ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಶ್ರೀಬಸವೇಶ್ವರ ಕಾನ್ವೆಂಟ್ ಹಿರಿಯಪ್ರಾಥಮಿಕ ಶಾಲೆಯ ಮಾನ್ಯತೆರದ್ದು.!

07:07 AM Jun 13, 2024 IST | Bcsuddi
Advertisement

 

Advertisement

  ದಾವಣಗೆರೆ : ಶ್ರೀ ಬಸವೇಶ್ವರ ಕಾನ್ವೆಂಟ್ ಎಲ್.ಪಿ.ಎಸ್. ಕೆ.ಹೆಚ್.ಬಿ ಕಾಲೋನಿ ದಾವಣಗೆರೆ ಇಲ್ಲಿರುವ ಶಾಲೆಯ ನಿವೇಶನದ ಭೂ ಪರಿವರ್ತನೆಯ ಆದೇಶವನ್ನು ಮಾನ್ಯ ಜಿಲ್ಲಾಧಿಕಾರಿಗಳು ರದ್ದುಪಡಿಸಿದ್ದರೂ ಸಹ ಇಲಾಖೆಗೆ ತಪ್ಪು ದಾಖಲೆ, ಮಾಹಿತಿ ನೀಡಿ ಮಾನ್ಯತೆ ನವೀಕರಣ ಮಾಡಿಸಿಕೊಂಡಿರುವುದನ್ನು ಗಂಭೀರವಾಗಿ ಪರಿಗಣಿಸಿ ಪ್ರಸ್ತುತ ಪ್ರಕರಣವು ನ್ಯಾಯಾಲಯದ ಹಂತದಲ್ಲಿರುವುದರಿಂದ ಶ್ರೀ ಬಸವೇಶ್ವರ ಕಾನ್ವೆಂಟ್ ಎಲ್.ಸಿ.ಎಸ್. ಕೆ.ಎಚ್.ಬಿ ಕಾಲೋನಿ, ದಾವಣಗೆರೆ ಈ ಸಂಸ್ಥೆಗೆ 1 ರಿಂದ 8 ನೇ ತರಗತಿಯವರೆಗೆ ನೀಡಲಾದ ಮಾನ್ಯತೆಯನ್ನು ಹಿಂಪಡೆಯಲು ಆದೇಶಿಸಿಲಾಗಿದೆ.

ಸಾರ್ವಜನಿಕರು ಹಾಗೂ ಪೋಷಕರು ಈ ಶಾಲೆಗೆ ಪ್ರಸಕ್ತ ಸಾಲಿಗೆ ಮಕ್ಕಳನ್ನು ದಾಖಲು ಮಾಡಬಾರದೆಂದು ಶಾಲಾ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.

Tags :
ಶಾಲೆಯ ಮಾನ್ಯತೆರದ್ದು
Advertisement
Next Article