For the best experience, open
https://m.bcsuddi.com
on your mobile browser.
Advertisement

ಶೃಂಗೇರಿ ಶಾರದೆ ದರ್ಶನಕ್ಕೆ ಹೋಗುವ ಭಕ್ತರಿಗೆ ಈ ಡ್ರೆಸ್ ಕೋಡ್ ಕಡ್ಡಾಯ.!

08:11 AM Jul 21, 2024 IST | Bcsuddi
ಶೃಂಗೇರಿ ಶಾರದೆ ದರ್ಶನಕ್ಕೆ ಹೋಗುವ ಭಕ್ತರಿಗೆ ಈ ಡ್ರೆಸ್ ಕೋಡ್ ಕಡ್ಡಾಯ
Advertisement

ಚಿಕ್ಕಮಗಳೂರು: ಶೃಂಗೇರಿ ಶಾರದಾ ದೇವಿಯ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ವಸ್ತ್ರಸಂಹಿತೆಯನ್ನು ಶಾರದಾ ಪೀಠ ರೂಪಿಸಿದ್ದು, ಆಗಸ್ಟ್ 15ರಿಂದ ಜಾರಿಗೆ ಬರಲಿದೆ.!

ಭಾರತೀಯ ಸಾಂಪ್ರದಾಯಿಕ ಉಡುಗೆಯಲ್ಲಿ ಭಕ್ತರು ದರ್ಶನಕ್ಕೆ ಬರಬೇಕು. ಪುರುಷರು ಧೋತಿ, ಶಲ್ಯ ಮತ್ತು ಉತ್ತರೀಯ, ಮಹಿಳೆಯರು ಸೀರೆ-ರವಿಕೆ, ಸಲ್ವಾರ್ ಜೊತೆಗೆ ದುಪ್ಪಟ್ಟ ಅಥವಾ ಲಂಗ ದಾವಣಿ ಧರಿಸಲು ಅವಕಾಶ ಇದೆ.

Advertisement

ಭಾರತೀಯ ಸಂಪ್ರದಾಯವಲ್ಲದ ಉಡುಗೆ ತೊಟ್ಟು ಬಂದವರಿಗೆ ಮಹಾ ಮಂಟಪ, ಗುರು ನಿವಾಸ, ಪಾದಪೂಜೆ, ಗುರುಗಳ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಹೊರಗಿನ ಪ್ರಾಕಾರದಿಂದಲೇ ದೇವರ ದರ್ಶನ ಪಡೆಯಬೇಕು ಎಂದು ಶೃಂಗೇರಿ ಶಾರದಾ ಪೀಠದ ಆಡಳಿತಾಧಿಕಾರಿ ಪ್ರಕಟಣೆ ಹೊರಡಿಸಿದ್ದಾರೆ.!

Tags :
Author Image

Advertisement