ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸೆ.22-29ರವರೆಗೆ 26ನೇ ವರ್ಷದ ಭಜನಾ ಕಮ್ಮಟ

11:19 AM Jul 24, 2024 IST | Bcsuddi
Advertisement

ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ 26ನೇ ವರ್ಷದ ಭಜನಾ ಕಮ್ಮಟವು ಸೆಪ್ಟೆಂಬರ್ 22ರಿಂದ ಸೆಪ್ಟೆಂಬರ್ 29ರವರೆಗೆ ನಡೆಯಲಿದೆ. ಕೊನೆಯ ದಿನ ಭಜನೋತ್ಸವದೊಂದಿಗೆ ಸಮಾಪನಗೊಳ್ಳಲಿದೆ. ಭಜನಾ ಕಮ್ಮಟದಲ್ಲಿ ಭಾಗವಹಿಸಲು ಅರ್ಹ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ.

Advertisement

ಅರ್ಹತೆಗಳು ಈ ಕೆಳಗಿನಂತಿವೆ.

* 18 ವರ್ಷದಿಂದ 45 ವರ್ಷದ ಒಳಗಿನವರಾಗಿರಬೇಕು.

* ಭಜನೆಯಲ್ಲಿ ರಾಗ, ತಾಳ, ಲಯದ ಜ್ಞಾನವುಳ್ಳವರಾಗಿರಬೇಕು.

* ಇದುವರೆಗಿನ ಯಾವುದೇ ಭಜನಾ ಕಮ್ಮಟದಲ್ಲಿ ಭಾಗವಹಿಸದೇ ಇರುವವರಾಗಿರಬೇಕು.

* ಒಂದು ಭಜನಾ ಮಂಡಳಿಯಿಂದ 2 ಜನ ಶಿಬಿರಾರ್ಥಿಗಳಿಗೆ ಮಾತ್ರ ಅವಕಾಶ.

* ತಾವು ಕಲಿತು, ಇನ್ನೊಬ್ಬರಿಗೆ ಕಲಿಸಿಕೊಡುವವರಾಗಿರಬೇಕು.

ಆಸಕ್ತರು ಸೆಪ್ಟೆಂಬರ್ 10ರ ಮೊದಲು ಸಂಬಂಧಪಟ್ಟ ಪದಾಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಭಜನಾ ಕಮ್ಮಟದ ಸಂಚಾಲಕ ಟಿ. ಸುಬ್ರಹ್ಮಣ್ಯ ಪ್ರಸಾದ್ ಹಾಗೂ ಭಜನಾ ಕಮ್ಮಟದ ಕಾರ್ಯದರ್ಶಿ ವೀರು ಶೆಟ್ಟಿಯವರು ತಿಳಿಸಿದ್ದಾರೆ. ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ : 9632064164, 8130132835, 9663464648

Advertisement
Next Article