

ಚಿತ್ರದುರ್ಗ:  ನಗರದ ಹೊಳಲ್ಕೆರೆ ರಸ್ತೆಯಲ್ಲಿರುವ ಶ್ರೀ ಗೌರಸಂದ್ರ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಸಂಜೆ ಅಮ್ಮನವರಿಗೆ ಮದಲಿಂಗಿತ್ತಿ ಶಾಸ್ತ್ರ ನೆರವೇರಿಸಲಾಯಿತು.

Advertisement

ಸೆ.13 ರಿಂದ 19 ರವರೆಗೆ ಜಾತ್ರಾ ಮಹೋತ್ಸವ ಆಯೋಜಿಸಿದ್ದು, ಶುಕ್ರವಾರ ಮದಲಿಂಗಿತ್ತಿ ಶಾಸ್ತ್ರ ಕಂಕಣಧಾರಣೆ ಸೇರಿದಂತೆ ಮತ್ತಿತರ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಪ್ರಯುಕ್ತ ಗರ್ಭಗುಡಿ ಹಾಗೂ ಉತ್ಸವ ಮೂರ್ತಿಗಳಿಗೆ ಆಭರಣಗಳು ಸೇರಿದಂತೆ ಬಗೆ ಬಗೆಯ ಪುಷ್ಪಗಳಿಂದ ಮನಮೋಹಕವಾಗಿ ಅಲಂಕರಿಸಲಾಗಿತ್ತು. ಪೂಜೆಯ ನಂತರ ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಕಲ್ಪಿಸಲಾಗಿತ್ತು.

ಸೆ.16 ರ ರಾತ್ರಿ 11 ಕ್ಕೆ ಹೊಳೆಪೂಜೆ, ಸೆ.17 ರ ಬೆಳಗ್ಗೆ 6 ರಿಂದ ರಾತ್ರಿ 9 ರವರೆಗೆ ಹಿಟ್ಟಿನ ಆರತಿ ಮತ್ತು ಬೇವಿನ ಸೀರೆ ಹರಕೆ ಕಾರ್ಯಕ್ರಮ. ಸೆ.18 ರ ರಾತ್ರಿ 8 ಕ್ಕೆ ಅಗ್ನಿಕುಂಡ ಕಾರ್ಯಕ್ರಮ ಸೆ.19 ರ ಬೆಳಗ್ಗೆ 11 ಕ್ಕೆ ಓಕಳಿ ಸೇವೆ ಮತ್ತು ಮುರುಘರಾಜೇಂದ್ರ ಮಠಕ್ಕೆ ತೆರಳಿ ರಾಜ ಬೀದಿಗಳಲ್ಲಿ ಮೆರೆವಣಿಗೆ ಮುಖಾಂತರ ರಾತ್ರಿ 11 ಕ್ಕೆ ದೇವಿಯ ಗರ್ಭಗುಡಿ ಪ್ರವೇಶ ಕಾರ್ಯಕ್ರಮಗಳು ಜರುಗಲಿವೆ ಎಂದು ಜಾತ್ರಾ ಮಹೋತ್ಸವ ಹಾಗೂ ದೇವಸ್ಥಾನದ ಕಾರ್ಯಕಾರಿ ಸಮಿತಿ ಅಧ್ಯಕ್ಷ ಈ.ಚಂದ್ರಶೇಖರ್, ಉಪಾಧ್ಯಕ್ಷ ಜೆ.ಎಸ್.ಗುರುಮೂರ್ತಿ, ಕಾರ್ಯದರ್ಶಿ ಓ.ಬಿ.ಬಸವರಾಜಪ್ಪ, ಖಜಾಂಚಿ ಸಿ.ಎನ್.ಬಾಬು, ಸದಸ್ಯರಾದ ಜಿ.ರವಿಕುಮಾರ್, ಬಾಲಾಜಿ, ಕಿರಣ್, ರಂಗಣ್ಣ, ರಾಜು, ವಿವೇಕಾನಂದ, ನಂದನ್, ದೇವರಾಜ್ ಸಿದ್ದಣ್ಣ, ಧರ್ಮಣ್ಣ, ಲಚಿಕೇತನ್ (ಅಂಜು) ಅರ್ಚಕ ಟಿ.ಗಂಗಾರಪ್ಪ ಮತ್ತು ಸಹೋದರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.

 

Tags :
ಶ್ರೀ ಗೌರಸಂದ್ರ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ
Advertisement
Next Article