ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಶುಂಠಿ, ಬೆಳ್ಳುಳಿಯನ್ನು ರೆಫ್ರಿಜರೇಟರ್‌ನಲ್ಲಿ ಇಡಬೇಕೇ ಅಥವಾ ಬೇಡವೇ?

09:08 AM Oct 05, 2024 IST | BC Suddi
Advertisement

ನೀವು ಮಾರ್ಕೇಟ್‌ನಿಂದ ಸಾಕಷ್ಟು ಶುಂಠಿಯನ್ನು ತಂದಿದ್ದು ಅದನ್ನು ತಿಂಗಳುಗಟ್ಟಲೆ ಫ್ರೆಶ್‌ ಆಗಿಡಲು ಬಯಸಿದರೆ ಅದನ್ನು ರೆಫ್ರಿಜರೇಟರ್‌ನಲ್ಲಿ ಕೂಡ ಸಂಗ್ರಹಿಸಬಹುದು. ಇದನ್ನು ರೆಫ್ರಿಜರೇಟರ್‌ನಲ್ಲಿ ಇರಿಸಿದಾಗ ಶುಂಠಿ ಹಲವು ಬಾರಿ ಒಣಗುತ್ತದೆ ಅಥವಾ ತೇವಾಂಶಕ್ಕೆ ಒಡ್ಡಿಕೊಳ್ಳುವುದರಿಂದ ಕೊಳೆಯುತ್ತದೆ,ಶುಂಠಿಯ ಸಿಪ್ಪೆ ಸುಲಿದ ನಂತರ ಅಥವಾ ತುರಿದ ನಂತರ ಅದನ್ನು ತಕ್ಷಣ ಬಳಸಿ, ಅರ್ಧ ಕತ್ತರಿಸಿದ ಶುಂಠಿ ಬೇಗನೆ ಹಾಳಾಗುತ್ತದೆ. ಶುಂಠಿಯನ್ನು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಬಹುದು.

Advertisement

ಆದರೆ, ದೀರ್ಘಾವಧಿಯ ಸಂಗ್ರಹಣೆ ಅವಧಿಯನ್ನು ಖಚಿತಪಡಿಸಿಕೊಳ್ಳಲು ಮತ್ತು ಹಾಳಾಗುವುದನ್ನು ತಡೆಯಲು, ಶುಂಠಿಯನ್ನು ತೊಳೆದು ಒಣಗಿಸಿ ಮತ್ತು ಗಾಳಿಯಾಡದ ಡಬ್ಬದಲ್ಲಿ ಸಂಗ್ರಹಿಸಿಡಬೇಕು. ಶುಂಠಿಯನ್ನು ಹೆಚ್ಚು ಹೊತ್ತು ತೆರೆದರೆ ಒಣಗುತ್ತದೆ. ಕೆಲವರು ಒದ್ದೆಯಾದ ಶುಂಠಿಯನ್ನು ಫ್ರಿಡ್ಜ್‌ನಲ್ಲಿ ಇಡುತ್ತಾರೆ. ಈ ರೀತಿ ಮಾಡುವುದರಿಂದ ಶುಂಠಿ ಕರಗಲು ಪ್ರಾರಂಭವಾಗುತ್ತದೆ ಅಥವಾ ಬೂಸ್ಟ್ ಹಿಡಿಯುತ್ತದೆ.

ಶುಂಠಿಯನ್ನು ಸಂಗ್ರಹಿಸಲು ಉತ್ತಮ ಮಾರ್ಗವೆಂದರೆ ಅದನ್ನು ಚೆನ್ನಾಗಿ ತೊಳೆದು ಒಣಗಲು ಬಿಡಬೇಕು. ಶುಂಠಿ ಒಣಗಿದ ನಂತರ ಡಬ್ಬದಲ್ಲಿ ಕಾಗದವನ್ನು ಹಾಕಿ ಶುಂಠಿಯನ್ನು ಇರಿಸಬೇಕು. ಈ ರೀತಿ ಮಾಡುವುದರಿಂದ ಶುಂಠಿ ತಿಂಗಳುಗಟ್ಟಲೆ ಕೆಡುವುದಿಲ್ಲ. ಅಪ್ಪಿತಪ್ಪಿಯೂ ಬೆಳ್ಳುಳ್ಳಿಯನ್ನು ರೆಫ್ರಿಜರೇಟರ್‌ನಲ್ಲಿ ಇಡಬಾರದು. ಸಿಪ್ಪೆ ಸುಲಿದ ಬೆಳ್ಳುಳ್ಳಿಯನ್ನು ಎಂದಿಗೂ ರೆಫ್ರಿಜರೇಟರ್‌ನಲ್ಲಿ ತೆರೆದಿಡಬೇಡಿ. ಇದರಿಂದ ಫ್ರಿಡ್ಜ್‌ನಲ್ಲಿಟ್ಟ ವಸ್ತುಗಳಲ್ಲಿ ಬೆಳ್ಳುಳ್ಳಿ ವಾಸನೆ ಬರಲಾರಂಭಿಸುತ್ತದೆ.

ನೀವು ಸಿಪ್ಪೆ ಸುಲಿದ ಬೆಳ್ಳುಳ್ಳಿಯನ್ನು ಫ್ರಿಜ್‌ನಲ್ಲಿ ಇಡಲು ಬಯಸಿದರೆ, ಅದನ್ನು ಗಾಳಿಯಾಡದ ಬಿಗಿಯಾದ ಡಬ್ಬದಲ್ಲಿ ಮುಚ್ಚಿಡಿ. ಬೆಳ್ಳುಳ್ಳಿಯನ್ನು ರೆಫ್ರಿಜರೇಟರ್‌ನಲ್ಲಿ ಹೆಚ್ಚು ಕಾಲ ಇಡುವುದರಿಂದ ಮೊಳಕೆಯೊಡೆಯಬಹುದು. ಬೆಳ್ಳುಳ್ಳಿಯನ್ನು ರುಬ್ಬಿಕೊಂಡು ಪೇಸ್ಟ್ ಮಾಡಿ ಶೇಖರಿಸಿಟ್ಟರೆ ಉತ್ತಮ. ರೆಫ್ರಿಜಿರೇಟರ್‌ನಲ್ಲಿ ಬೆಳ್ಳುಳ್ಳಿಯನ್ನು ಇರಿಸಿದರೆ ಅದು ರಬ್ಬರ್‌ನಂತಾಗುತ್ತದೆ. ರೆಫ್ರಿಜಿರೇಟರ್‌ನಲ್ಲಿ ಬೆಳ್ಳುಳ್ಳಿಯನ್ನು ಸಂಗ್ರಹಿಸುವುದರಿಂದ ಬೂಸ್ಟ್ ಹಿಡಿಯಲು ಕಾರಣವಾಗಬಹುದು. ಬೆಳ್ಳುಳ್ಳಿಯನ್ನು ತರಕಾರಿಗಳೊಂದಿಗೆ ಇಟ್ಟುಕೊಂಡರೆ, ಅದು ಇತರ ತರಕಾರಿಗಳಲ್ಲಿ ಬೆಳ್ಳುಳ್ಳಿಯ ವಾಸನೆಯನ್ನು ಉಂಟುಮಾಡಬಹುದು.

Advertisement
Next Article