For the best experience, open
https://m.bcsuddi.com
on your mobile browser.
Advertisement

ಶ್ರೀ ಅನಂತಪುರ ದೇವಸ್ಥಾನದ ಭಕ್ತರಿಗೆ ಸಂಪೂರ್ಣ ದರ್ಶನ ನೀಡಿದ ಮೊಸಳೆ ಮರಿ ಬಬಿಯಾ

12:20 PM Jun 16, 2024 IST | Bcsuddi
ಶ್ರೀ ಅನಂತಪುರ ದೇವಸ್ಥಾನದ ಭಕ್ತರಿಗೆ ಸಂಪೂರ್ಣ ದರ್ಶನ ನೀಡಿದ ಮೊಸಳೆ ಮರಿ ಬಬಿಯಾ
Advertisement

ಕಾಸರಗೋಡು: ಸರೋವರ ಕ್ಷೇತ್ರ ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ತಿಂಗಳ ಹಿಂದೆ ಪ್ರಥಮ ಬಾರಿಗೆ ಕಾಣಿಸಿಕೊಂಡ ಬಬಿಯಾ-3 ಹೆಸರಿನ ಮೊಸಳೆ ಮರಿ ಜೂನ್ 14ರ ಸಂಜೆ ಇಲ್ಲಿನ ಎತ್ತರದ ಜಾಗದಲ್ಲಿ ಭಕ್ತರಿಗೆ ಮೊದಲ ಸಲ ಸಂಪೂರ್ಣ ದರ್ಶನ ನೀಡಿತು.

ದೇವಾಲಯದ ಕೊಳದಲ್ಲಿ ಸುಮಾರು 80 ವರ್ಷಗಳ ಕಾಲ ವಾಸಿಸುತ್ತಿದ್ದ ಮೂಲ ಬಬಿಯಾ ಮೊಸಳೆ 2022ರ ಅಕ್ಟೋಬರ್ 9 ರಂದು ಸಾವನ್ನಪ್ಪಿತು. ಬಬಿಯಾ ಸಾವನ್ನಪ್ಪಿದ ಒಂದು ವರ್ಷದ ನಂತರ, ದೇವಾಲಯದ ಕೊಳದಲ್ಲಿ ಈ ಮೊಸಳೆ ಮರಿ ಕಾಣಿಸಿಕೊಂಡಿದೆ. ಆದರೆ, ಇದುವರೆಗೆ ಯಾವುದೇ ಭಕ್ತರು ಈ ಮೊಸಳೆ ಮರಿಯ ಸಂಪೂರ್ಣ ದರ್ಶನ ಪಡೆದಿರಲಿಲ್ಲ.ಶುಕ್ರವಾರ ಬಬಿಯಾ-3 ಹೆಸರಿನ ಮೊಸಳೆ ಮರಿ ದೇವಸ್ಥಾನದ ಗರ್ಭಗುಡಿಯ ಮುಂಭಾಗದ ಕಲ್ಲಿನ ಮೇಲೆ ವಿಶ್ರಮಿಸುತ್ತಿದ್ದ ದೃಶ್ಯ ಕಂಡು ಬಂದಿತ್ತು. ಈ ವೇಳೆ ದೇವಸ್ಥಾನ ಬಂದ್ ಆಗಿದ್ದು, ಸಂಜೆ ವೇಳೆಗೆ ಆಗಮಿಸಿದ ದೇವಸ್ಥಾನದ ಅರ್ಚಕರು ಫೋಟೋ ತೆಗೆದು ಸಾರ್ವಜನಿಕರೊಂದಿಗೆ ಹಂಚಿಕೊಂಡಿದ್ದಾರೆ.ಈ ಮೊಸಳೆಯು ದೇವರಿಂದ ಕಳುಹಿಸಲ್ಪಟ್ಟಿದೆ ಎಂದು ಇಲ್ಲಿನ ಭಕ್ತರು ನಂಬುತ್ತಾರೆ. ಜೊತೆಗೆ ದೇವಸ್ಥಾನದ ಒಂದು ಮೊಸಳೆ ಸಾವನ್ನಪ್ಪಿದಾಗ ಮತ್ತೊಂದು ಮೊಸಳೆ ಆಗಮಿಸುತ್ತದೆ ಎನ್ನುವುದು ಇಲ್ಲಿನ ನಂಬಿಕೆಯಾಗಿದೆ.

Advertisement
Author Image

Advertisement